ETV Bharat / technology

ಪರಿಸರಕ್ಕೆ ಒತ್ತು! ರೈಲ್​ ಮೂಲಕ 5 ಲಕ್ಷ ಕಾರು ಸಾಗಾಟ: 630 ಲಕ್ಷ ಲೀಟರ್​ ಇಂಧನ ಉಳಿಸಿದ ಮಾರುತಿ ಕಂಪನಿ - MARUTI SAVED 63 MILLION LITERS FUEL

Maruti Suzuki saved 63 million liters fuel: ಮಾರುತಿ ಸುಜುಕಿ ಯಾವಾಗಲೂ ಮಾರಾಟ ಮತ್ತು ಮಾರ್ಕೆಟಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿದೆ. ಮಾರುತಿ ಲಾಭಕ್ಕಾಗಿ ಮಾತ್ರವಲ್ಲದೆ ಪರಿಸರಕ್ಕೆ ಹಾನಿಯಾಗದ ಕೆಲಸಗಳನ್ನು ಮಾಡಲು ಸಹ ಕಾಳಜಿ ವಹಿಸುತ್ತದೆ.

MARUTI SUZUKI SETS NEW RECORD  MARUTI 5 LAKH CARS DISPATCH BY RAIL  MARUTI SUZUKI  MARUTI SUZUKI CARS SELL
ರೈಲ್​ ಮೂಲಕ 5 ಲಕ್ಷ ಕಾರು ಸಾಗಾಟ (Photo Credit: Maruti Suzuki)
author img

By ETV Bharat Tech Team

Published : June 6, 2025 at 2:28 PM IST

2 Min Read

Maruti Suzuki saved 63 million liters fuel: ದೇಶೀಯ ಕಾರು ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಮಾರಾಟದಲ್ಲಿ ನಂಬರ್ ಒನ್ ಆಗಿದೆ. ಲಾಭಕ್ಕಾಗಿ ಮಾತ್ರವಲ್ಲದೆ ಪರಿಸರಕ್ಕೆ ಹಾನಿಯಾಗದಂತೆಯೂ ಮಾರುತಿ ಕಾಳಜಿ ವಹಿಸುತ್ತದೆ. ಗ್ರಾಹಕರೇ ತನ್ನ ರಾಜರು ಎಂದು ನಂಬುವ ಈ ಕಂಪನಿಯು ಈಗ ಒಂದು ಸಂಚಲನ ಸುದ್ದಿಯನ್ನು ಬಹಿರಂಗಪಡಿಸಿದೆ. ಕಳೆದ ಹಣಕಾಸು ವರ್ಷದಲ್ಲಿ ಭಾರತೀಯ ರೈಲ್ವೆ ಮೂಲಕ 5 ಲಕ್ಷ ಕಾರುಗಳನ್ನು ಸಾಗಿಸಿದೆ ಎಂದು ಅದು ಹೇಳಿದೆ. ಇದರಿಂದ ಮಾರುತಿ ಎಷ್ಟು ಲಾಭ ಗಳಿಸಿದೆ ಎಂದು ತಿಳಿಯೋಣಾ ಬನ್ನಿ..

ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಶೇಕಡಾ 50 ರಷ್ಟು ಪಾಲನ್ನು ಹೊಂದಿರುವ ಈ ದೈತ್ಯ, ಭಾರತೀಯ ರೈಲ್ವೆ ಸರಕು ಸಾಗಣೆ ವ್ಯವಸ್ಥೆಯನ್ನು ಎಷ್ಟು ಬಳಸಿದೆ ಎಂಬುದನ್ನು ತೋರಿಸುವ ವರದಿಗಳನ್ನು ಬಿಡುಗಡೆ ಮಾಡಿದೆ. ಕಳೆದ 2024-25ರ ಹಣಕಾಸು ವರ್ಷದಲ್ಲಿ ಮಾರುತಿ ಕಂಪನಿ ಭಾರತೀಯ ರೈಲ್ವೆ ಮೂಲಕ ಐದು ಲಕ್ಷ ವಾಹನಗಳನ್ನು ಸಾಗಿಸಿದೆ.

ಭಾರತೀಯ ರೈಲ್ವೆಯ ಸಹಾಯದಿಂದ ಇದು 1,80,000 ಟನ್‌ಗಳಿಗಿಂತ ಹೆಚ್ಚು ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸಾಧ್ಯವಾಗಿದೆ. ಅಲ್ಲದೆ ಮಾರುತಿ ಸುಜುಕಿ 630 ಲಕ್ಷ ಲೀಟರ್‌ಗಳಿಗಿಂತ ಹೆಚ್ಚು ಇಂಧನವನ್ನು ಉಳಿಸಲು ಸಾಧ್ಯವಾಗಿದೆ ಎಂದು ಅಂದಾಜಿಸಿದೆ. ಮಾರುತಿ ದೇಶಾದ್ಯಂತ ಸುಮಾರು 600 ನಗರಗಳಿಗೆ ರೈಲು ಮೂಲಕ ವಾಹನಗಳನ್ನು ಸಾಗಿಸುತ್ತದೆ. ಇದು ಮಾಲಿನ್ಯವನ್ನು ಹೆಚ್ಚು ಕಡಿಮೆ ಮಾಡಲು ಸಾಧ್ಯವಾಗುತ್ತಿರುವುದು ಒಂದು ವಿಶಿಷ್ಟ ಲಕ್ಷಣವಾಗಿದೆ.

ಮಾರುತಿ ಸುಜುಕಿಯ ಮಾರಾಟದ ಅಂಕಿಅಂಶಗಳನ್ನು ನೋಡಿದರೆ.. ಮಾರುತಿಯ ಕ್ರಾಸ್ಒವರ್ SUV ಫ್ರಾಂಕ್ಸ್ ಮೇ 2025 ರಲ್ಲಿ 13,584 ಯುನಿಟ್‌ಗಳ ಮಾರಾಟದೊಂದಿಗೆ ಎಂಟನೇ ಸ್ಥಾನದಲ್ಲಿದೆ. ಇದು ಮೇ 2024 ರಲ್ಲಿ 12,681 ಯುನಿಟ್‌ಗಳಿಗೆ ಹೋಲಿಸಿದರೆ 7 ಪ್ರತಿಶತದಷ್ಟು ಬೆಳವಣಿಗೆಯಾಗಿದೆ. ಮಾರುತಿಯ ಟಾಲ್‌ಬಾಯ್ ಹ್ಯಾಚ್‌ಬ್ಯಾಕ್ ವ್ಯಾಗನ್‌ಆರ್ 13,949 ಯುನಿಟ್‌ಗಳ ಮಾರಾಟದೊಂದಿಗೆ 7ನೇ ಸ್ಥಾನದಲ್ಲಿದೆ. ಆದರೂ 12 ತಿಂಗಳ ಹಿಂದೆ 14,492 ಹೊಸ ಗ್ರಾಹಕರನ್ನು ಪಡೆದುಕೊಂಡಿದ್ದ ಈ ಕಾರಿನ ಮಾರಾಟವು ಶೇಕಡಾ 4 ರಷ್ಟು ಕಡಿಮೆಯಾಗಿದೆ.

ಮೇ 2024 ರಲ್ಲಿ 19,393 ಯುನಿಟ್‌ಗಳನ್ನು ಮಾರಾಟ ಮಾಡಿದ ಮಾರುತಿ ಸುಜುಕಿ ಸ್ವಿಫ್ಟ್ ಭಾರಿ ಕುಸಿತವನ್ನು ಕಂಡಿತು (ಶೇಕಡಾ 27). ಸ್ವಿಫ್ಟ್ ಕಳೆದ ತಿಂಗಳು ಕೇವಲ 14,135 ಯುನಿಟ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಯಿತು. 2024ರ ಮೇ ತಿಂಗಳಲ್ಲಿ 14,186 ಯುನಿಟ್‌ಗಳನ್ನು ಮಾರಾಟ ಮಾಡಿದ ಮಾರುತಿಯ 4 ಮೀಟರ್‌ಗಿಂತ ಕಡಿಮೆ SUV ಬ್ರೆಝಾ ಕಳೆದ ತಿಂಗಳು ತನ್ನ ಮಾರಾಟವನ್ನು 15,566 ಯುನಿಟ್‌ಗಳಿಗೆ ಹೆಚ್ಚಿಸಿಕೊಂಡು 3ನೇ ಸ್ಥಾನವನ್ನು ತಲುಪಿತು.

ಕಳೆದ ತಿಂಗಳು ಮಾರುತಿ ಟೊಯೋಟಾಗೆ ಪೂರೈಸಿದ ವಾಹನಗಳ ಸಂಖ್ಯೆ ಸ್ವಲ್ಪ ಕಡಿಮೆಯಾಯಿತು. 2024 ರ ಮೇ ತಿಂಗಳಲ್ಲಿ 10,490 ಯುನಿಟ್‌ಗಳಿಂದ ಮಾರಾಟವು 10,168 ಯುನಿಟ್‌ಗಳಿಗೆ ಕುಸಿದಿದೆ. ಆದರೂ ರಫ್ತುಗಳಲ್ಲಿ ಪ್ರಭಾವಶಾಲಿ ಬೆಳವಣಿಗೆಯೊಂದಿಗೆ ಮಾರುತಿ ವಿವಿಧ ವಿಭಾಗಗಳಲ್ಲಿ ಈ ಕುಸಿತವನ್ನು ನಿವಾರಿಸುವಲ್ಲಿ ಯಶಸ್ವಿಯಾಗಿದೆ.

2025 ರ ಮೇ ತಿಂಗಳಲ್ಲಿ ಮಾರುತಿಯ ರಫ್ತು ಶೇ.80 ರಷ್ಟು ಹೆಚ್ಚಾಗಿದೆ. ಕಂಪನಿಯು 2025 ರ ಮೇ ತಿಂಗಳಲ್ಲಿ 31,219 ವಾಹನಗಳನ್ನು ವಿದೇಶಕ್ಕೆ ಕಳುಹಿಸಿತು. ಕಳೆದ ವರ್ಷ ಮೇ ತಿಂಗಳಲ್ಲಿ ಇದು ಕೇವಲ 17,367 ಯುನಿಟ್‌ಗಳಷ್ಟಿತ್ತು.

ಗ್ರ್ಯಾಂಡ್ ವಿಟಾರಾವನ್ನು ಆಧರಿಸಿ ಹೊಸ ಮಾರುತಿ 7-ಸೀಟರ್​ SUV ಬರುತ್ತಿದೆ ಎಂದು ಹಲವಾರು ವರದಿಗಳು ಬಂದಿವೆ. ಇತ್ತೀಚಿನ ಸಭೆಯಲ್ಲಿ ಮಾರುತಿ ಅಧ್ಯಕ್ಷ ಆರ್.ಸಿ. ಭಾರ್ಗವ ಅವರು, ಈ ಆರ್ಥಿಕ ವರ್ಷದಲ್ಲಿ ಮಾರುತಿ ಹೊಸ SUV ಅನ್ನು ಬಿಡುಗಡೆ ಮಾಡಲಿದೆ ಎಂದು ದೃಢಪಡಿಸಿದರು. ಮಾರುತಿ ಸುಜುಕಿ ಜನ ಸಾಮಾನ್ಯರಿಗೆ ಹೊಸ 5-ಸೀಟರ್​ SUV ಅನ್ನು ಪರಿಚಯಿಸಲು ಯೋಜಿಸುತ್ತಿದೆ.

ಕಳೆದ ವರ್ಷ ಮಾರುತಿ ಭಾರತದಲ್ಲಿ 'ಎಸ್ಕುಡೊ' ಎಂಬ ಹೆಸರನ್ನು ಟ್ರೇಡ್‌ಮಾರ್ಕ್ ಮಾಡಿತ್ತು. ಸುಜುಕಿಯ ತವರು ದೇಶವಾದ ಜಪಾನ್ ಸೇರಿದಂತೆ ಅನೇಕ ವಿದೇಶಿ ಮಾರುಕಟ್ಟೆಗಳಲ್ಲಿ ಗ್ರ್ಯಾಂಡ್ ವಿಟಾರಾವನ್ನು ಈ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ.

ಓದಿ: ಬಹುನಿರೀಕ್ಷಿತ ಟಾಟಾ ಅವಿನ್ಯಾ ಇವಿ ಇನ್ನೂ ಎರಡು ವರ್ಷ ವಿಳಂಬ: ಕಾರಣವೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.