Mahindra Eelectric SUV Booking Open: ದೇಶಿಯ ಕಾರು ತಯಾರಕ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಇತ್ತೀಚೆಗೆ ತನ್ನ ಎರಡು ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡಿದೆ. ಇವುಗಳನ್ನು ನವೆಂಬರ್ 2024ರಲ್ಲಿ 'XEV 9E' ಮತ್ತು 'BE 6' ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಿತ್ತು. ಎಲೆಕ್ಟ್ರಿಕ್ ಎಸ್ಯುವಿಗಳ ಬೆಲೆಗಳನ್ನು ಇತ್ತೀಚೆಗೆ ಬಹಿರಂಗಪಡಿಸಿದೆ.
ಹೊಸ ಎಲೆಕ್ಟ್ರಿಕ್ ಕಾರುಗಳಿಗೆ ಬುಕಿಂಗ್ಸ್ ಆರಂಭ: ಗ್ರಾಹಕರು ಇವುಗಳನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಬುಕ್ ಮಾಡಬಹುದು. ಮಹೀಂದ್ರಾ ಒದಗಿಸಿದ ಮಾಹಿತಿ ಪ್ರಕಾರ, ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳ ಬುಕಿಂಗ್ ಫೆಬ್ರವರಿ 14, 2025ರಂದು ಬೆಳಗ್ಗೆ 8 ಗಂಟೆಯಿಂದ ಪ್ರಾರಂಭವಾಗಿದೆ. ಆದರೂ ಕಂಪನಿಯು ಇವುಗಳ ಡೆಲಿವರಿಯನ್ನು ನಂತರ ಪ್ರಾರಂಭಿಸುತ್ತದೆ. ಡೆಲಿವರಿಯ ಸಮಯಸೂಚಿಗಳು ಈ ಕೆಳಗಿನಂತಿವೆ.
ಪ್ಯಾಕ್ ಒನ್ ಮತ್ತು ಪ್ಯಾಕ್ ಒನ್ ಅಬೋವ್ ಡೆಲಿವರಿಗಳು ಆಗಸ್ಟ್ದಿಂದ ಪ್ರಾರಂಭ. ಪ್ಯಾಕ್ ತ್ರೀ ಸೆಲೆಕ್ಟ್ ರೂಪಾಂತರದ ಡೆಲಿವರಿಗಳು ಜೂನ್ನಲ್ಲಿ ಪ್ರಾರಂಭ. ಆದರೆ ಪ್ಯಾಕ್ ಟು ರೂಪಾಂತರವು ಜುಲೈನಲ್ಲಿ ಪ್ರಾರಂಭವಾಗುತ್ತದೆ. ಆದ್ರೆ ಪ್ಯಾಕ್ ತ್ರೀ ಡೆಲಿವರಿ ಮಾರ್ಚ್ 2025ರಿಂದ ಪ್ರಾರಂಭವಾಗಲಿದೆ.
ಮಹೀಂದ್ರಾ BE6 ಮತ್ತು XEV 9e ರೂಪಾಂತರಗಳು: ಮಹೀಂದ್ರಾ BE6 ಕಾರು 5 ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. ಮಾರುಕಟ್ಟೆಯಲ್ಲಿ ಇದರ ಬೆಲೆ ರೂ.18.90 ಲಕ್ಷ ರೂ.ಗಳಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ. ಇದರ ಉನ್ನತ ರೂಪಾಂತರದ ಬೆಲೆ ರೂ. 26.90 ಲಕ್ಷ (ಎಕ್ಸ್ ಶೋ ರೂಂ) ಇದೆ.
ಕಂಪನಿಯು ತನ್ನ XEV 9e ಕಾರನ್ನು 4 ರೂಪಾಂತರಗಳಲ್ಲಿ ಬಿಡುಗಡೆ ಮಾಡಿದೆ. ಇದರ ಬೆಲೆ ರೂ. 21.90 ಲಕ್ಷದಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ. ಇದರ ಉನ್ನತ ರೂಪಾಂತರದ ಬೆಲೆ ರೂ. 30.50 ಲಕ್ಷ (ಎಕ್ಸ್ ಶೋ ರೂಂ) ದವರೆಗೆ ಇದೆ.
ಮಾರುಕಟ್ಟೆಯಲ್ಲಿ ಪ್ರತಿಸ್ಪರ್ಧಿಗಳು: ಈ ಎರಡು ಮಹೀಂದ್ರಾ ಕಾರುಗಳು ಹುಂಡೈ ಕ್ರೆಟಾ ಇವಿ, ಟಾಟಾ ಕರ್ವ್ ಇವಿ, ಎಂಜಿ ವಿಂಡ್ಸರ್ ಇವಿ ಮುಂತಾದ ಕಾರುಗಳಿಗೆ ಕಠಿಣ ಸ್ಪರ್ಧೆಯನ್ನು ನೀಡಬಲ್ಲವು.
ಮಹೀಂದ್ರಾ BE6 ಮತ್ತು XEV 9e ವಿಶೇಷತೆಗಳು:
ಫೀಚರ್ಸ್ | ಮಹೀಂದ್ರಾ BE6 | ಮಹೀಂದ್ರಾ XEV 9e |
ಬ್ಯಾಟರಿ ಆಪ್ಷನ್ | 59 kWh, 79 kWh | 59 kWh, 79 kWh |
ರೇಂಜ್ | 556 km (59 kWh), 682 km (79 kWh) | 542 km (59 kWh), 656 km (79 kWh) |
ಮೋಟಾರ್ ಪವರ್ | 210 kW | 210 kW |
ಗರಿಷ್ಟ ಟಾರ್ಕ್ | 380 Nm | 380 Nm |
ಚಾರ್ಜಿಂಗ್ ಟೈಮ್ (DC) | 20 min (20-80%) | 20 min (20-80%) |
ಚಾರ್ಜಿಂಗ್ ಟೈಮ್ (AC) | 8-11.7 hours (0-100%) | 8-11.7 hours (0-100%) |
ಆಯಾಮಗಳು (L x W x H) | 4371 mm x 1907 mm x 1627 mm | 4371 mm x 1907 mm x 1627 mm |
ಗ್ರೌಂಡ್ ಕ್ಲಿಯೆರೆನ್ಸ್ | 207 mm | 207 mm |
ಸೀಟಿಂಗ್ ಕೆಪಾಸಿಟಿ | 5 | 5 |
ಬೂಟ್ ಸ್ಪೇಸ್ | 455 liters | 455 liters |
ಪ್ರಮುಖ ಫೀಚರ್ಸ್ |
|
|
ಬೆಲೆ | ₹18.90 - ₹26.90 ಲಕ್ಷಗಳು (ಎಕ್ಸ್ ಶೋರೂಂ ಬೆಲೆ) | ₹21.90 - ₹30.50 ಲಕ್ಷಗಳು (ಎಕ್ಸ್ ಶೋರೂಂ ಬೆಲೆ) |
ಇದನ್ನೂ ಓದಿ: ಭಲೇ ಫೀಚರ್ಸ್ ಪರಿಚಯಿಸಿದ ವಾಟ್ಸ್‌ಆ್ಯಪ್: ರಂಗು ರಂಗಿನಿಂದ ಕೂಡಿದ ಚಾಟ್ ಬಾಕ್ಸ್!