Indian New Smartphone Launch Soon: ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಹೊಸ ಪ್ಲೇಯರ್ ಎಂಟ್ರಿ ಕೊಡಲಿದ್ದಾರೆ. ಈ ಬ್ರ್ಯಾಂಡ್ ಭಾರತದ್ದಾಗಿದ್ದು, ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ನಾವೀಗ ಮಾಧವ್ ಸೇಠ್ ಎಂಬವರು ತರುತ್ತಿರುವ NxtQuantum Shift ತಂತ್ರಜ್ಞಾನದ ಬಗ್ಗೆ ಮಾತನಾಡುತ್ತಿದ್ದೇವೆ.
ಕಂಪನಿ ತನ್ನ ಫೋನ್‌ಗಳನ್ನು Ai+ ಎಂಬ ಬ್ರ್ಯಾಂಡ್ ಹೆಸರಿನಲ್ಲಿ ಬಿಡುಗಡೆ ಮಾಡುತ್ತಿದೆ. ಫೋನ್‌ಗಳನ್ನು ಭಾರತದಲ್ಲೇ ತಯಾರಿಸಿ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಲಾಗಿದೆ. ಈ ಸಾಧನಗಳು ನಿಮ್ಮ ಡೇಟಾ ಮತ್ತು ಗೌಪ್ಯತೆಯ ಬಗ್ಗೆ ವಿಶೇಷ ಕಾಳಜಿ ವಹಿಸುತ್ತವೆ. ಫೋನ್‌ಗಳ ಪೈಕಿ ಒಂದನ್ನು AI+ Nova 2 5G ಎಂದು ಹೆಸರಿಸಿದೆ.
ಈ ವಿವರಗಳು ಹೊರಬಿದ್ದಿವೆ: ಫ್ಲಿಪ್‌ಕಾರ್ಟ್‌ನಲ್ಲಿ Ai+ ನ ಮುಂಬರುವ ಫೋನ್‌ಗಳ ಮೈಕ್ರೋಸೈಟ್ ಅನ್ನು ನೀವು ನೋಡಬಹುದು. ಕಂಪನಿಯ ಬ್ಯಾನರ್‌ನಲ್ಲಿ, ‘ಭಾರತದಲ್ಲಿ ವಿನ್ಯಾಸ, ಭಾರತದಲ್ಲಿ ತಯಾರಿ, ಜಗತ್ತಿಗೆ ಸಿದ್ಧ’ ಎಂದು ಬರೆಯಲಾಗಿದೆ. ಫೋನ್ ಪರ್ಪಲ್, ಪೀಚ್, ಬ್ಲ್ಯೂ, ಗ್ರೀನ್ ಮತ್ತು ಬ್ಲ್ಯಾಕ್ ಬಣ್ಣಗಳಲ್ಲಿ ಗ್ರಾಹಕರಿಗೆ ಸಿಗಲಿದೆ. ರಿಯರ್ ಪ್ಯಾನೆಲ್‌ನಲ್ಲಿ ಮೂರು ದೊಡ್ಡ ಲೈನ್ಗಳಿವೆ. ಫೋನ್‌ನ ಪವರ್ ಬಟನ್‌ಗೆ ಬಾಡಿಗಿಂತ ವಿಭಿನ್ನ ಬಣ್ಣ ನೀಡಲಾಗಿದೆ.
What do you prioritize on your smartphone—convenience or security?
— Madhav Sheth (@MadhavSheth1) June 23, 2025
Every year, over 150 million Indians buy smartphones. But 75% of them come from Chinese brands. Less than 5% are Indian.
It’s time for an Indian brand to go global.
Ai+ smartphones.
Launching soon.
Designed in…
50MP ಕ್ಯಾಮೆರಾ: ಚೌಕಾಕಾರದ ಕ್ಯಾಮೆರಾ ಮಾಡ್ಯೂಲ್ ಡ್ಯುಯಲ್ ಲೆನ್ಸ್‌ಗಳು ಮತ್ತು LED ಫ್ಲ್ಯಾಷ್‌ಲೈಟ್ ಹೊಂದಿದೆ. ಅದರ ಮೇಲಿನ ಟೆಕ್ಸ್ಟ್ನಲ್ಲಿ 50MP AI MATRIX CAMERA ಎಂದು ಓದಬಹುದು. ಇದರರ್ಥ ಸ್ಮಾರ್ಟ್‌ಫೋನ್ 50MP ಫ್ರೈಮೆರಿ ಕ್ಯಾಮೆರಾ ಹೊಂದಿರುತ್ತದೆ. ಫೋನ್‌ನ ಕ್ಯಾಮೆರಾ ಮಾಡ್ಯೂಲ್ Asus ROG ಫೋನ್ 9 ಗೆ ಹೋಲುತ್ತದೆ.
NxtQuantum: ಪೇಜ್ನಲ್ಲಿ ಮತ್ತೊಂದು ಫೋನ್ ಸಹ ಗೋಚರಿಸುತ್ತದೆ. ಇದು ಕಂಪನಿ ಎರಡು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತದೆ ಎಂದು ಸ್ಪಷ್ಟಪಡಿಸುತ್ತದೆ. ಸ್ಮಾರ್ಟ್‌ಫೋನ್ ಗ್ಲಾಸಿ ಬ್ಯಾಕ್ ಪ್ಯಾನಲ್‌ನೊಂದಿಗೆ ಬರಬಹುದು. ಇದರಲ್ಲಿ ನೀವು U-ಆಕಾರದ ನಾಚ್ ಅನ್ನು ಪಡೆಯುತ್ತೀರಿ.
NxtQuantum Ai +ನಲ್ಲಿ ವಿಶೇಷವೇನು?: ಫ್ಲಿಪ್‌ಕಾರ್ಟ್‌ನ ಮೈಕ್ರೋಸೈಟ್ ಪ್ರಕಾರ, ಈ ಸ್ಮಾರ್ಟ್‌ಫೋನ್‌ಗಳು ಬಳಕೆದಾರರ ಸುರಕ್ಷತೆಯ ಮೇಲೆ ಕೇಂದ್ರೀಕರಿಸುತ್ತವೆ. ಬ್ರ್ಯಾಂಡ್‌ನ ಫೋನ್‌ಗಳು NxtQuantum OSನಲ್ಲಿ ಕಾರ್ಯನಿರ್ವಹಿಸುತ್ತವೆ. ಈ ಸಾಫ್ಟ್‌ವೇರ್ ಆಂಡ್ರಾಯ್ಡ್ ಅನ್ನು ಆಧರಿಸಿರಬಹುದು. ಈ ಸಾಫ್ಟ್‌ವೇರ್ ಅನ್ನು ಭಾರತೀಯ ಎಂಜಿನಿಯರ್‌ಗಳು ವಿನ್ಯಾಸಗೊಳಿಸಿದ್ದಾರೆ. ಇದರಿಂದಾಗಿ ಜನರು ಬಳಕೆದಾರಸ್ನೇಹಿ ಇಂಟರ್ಫೇಸ್ ಅನ್ನು ಪಡೆಯುತ್ತಾರೆ.
Bold on the outside. Brilliant within.
— Ai+ (@aiplus_official) June 22, 2025
The all-new Ai+Smartphone pairs a striking design, powered by #NxtQuantumOS. Built for speed. Made for India.
Launching, July 2025 on @Flipkart. #AiPlus #BuiltForYou #BuiltForIndia #SmartphoneReimagined #NxtQuantumOS@NxtQuantumOS pic.twitter.com/J10MolmMlc
ವರದಿಗಳ ಪ್ರಕಾರ, ಈ ಫೋನ್‌ಗಳನ್ನು 6GB RAM ಮತ್ತು 128GB ಸ್ಟೋರೇಜ್ನೊಂದಿಗೆ ಬಿಡುಗಡೆ ಮಾಡಬಹುದು. ಬ್ರ್ಯಾಂಡ್ ತನ್ನ ಆರಂಭಿಕ ಮಾದರಿಗಳನ್ನು 10,000 ರೂ.ಗಿಂತ ಕಡಿಮೆ ಬಜೆಟ್‌ನಲ್ಲಿ ಬಿಡುಗಡೆ ಮಾಡುತ್ತದೆ. ಕಂಪನಿಯ ಸ್ಮಾರ್ಟ್‌ಫೋನ್‌ಗಳ ಬೆಲೆ ರೂ. 5,000 ರಿಂದ ರೂ. 8,000 ರವರೆಗೆ ಇರಬಹುದು. ಕಂಪನಿಯು ಜುಲೈನಲ್ಲಿ ತನ್ನ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಿದೆ. ಇದರ ಬೆಲೆ ಇನ್ನೂ ರಿವೀಲ್ ಆಗಿಲ್ಲ.
ಇದನ್ನೂ ಓದಿ: ಸಿಮ್‌ರಹಿತ ಕ್ವಾಂಟಮ್ 5G ಸೇವೆ ಆರಂಭಿಸಿದ BSNL: ಏನಿದು? ಯಾರು ಬಳಸಬಹುದು?