ETV Bharat / technology

ಕಿಯಾದ ಈ ಕಾರ್​ಗೆ 5 ಸ್ಟಾರ್​ ನೀಡಿದ ಎನ್​ಕ್ಯಾಪ್​: ಸುರಕ್ಷತೆಯಲ್ಲಿ ಈ ಕಾರು ಸೂಪರೋ ಸೂಪರ್​! - KIA SYROS GETS 5 STAR SAFETY RATING

Kia Syros Gets 5 Star Safety Rating: ಪ್ರಸ್ತುತ ಭಾರತೀಯ ಕಾರು ಮಾರುಕಟ್ಟೆಯಲ್ಲಿ ಗ್ರಾಹಕರು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಅಂತಹವರಿಗೆ ಕಿಯಾ ಮೋಟಾರ್ಸ್​ನಿಂದ ಒಳ್ಳೆಯ ಸುದ್ದಿಯೊಂದಿದೆ. ಅದರ ಬಗ್ಗೆ ತಿಳಿಯೋಣ ಬನ್ನಿ.

KIA SYROS PRICE  KIA SYROS SAFETY RATING  KIA SYROS SAFETY FEATURES  KIA SYROS BHARAT NCAP TEST
ಕಿಯಾ ಎಸ್​ಯುವಿ ಸೈರಸ್ ಕಾರು ಟೆಸ್ಟಿಂಗ್​​​ (Photo Credit- Bharat NCAP)
author img

By ETV Bharat Tech Team

Published : April 13, 2025 at 9:40 AM IST

2 Min Read

Kia Syros Gets 5 Star Safety Rating: ಕಿಯಾ ಮೋಟಾರ್ಸ್​ನ ಜನಪ್ರಿಯ ಎಸ್​ಯುವಿ 'ಸೈರಸ್' ಈಗ ಸುರಕ್ಷತೆ ವಿಚಾರದಲ್ಲಿ ಟಾಟಾಗೆ ಸವಾಲೊಡ್ಡುತ್ತಿದೆ. ಈ ಕಾರು ಭಾರತ್ NCAP ಕ್ರ್ಯಾಶ್ ಪರೀಕ್ಷೆಯಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಗಳಿಸಿದೆ. ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಈ ಸುರಕ್ಷಿತ SUV ಬಗ್ಗೆ ಮಾಹಿರಿ ಇಲ್ಲಿದೆ.

ಕಿಯಾ ಮೋಟಾರ್ಸ್ ಮಾರಾಟ ಮಾಡುವ 'ಸೈರಸ್' ಎಸ್‌ಯುವಿ ಭಾರತೀಯ ಗ್ರಾಹಕರ ಹೃದಯ ಗೆದ್ದಿದೆ. ಮಾರ್ಚ್ ತಿಂಗಳಲ್ಲಿ ಇದು 5425 ಯುನಿಟ್‌ಗಳ ಮಾರಾಟವನ್ನು ದಾಖಲಿಸಿದೆ. ಇದು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದ್ದು, ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ಇತ್ತೀಚೆಗೆ ದೇಶೀಯ ವಾಹನಗಳಿಗೆ ಸುರಕ್ಷತಾ ಪರೀಕ್ಷೆಗಳನ್ನು ನಡೆಸುವ ಸಂಸ್ಥೆಯಾದ ಭಾರತ್ NCAP (Bharat NCAP) ನಡೆಸಿದ ಕ್ರ್ಯಾಶ್ ಟೆಸ್ಟ್‌ನಲ್ಲಿ ಕಿಯಾ ಸೈರಸ್ ಅನ್ನು ಅತ್ಯುತ್ತಮ ಸುರಕ್ಷತಾ ಕಾರು ಎಂದು ಘೋಷಿಸಲಾಗಿದೆ.

KIA SYROS PRICE  KIA SYROS SAFETY RATING  KIA SYROS SAFETY FEATURES  KIA SYROS BHARAT NCAP TEST
ಕಿಯಾ ಎಸ್​ಯುವಿ ಸೈರಸ್ ಕಾರು ಟೆಸ್ಟಿಂಗ್​​​ (Photo Credit- Bharat NCAP)

ಭಾರತ್ NCAP ನಡೆಸಿದ ಸುರಕ್ಷತಾ ಪರೀಕ್ಷೆಗಳಲ್ಲಿ ವಯಸ್ಕರ ಪ್ರಯಾಣಿಕರ ರಕ್ಷಣೆ ವಿಭಾಗದಲ್ಲಿ ಹೊಸ ಕಿಯಾ ಸೈರಸ್ SUV 32 ಅಂಕಗಳಲ್ಲಿ 30.21 ಅಂಕಗಳನ್ನು ಗಳಿಸಿದೆ. ಮಕ್ಕಳ ನಿವಾಸಿ ರಕ್ಷಣಾ ವಿಭಾಗದಲ್ಲಿ 49ರಲ್ಲಿ 44.42 ಅಂಕಗಳನ್ನು ಪಡೆದುಕೊಂಡಿದೆ. ಈ ಅತ್ಯುತ್ತಮ ಅಂಕದೊಂದಿಗೆ ಕಿಯಾಗೆ ಸೈರಸ್ 5-ಸ್ಟಾರ್ ಸುರಕ್ಷತಾ ರೇಟಿಂಗ್ ಸಿಕ್ಕಿದೆ.

ಕಿಯಾ ಸೈರಸ್ ಕಾರನ್ನು ಮುಂದಿನಿಂದ ಡೈರೆಕ್ಟ್​ ಆಗಿ ಎದುರುಗಡೆಯಿದ್ದ ವಸ್ತುವಿಗೆ ಡಿಕ್ಕಿ ಹೊಡೆಸುವ ಮೂಲಕ ಪರೀಕ್ಷಿಸಲಾಯಿತು. ಈ ಮುಂಭಾಗದ ಇಂಪ್ಯಾಕ್ಟ್ ಪರೀಕ್ಷೆಯಲ್ಲಿ, ಅದು 16ರಲ್ಲಿ 14.21 ಅಂಕಗಳನ್ನು ಗಳಿಸಿತು. ಅದೇ ರೀತಿ ಕಾರಿನ ಎರಡೂ ಬದಿಗಳಲ್ಲಿನ ಡಿಕ್ಕಿ ಹೊಡೆದು ಸೈಡ್​ ಇಂಪ್ಯಾಕ್ಟ್ ಟೆಸ್ಟ್​​​ ನಡೆಸಲಾಯಿತು. ಆಗ ಸೈರಸ್ 16ಕ್ಕೆ 16 ಅಂಕ ಗಳಿಸಿ ಫಸ್ಟ್​ ಕ್ಲಾಸ್​ನಲ್ಲಿ ಪಾಸ್​ ಆಯಿತು.

ಸುರಕ್ಷತೆಗಾಗಿ ಹಲವು ವೈಶಿಷ್ಟ್ಯ: ಕಿಯಾ ಸೈರಸ್ ಎಸ್‌ಯುವಿ ಪ್ರಯಾಣಿಕರ ಸುರಕ್ಷತೆಗಾಗಿ ಹಲವು ಇತ್ತೀಚಿನ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಕಾರು 6 ಏರ್‌ಬ್ಯಾಗ್‌ಗಳು, ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), HSA (ಹಿಲ್ ಸ್ಟಾರ್ಟ್ ಅಸಿಸ್ಟ್), VSM (ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್), ಆಟೋ ಹೋಲ್ಡ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾ ಮುಂತಾದ ಸುರಕ್ಷತಾ ವೈಶಿಷ್ಟ್ಯಗಳನ್ನು ಇದರಲ್ಲಿ ಕಾಣಬಹುದಾಗಿದೆ.

ಕಿಯಾ ಸೈರಸ್ ಕಾರು 8.99 ಲಕ್ಷ ರೂ.ಗಳಿಂದ 17.80 ಲಕ್ಷ ರೂ. ಎಕ್ಸ್ ಶೋ ರೂಂ ಬೆಲೆಯಲ್ಲಿ ಲಭ್ಯವಿದೆ. ಇದು HTK, HTK (O), HTK Plus, HTX, HTX Plusನಂತಹ ವಿವಿಧ ರೂಪಾಂತರಗಳಲ್ಲಿ ಸಿಗಲಿದೆ. ಈ ಕಾರನ್ನು ಸ್ಪಾರ್ಕ್ಲಿಂಗ್ ಸಿಲ್ವರ್, ಗ್ರಾವಿಟಿ ಗ್ರೇ, ಇಂಪೀರಿಯಲ್ ಬ್ಲೂ, ಇಂಟೆನ್ಸ್ ರೆಡ್ ಮತ್ತು ಪ್ಯೂಟರ್ ಆಲಿವ್‌ನಂತಹ ಹಲವು ಆಕರ್ಷಕ ಬಣ್ಣಗಳಲ್ಲಿಯೂ ಖರೀದಿಸಬಹುದಾಗಿದೆ.

ಈ ಕಾರು 1 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಆಪ್ಶನ್​ಗಳನ್ನು ಹೊಂದಿದೆ. ಇದು ಪ್ರತಿ ಲೀಟರ್‌ಗೆ 17.65 ರಿಂದ 20.75 ಕಿ.ಮೀ. ಮೈಲೇಜ್ ನೀಡುತ್ತದೆ. ಹೊಸ ಸೈರಸ್ SUV 3995 mm ಉದ್ದ, 1,800 mm ಅಗಲ ಮತ್ತು 1,665 mm ಎತ್ತರ ಹೊಂದಿದೆ.

ಕಿಯಾ ಸೈರಸ್ 5 ಸೀಟುಗಳನ್ನು ಹೊಂದಿದೆ. ಇದರಲ್ಲಿ ಪ್ರಯಾಣಿಕರು ಆರಾಮವಾಗಿ ಕುಳಿತುಕೊಳ್ಳಬಹುದು. ಹೆಚ್ಚಿನ ಲಗೇಜ್‌ಗಳನ್ನು ಇರಿಸಲು ಈ ಕಾರು 465 ಲೀಟರ್ ಬೂಟ್ ಸ್ಪೇಸ್ ಹೊಂದಿದೆ. ಈ ಕಾರು ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡೈವರ್​ ಡಿಸ್​ಪ್ಲೇಗಾಗಿ ಡ್ಯುಯಲ್ ಸ್ಕ್ರೀನ್ ಸೆಟಪ್, ಆಟೋಮೆಟಿಕ್​ ಕ್ಲೈಮೇಟ್​ ಕಂಟ್ರೋಲ್​, 8-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್‌ನಂತಹ ಹಲವು ಇತ್ತೀಚಿನ ವೈಶಿಷ್ಟ್ಯಗಳನ್ನು ಆನಂದಿಸಬಹುದಾಗಿದೆ.

ಓದಿ: ಯುವಕರನ್ನು ಹುಚ್ಚೆಬ್ಬಿಸುವ ಹಯಾಬುಸಾ ಈಗ ಹೊಸರೂಪದಲ್ಲಿ ಎಂಟ್ರಿ: ಇದರ ಬೆಲೆ, ಫೀಚರ್ಸ್​ ಹೀಗಿವೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.