iPhone SE 4 Launch Date: ಕೊನೆಗೂ ಐಫೋನ್ ಎಸಿಇ ಲವರ್ಸ್ಗೆ ಆ್ಯಪಲ್ ಗುಡ್‌ನ್ಯೂಸ್ ನೀಡಿದೆ. ಹೌದು, ತಂತ್ರಜ್ಞಾನ ದೈತ್ಯ ಆ್ಯಪಲ್‌ನಿಂದ ಹೊಸ ಉತ್ಪನ್ನ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ. ಆ್ಯಪಲ್ ಸಿಇಒ ಟಿಮ್ ಕುಕ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಇದನ್ನು ಬಹಿರಂಗಪಡಿಸಿದ್ದಾರೆ. ಇದರಲ್ಲಿ ಅವರು ತಮ್ಮ ಮುಂಬರುವ ಉತ್ಪನ್ನದ ಟೀಸರ್ ಜೊತೆಗೆ ದಿನಾಂಕ ಸಹ ಘೋಷಿಸಿದರು. ಆದರೂ ಇದು ಆ್ಯಪಲ್‌ನ ಮುಂಬರುವ 'ಐಫೋನ್ ಎಸ್‌ಇ 4'ಗಾಗಿ ಟೀಸರ್ ಎಂದು ತೋರುತ್ತದೆ.
ಟಿಮ್ ಕುಕ್ ಟೀಸರ್ ಬಿಡುಗಡೆ ಮಾಡಿದರು: ಕೆಲವು ಗಂಟೆಗಳ ಹಿಂದೆ ಟಿಮ್ ಕುಕ್ ತಮ್ಮ 'ಎಕ್ಸ್' ಖಾತೆಯ ಮೂಲಕ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದು, ಇದರಲ್ಲಿ ನೀವು 7 ಸೆಕೆಂಡುಗಳ ಟೀಸರ್ ನೋಡಬಹುದು. ಆ್ಯಪಲ್ ಲೋಗೋ ಅದ್ಭುತ ರೀತಿಯಲ್ಲಿ ಹೊಳೆಯುತ್ತದೆ. ಈ ಟೀಸರ್ ಜೊತೆಗೆ ಟಿಮ್ ಕುಕ್ "ನಮ್ಮ ಕುಟುಂಬದಲ್ಲಿ ಹೊಸ ಸದಸ್ಯರನ್ನು ಭೇಟಿ ಮಾಡಲು ಸಿದ್ಧರಾಗಿ" ಎಂದು ಬರೆದಿದ್ದಾರೆ. ಇದರೊಂದಿಗೆ, ಫೆಬ್ರವರಿ 19 ಬುಧವಾರ ಆ್ಯಪಲ್ ಲಾಂಚ್ ಎಂದು ಸಹ ಉಲ್ಲೇಖಿಸಿದ್ದಾರೆ.
Get ready to meet the newest member of the family.
— Tim Cook (@tim_cook) February 13, 2025
Wednesday, February 19. #AppleLaunch pic.twitter.com/0ML0NfMedu
ಇದರರ್ಥ ಆ್ಯಪಲ್ ತನ್ನ ಹೊಸ ಉತ್ಪನ್ನವನ್ನು ಫೆಬ್ರವರಿ 19ರಂದು ಬಿಡುಗಡೆ ಮಾಡುವುದಾಗಿ ಘೋಷಿಸಲಿದೆ. ಆದ್ರೆ ಈ ಪೋಸ್ಟ್ನಲ್ಲಿ ಹೊಸ ಉತ್ಪನ್ನದ ಹೆಸರನ್ನು ಉಲ್ಲೇಖಿಸಲಾಗಿಲ್ಲ. ಆದರೂ ಇತ್ತೀಚೆಗೆ ಬಿಡುಗಡೆಯಾದ ಕೆಲವು ವರದಿಗಳ ಪ್ರಕಾರ, ಆ್ಯಪಲ್ ತನ್ನ ಅಗ್ಗದ ಐಫೋನ್ SE 4 ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ಟಿಮ್ ಕುಕ್ ಬಿಡುಗಡೆ ಮಾಡಿದ ಟೀಸರ್ ಈ ಮಾದರಿಗೆಂದೇ ಎಂದು ತಂತ್ರಜ್ಞಾನ ತಜ್ಞರು ಅಂದಾಜಿಸಿದ್ದಾರೆ. ಹೀಗಾಗಿ ಆ್ಯಪಲ್ ಫೆಬ್ರವರಿ 19ರಂದು ಐಫೋನ್ SE 4 ಬಿಡುಗಡೆ ಮಾಡಲಿದೆ ಎಂದು ತೋರುತ್ತದೆ.
ಐಫೋನ್ SE 4 ನಿರೀಕ್ಷಿತ ವೈಶಿಷ್ಟ್ಯಗಳು: ಈ ಮುಂಬರುವ ಐಫೋನ್‌ನ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಇಲ್ಲಿಯವರೆಗೆ ಇದರ ಡಮ್ಮಿ ಯೂನಿಟ್ ಲೀಕ್ ಆಗಿದೆ. ಈ ಫೋನ್‌ನ ಡಿಸೈನ್ ಐಫೋನ್ 14ರಂತೆಯೇ ಇರುತ್ತದೆ ಎಂದು ಇದು ಸೂಚಿಸುತ್ತದೆ. ಇತ್ತೀಚೆಗೆ ಫೋನ್‌ನ ಕವರ್ ಡಿಸೈನ್ ಆಕಸ್ಮಿಕವಾಗಿ ಸೋರಿಕೆಯಾಗಿದೆ. ಇದು ಫೋನಿನ ವಿನ್ಯಾಸವನ್ನು ಬಹಿರಂಗಪಡಿಸಿತು. ಇದು ಐಫೋನ್ 14 ಬೇಸ್ ಮಾದರಿಯನ್ನು ಹೋಲುವ ನಿರೀಕ್ಷೆಯಿದೆ.
ಈ ಫೋನ್ ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್, ಸಿಂಗಲ್ ಬ್ಯಾಕ್ ಕ್ಯಾಮೆರಾ ಲೆನ್ಸ್, ಗ್ಲಾಸ್ ಫಿನಿಶ್ ಮತ್ತು ಆ್ಯಪಲ್ ಇಂಟೆಲಿಜೆನ್ಸ್‌ನೊಂದಿಗೆ ಕಂಪನಿಯ ಇತ್ತೀಚಿನ A18 ಚಿಪ್‌ಸೆಟ್‌ನೊಂದಿಗೆ ಬರಲಿದೆ ಎಂದು ವರದಿಯಾಗಿದೆ. ಕೆಲವು ತಿಂಗಳ ಹಿಂದೆ ಬಿಡುಗಡೆಯಾದ ಆ್ಯಪಲ್‌ನ ಇತ್ತೀಚಿನ ಐಫೋನ್ 16ನಲ್ಲೂ ಇದೇ ಚಿಪ್‌ಸೆಟ್ ಬಳಸಲಾಗಿದೆ.
ಇದನ್ನೂ ಓದಿ: ಜಿಯೋಸಿನಿಮಾ + ಡಿಸ್ನಿ ಪ್ಲಸ್ ಹಾಟ್‌ಸ್ಟಾರ್= JioHotstar: ಕೈಗೆಟುಕುವ ದರದಲ್ಲಿ ಚಂದಾದಾರಿಕೆ ಪ್ಲಾನ್ಸ್