ETV Bharat / technology

ನ್ಯಾನೋ ಟೆಕ್​ನಲ್ಲಿ ಭಾರತದ ಹೆಜ್ಜೆ; ಜಗತ್ತಿನ ಅತಿ ಚಿಕ್ಕ ಚಿಪ್​ ತಯಾರಿಕೆಗೆ ಮುಂದಾದ IISC ಬೆಂಗಳೂರು - WORLDS SMALLEST CHIP

ಮುಂದಿನ ಪೀಳಿಗೆಯ ಚಿಪ್​ ತಂತ್ರಜ್ಞಾನದಲ್ಲಿ ಶೀಘ್ರದಲ್ಲೇ ಮಹತ್ವದ ಮೈಲಿಗಲ್ಲು ಸಾಧಿಸಲಿರುವ ಭಾರತ

Indias IISc Bangalore Plans Worlds Smallest Chip Aims to Put India on Global Tech Map
ಪ್ರಾತಿನಿಧಿಕ ಚಿತ್ರ (ಈಟಿವಿ ಭಾರತ್​​)
author img

By ETV Bharat Karnataka Team

Published : April 21, 2025 at 5:26 PM IST

3 Min Read

ಬೆಂಗಳೂರು: ಜಗತ್ತಿನ ಅತ್ಯಂತ ಸಣ್ಣ ಸೆಮಿಕಂಡಕ್ಟರ್​ ಚಿಪ್​ವೊಂದನ್ನು ಭಾರತೀಯ ವಿಜ್ಞಾನ ಸಂಸ್ಥೆ (IISC)ಯ 30 ವಿಜ್ಞಾನಿಗಳ ತಂಡ ಅಭಿವೃದ್ಧಿ ಪಡಿಸಲು ಮುಂದಾಗಿದೆ. ತಮ್ಮ ಈ ಮಹಾತ್ಮಕಾಂಕ್ಷೆಯ ಯೋಜನೆ ಯಶಸ್ವಿಯಾದಲ್ಲಿ ಸುಧಾರಿತ ಸೆಮಿಕಂಡಕ್ಟರ್​ ತಂತ್ರಜ್ಞಾನದಲ್ಲಿ ಮುಂಚೂಣಿಗೆ ಬರುವುದರ ಜತೆ ಜತೆಗೆ ಜಾಗತಿಕ ಚಿಪ್​ ಉತ್ಪಾದನೆಯಲ್ಲಿ ಭಾರತ ಮಹತ್ವದ ಮೈಲಿಗಲ್ಲು ಸಾಧಿಸಲಿದೆ.

ಯಾವ ವಸ್ತು ಬಳಕೆ ಮಾಡಿ ಈ ಚಿಪ್​ ತಯಾರಿಕೆ: IISC ತಂಡ ಪ್ರಸ್ತಾಪಿಸಿದ ಈ ಚಿಪ್​ ಸುಧಾರಿತ 2ಡಿ ಉತ್ಪನ್ನವಾದ ಗ್ರಾಫೆನ್​ ಮತ್ತು ಟ್ರಾನ್ಸಿಷನ್​ ಮೆಟಲ್​ ಡಿಚಲ್ಗೊಗೆನಿಡಸ್​​ (ಡಿಎಂಡಿ) ರೀತಿಯ ವಸ್ತುಗಳನ್ನು ಬಳಕೆ ಮಾಡಲಿದೆ. ಇದು ಕೇವಲ ಒಂದು ಪರಮಾಣುವಿನಷ್ಟು ದಪ್ಪವಾಗಿರುತ್ತದೆ. ಈ ಚಿಪ್​ ಒಂದು ಆಂಗ್‌ಸ್ಟ್ರೋಮ್ ಅಥವಾ ಒಂದು ನ್ಯಾನೊಮೀಟರ್‌ನ ಹತ್ತನೇ ಒಂದು ಭಾಗದಷ್ಟು ಇರುತ್ತದೆ. ಇದು ಪ್ರಸ್ತುತ ಉತ್ಪಾದನೆಯಲ್ಲಿರುವ ಚಿಕ್ಕ ಚಿಪ್‌ಗಳಿಗಿಂತ ಗಮನಾರ್ಹವಾಗಿ ಚಿಕ್ಕದಾಗಿದೆ.

ಸರ್ಕಾರಕ್ಕೆ ಡಿಪಿಆರ್​ ಸಲ್ಲಿಕೆ ಮಾಡಿದ ಐಐಎಸ್​​​​ಸಿ: ಈ ಚಿಪ್​ ಅಭಿವೃದ್ಧಿ ಮಾಡುವ ಕುರಿತು ಐಐಎಸ್ಸಿ ವಿಜ್ಞಾನಿಗಳ ತಂಡ ವಿವರವಾದ ಯೋಜನಾ ವರದಿಯನ್ನು (ಡಿಪಿಆರ್​) ಏಪ್ರಿಲ್​ 22ರಂದು ಸರ್ಕಾರದ ಮುಖ್ಯ ವಿಜ್ಞಾನಿಕ ಸಲಹೆಗಾರರಿಗೆ ಸಲ್ಲಿಸಿತು . ಈ ಕುರಿತು ಪರಿಷ್ಕೃತ ವರದಿಯನ್ನು 2024ರಲ್ಲಿ ಸಲ್ಲಿಸಿದೆ ಎಂದು ಐಐಎಸ್​​​​ಸಿ ಸಿಬ್ಬಂದಿ ಮಯಾಂಕ್​ ಶ್ರೀವತ್ಸಾವ್​ ತಿಳಿಸಿದ್ದಾರೆ. ಬಳಿಕ ಈ ವರದಿಯನ್ನು ಎಲೆಕ್ಟ್ರಾನಿಕ್​ ಮತ್ತು ಐಟಿ ಸಚಿವಾಲಯಕ್ಕೆ ಹಂಚಿಕೆ ಮಾಡಲಾಗಿತ್ತು. ಈ ಯೋಜನೆಯಲ್ಲಿ ಸದ್ಯ ಉತ್ಪಾದಿಸುತ್ತಿರುವ ಚಿಪ್​ಗಿಂತ ಸಣ್ಣ ಚಿಪ್​ ತಯಾರಿಸುವ ಕುರಿತು ಭರವಸೆ ನೀಡಿದ್ದು, ಇದು ಆ್ಯಂಗಸ್ಟ್ರಾಮ್​ನ ಅಳತೆ ಹೊಂದಿರಲಿದೆ ಎಂದು ತಿಳಿದು ಬಂದಿದೆ.

ಸಿಲಿಕಾನ್​ ಗೆ ಪರ್ಯಾಯವಾಗಿ ಆವಿಷ್ಕಾರ: ಸಾಂಪ್ರದಾಯಿಕವಾಗಿ ಸೆಮಿಕಂಡಕ್ಟರ್​ ಉತ್ಪಾದನೆಯಲ್ಲಿ ಸಿಲಿಕಾನ್​ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಲಾಗುತ್ತದೆ. ಆದರೆ, ಇದೀಗ ಸಂಶೋಧಕರು ಇದಕ್ಕೆ ಪರ್ಯಾಯವಾಗಿ 2ಡಿ ಉತ್ಪನ್ನಗಳ ಕುರಿತು ಜಗತ್ತಿನಾದ್ಯಂತ ಅವಿಷ್ಕಾರಕ್ಕೆ ಮುಂದಾಗಿದ್ದಾರೆ. ಈ ಉತ್ಪನ್ನಗಳು ಶಕ್ತಿ ಸಾಮರ್ಥ್ಯದ ಮತ್ತು ಶಕ್ತಿಶಾಲಿ ಚಿಪ್​ಗಳಾಗಿರುವುದರಿಂದ ಸಿಲಿಕಾನ್​ ಗೆ ಪರ್ಯಾಯವಾಗಿ 2ಡಿ ಉತ್ಪನ್ನ ಬಳಕೆ ಮಾಡಲಾಗುತ್ತಿದೆ. ಉದ್ಯಮ ತಜ್ಞರ ಪ್ರಕಾರ, ಸ್ಯಾಮ್​ಸಂಗ್​, ಮಿಡಿಯಾ ಟೆಕ್​ ಕಂಪನಿಗಳು ವಾಣಿಜ್ಯಾತ್ಮಕವಾಗಿ ಅತಿ ಸಣ್ಣ ಚಿಪ್​ ಉತ್ಪಾದನೆ ಮಾಡುತ್ತಿದ್ದು, ಇದರ ಗಾತ್ರ 3 ನ್ಯಾನೋ ಮೀಟರ್​ಗಳಷ್ಟಿದೆ ಎಂದಿದ್ದಾರೆ.

ವರದಿ ವೆಬ್​ಸೈಟ್​ ನಲ್ಲಿ ಲಭ್ಯ: ಈ ಚಿಪ್​ ಅಭಿವೃದ್ಧಿ ಯೋಜನೆ ಕುರಿತು ಪ್ರಧಾನ ವೈಜ್ಞಾನಿಕ ಸಲಹೆಗಾರರಿಗೆ ಸಲ್ಲಿಸಲಾದ ವರದಿಯ ವಿವರಣೆ ವೆಬ್​ಸೈಟ್​ನಲ್ಲಿ ಲಭ್ಯವಿದ್ದು, ಸರ್ಕಾರ ಈ ಪ್ರಸ್ತಾಪದ ಬಗ್ಗೆ ಆಸಕ್ತಿ ಹೊಂದಿರುವುದನ್ನು ಸೂಚಿಸಲಾಗಿದೆ. ಈ ವಿಚಾರದ ಕುರಿತು ಈಗಾಗಲೇ ಎಲೆಕ್ಟ್ರಾನಿಕ್​ ಮತ್ತು ಐಟಿ ಸಚಿವಾಲಯ ಅನೇಕ ಬಾರಿ ಸಭೆ ನಡೆಸಿದ್ದು, ಸಚಿವಾಲಯ ಹಾಗೂ ಪ್ರಧಾನ ವೈಜ್ಞಾನಿಕ ಸಲಹೆಗಾರರು ಹಲವು ಸಭೆ ಮತ್ತು ಚರ್ಚೆ ನಡೆಸಿದ್ದಾರೆ.

ಸಚಿವಾಲಯ ಕೂಡ ಇದರ ಅಳವಡಿಕೆ ಮೌಲ್ಯಮಾಪನ ನಡೆಸುತ್ತಿದ್ದು, ಚಿಪ್​ ಅಭಿವೃದ್ಧಿಯಲ್ಲಿನ ಯಶಸ್ಸಿನ ಬೆಳವಣಿಗೆ, ಸಹಯೋಗ, ಹೂಡಿಕೆ ಮತ್ತು ಸುಸ್ಥಿರ ತಂತ್ರಜ್ಞಾನದ ಕುರಿತು ಅರ್ಥೈಸಿಕೊಳ್ಳುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತ ಮಾತ್ರವಲ್ಲ ಈ ಎಲ್ಲ ದೇಶಗಳೂ ರೇಸ್​ ನಲ್ಲಿವೆ: ಈ ಚಿಪ್​ ತಯಾರಿಕೆ ರೇಸ್​ನಲ್ಲಿ ಭಾರತ ಮಾತ್ರವಿಲ್ಲ. ಅಮೆರಿಕದ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯ, ಜಪಾನ್​ನ ಒಕಿನಾವಾ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ , ಚೀನಾ ಸಾಂಗ್‌ಶಾನ್ ಲೇಕ್ ಮೆಟೀರಿಯಲ್ಸ್ ಪ್ರಯೋಗಾಲಯ ಹಾಗೂ ಯುಕೆಯ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯ ನಂತಹ ಪ್ರತಿಷ್ಠಿತ ಸಂಸ್ಥೆಗಳು ಸಹ ಈ ರೇಸ್​ನಲ್ಲಿದೆ. 2ಡಿ ಸೆಮಿಕಂಡಕ್ಟರ್​ ಉತ್ಪನ್ನಗಳ ಮೇಲೆ ದಕ್ಷಿಣ ಕೊರಿಯಾ ಮತ್ತು ಯುರೋಪಿಯನ್ ಒಕ್ಕೂಟವು ಪ್ರಮುಖ ಹೂಡಿಕೆಗಳನ್ನು ಮಾಡಿದೆ. ಅಮೆರಿಕ 1 ಬಿಲಿಯನ್​ ಡಾಲರ್​ ಹೂಡಿಕೆ ಮಾಡಿದ್ದು, ಚೀನಾ ಮತ್ತು ಜಪಾನ್ ಕೂಡ ಗಮನಾರ್ಹವಾಗಿ ಹೂಡಿಕೆ ಮಾಡುತ್ತಿವೆ.

ಭವಿಷ್ಯದ ವೈವಿಧ್ಯಮಯ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವಲ್ಲಿ 2ಡಿ ಉತ್ಪನ್ನಗಳು ಪ್ರಮುಖವಾಗಿದ್ದು, ಈ ಸ್ಪರ್ಧೆಯಲ್ಲಿ ಭಾರತ ವೇಗವಾಗಿ ಕಾರ್ಯ ನಿರ್ವಹಿಸಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

500 ಕೋಟಿ ಬಂಡವಾಳ ಕೇಳಿದ IISC: ಈ ಯೋಜನೆಗೆ ಐದು ವರ್ಷಗಳ ಕಾಲ 500 ಕೋಟಿ ಬಂಡವಾಳ ಹೂಡಿಕೆ ಮಾಡುವಂತೆ ಐಐಎಸ್​ಸಿ ಕೋರಿದ್ದು, ಈ ಉಪಕ್ರಮದ ಕಲ್ಪನೆ 2021 ರಲ್ಲಿ ಉದಯವಾಗಿದ್ದು, ಸೆಪ್ಟೆಂಬರ್​ 2022ರಲ್ಲಿ ನೀತಿ ಆಯೋಗದಿಂದ ಬೆಂಬಲ ಪಡೆದಿದೆ ಎಂದು ಅದು ಪ್ರಾಥಮಿಕ ವರದಿಯಲ್ಲಿ ತಿಳಿಸಿದೆ.

ಈ ಯೋಜನೆಗೆ ಹಣಕಾಸು ಒದಗಿಸಿ ಯಶಸ್ವಿಯಾದರೆ, ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ಗಾತ್ರ ಕಡಿಮೆ ಮಾಡಬಹುದಾಗಿದೆ. ಅಲ್ಲದೇ ಮುಂದಿನ ಪೀಳಿಗೆಯ ಧರಿಸಬಹುದಾದ ಮತ್ತು ಅಳವಡಿಕೆ ಸಾಧನಕ್ಕೆ ದಾರಿಯಾಗಲಿದೆ. ಹಾಗೇ ಜಾಗತಿಕ ಸೆಮಿಕಂಡಕ್ಟರ್​ ಪೂರೈಕೆಯ ಸರಪಳಿ ಬಲಗೊಳ್ಳುತ್ತದೆ ಎಂದು ವರದಿಯಲ್ಲಿ ಐಐಎಸ್​​​ಸಿ ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ: ಚೀನಾದ ನೆರೆಯ ದೇಶಕ್ಕೆ ತೆರಳಿತು ಬ್ರಹ್ಮೋಸ್‌ ಮಿಸೈಲ್​; ಹೇಗಿದೆ ಗೊತ್ತಾ ಇದರ ಸಾಮರ್ಥ್ಯ?

ಇದನ್ನೂ ಓದಿ: ಆರ್ಯಭಟಗೆ ಸುವರ್ಣ ಮಹೋತ್ಸವ: ಭಾರತದ ಮೊದಲ ಉಪಗ್ರಹದ ಬಗ್ಗೆ ನಿಮಗೆಷ್ಟು ಗೊತ್ತು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.