LAVA: ಸ್ವದೇಶಿ ಮಾರುಕಟ್ಟೆಗೆ ಲಾವಾ ಕಂಪನಿ ಕೈಗೆಟುಕುವ ದರದಲ್ಲಿ ಹೊಸ ಸ್ಮಾರ್ಟ್‌ಫೋನ್ ಪರಿಚಯಿಸಿದೆ. ಇದರ ಹೆಸರು ಲಾವಾ ಶಾರ್ಕ್. ಆರಂಭಿಕ ಹಂತದ ಸ್ಮಾರ್ಟ್‌ಫೋನ್ ಆಗಿದ್ದು, 50MP ಕ್ಯಾಮೆರಾ ಮತ್ತು AI ವೈಶಿಷ್ಟ್ಯಗಳು, 5000mAh ಬ್ಯಾಟರಿ ಜೊತೆಗೆ ಇನ್ನೂ ಹೆಚ್ಚಿನ ಫೀಚರ್ಗಳನ್ನು ಒದಗಿಸಲಾಗಿದೆ.
ಕಂಪನಿ ಈ ಫೋನ್ ಅನ್ನು 4GB RAM ಮತ್ತು 64GB ಸ್ಟೋರೇಜ್‌ನ ಒಂದೇ ಒಂದು ರೂಪಾಂತರದಲ್ಲಿ ಬಿಡುಗಡೆ ಮಾಡಿದ್ದು, ಬೆಲೆ 6,999 ರೂ. ಆಗಿದೆ. ಬ್ಲ್ಯಾಕ್ ಮತ್ತು ಟೈಟಾನಿಯಂ ಗೋಲ್ಡ್ ಕಲರ್ಗಳ ಆಯ್ಕೆಗಳಲ್ಲಿ ಫೋನ್ ಖರೀದಿಗೆ ಲಭ್ಯ. ಲಾವಾದ ಚಿಲ್ಲರೆ ಅಂಗಡಿಗಳಲ್ಲಿ ಮಾರಾಟಕ್ಕೆ ಸಿಗುತ್ತಿದೆ. ಈ ಫೋನ್‌ನೊಂದಿಗೆ 1 ವರ್ಷದ ವಾರಂಟಿ ಮತ್ತು ಫ್ರೀ ಹೋಮ್ ಸರ್ವೀಸ್ ಸಹ ಒದಗಿಸಲಾಗುತ್ತಿದೆ.
ಲಾವಾ ಶಾರ್ಕ್ ಸ್ಪೆಸಿಫಿಕೇಶನ್: 6.7-ಇಂಚಿನ HD ಪ್ಲಸ್ ಸ್ಕ್ರೀನ್ ಹೊಂದಿದ್ದು, ಇದರ ರಿಫ್ರೆಶ್ ರೇಟ್ 120Hz ಮತ್ತು ರೆಸಲ್ಯೂಶನ್ 720x1,612 ಪಿಕ್ಸೆಲ್‌ಗಳು. ಪ್ರೊಸೆಸರ್‌ಗಾಗಿ ಆಕ್ಟಾ-ಕೋರ್ ಯುನಿಸಾಕ್ T606 SoC ಚಿಪ್‌ಸೆಟ್ ಹೊಂದಿದ್ದು, 4GB RAM ಮತ್ತು 64GB ಸ್ಟೋರೇಜ್ ಹೊಂದಿದೆ. 4GB ವರ್ಚುವಲ್ RAM ಅನ್ನು ವಿಸ್ತರಿಸಬಹುದು. ಇದಲ್ಲದೆ ಸ್ಟೋರೇಜ್ ಅನ್ನು 256GB ವರೆಗೆ ಹೆಚ್ಚಿಸಬಹುದು. ಆಂಡ್ರಾಯ್ಡ್ 14 ಆಧಾರಿತ OSನಲ್ಲಿ ಕಾರ್ಯನಿರ್ವಹಿಸುತ್ತದೆ.
ಫೋನಿನ ರಿಯರ್ನಲ್ಲಿ 50MP AI-ಪವರ್ಡ್ ಕ್ಯಾಮೆರಾ ಇದ್ದು, LED ಫ್ಲ್ಯಾಷ್ ಲೈಟ್‌ನೊಂದಿಗೆ ಬರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 8MP ಫ್ರಂಟ್ ಕ್ಯಾಮೆರಾ ಒದಗಿಸಿದೆ. AI ಮೋಡ್, ಪೋರ್ಟ್ರೇಟ್, ಪ್ರೊ ಮೋಡ್ ಮತ್ತು HDR ಸಪೋರ್ಟ್ನಂತಹ ಹಲವು ವೈಶಿಷ್ಟ್ಯಗಳಿವೆ.
ಫೋನ್ 5000mAh ಬ್ಯಾಟರಿ ಹೊಂದಿದ್ದು, 18W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ. USB ಟೈಪ್-ಸಿ ಪೋರ್ಟ್ ನೀಡಲಾಗಿದೆ. ಬಾಕ್ಸ್‌ನಲ್ಲಿ 10W ಚಾರ್ಜರ್ ಮಾತ್ರ ಒದಗಿಸಲಾಗಿದೆ. ಸಂಪೂರ್ಣವಾಗಿ ಚಾರ್ಜ್ ಆಗಲು 158 ನಿಮಿಷ ಬೇಕಾಗುತ್ತದೆ ಮತ್ತು ಬಳಕೆದಾರರು ಇದರೊಂದಿಗೆ 45 ಗಂಟೆಗಳ ಕಾಲ ಮಾತನಾಡಬಹುದು ಎಂದು ಕಂಪನಿ ಹೇಳಿದೆ.
ಈ ಫೋನ್ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಹೊಂದಿದ್ದು, ಫೇಸ್ ಅನ್‌ಲಾಕ್ ವೈಶಿಷ್ಟ್ಯದೊಂದಿಗೆ ಬರುತ್ತದೆ. ವಾಟರ್ ಎಂಡ್ ರೆಸಿಸ್ಟೆಂಟ್ ಮತ್ತು IP54 ರೇಟಿಂಗ್ ನೀಡಲಾಗಿದೆ. ಕನೆಕ್ಟಿವಿಟಿಯಾಗಿ ಡ್ಯುಯಲ್ 4G VoLTE, ಬ್ಲೂಟೂತ್ 5.0 ಮತ್ತು ವೈ-ಫೈ ನಂತಹ ಹಲವು ವೈಶಿಷ್ಟ್ಯಗಳನ್ನು ಇದರಲ್ಲಿ ಒದಗಿಸಲಾಗಿದೆ.
ಇದನ್ನೂ ಓದಿ: ದೇಶಿಯ ಮಾರುಕಟ್ಟೆಗೆ ಬಂತು ನೋಡಿ 'ಸ್ಯಾಮ್ಸಂಗ್ ಗ್ಯಾಲಕ್ಸಿ ಎ26 5ಜಿ' ಸ್ಮಾರ್ಟ್‌ಫೋನ್