ETV Bharat / technology

PAN ಕಾರ್ಡ್ ದುರುಪಯೋಗದ ಬಗ್ಗೆ ತಿಳಿಯುವುದು, ದೂರು ಸಲ್ಲಿಸುವುದು ಹೇಗೆ? - PAN Card Misuse

PAN Card Misuse: ಪ್ಯಾನ್​ ಕಾರ್ಡ್​ ಹಣಕಾಸು ವಹಿವಾಟು ಮತ್ತು ಸಾಲ ಪಡೆಯಲು ಅತೀ ಮುಖ್ಯ ದಾಖಲೆ. ಈ ಪ್ಯಾನ್​ ಕಾರ್ಡ್​ ಅನ್ನು ವಂಚಕರು ದುರುಪಯೋಗ ಮಾಡಿಕೊಳ್ಳಲು ಕಾಯುತ್ತಿರುತ್ತಾರೆ. ಹೀಗಾಗಿ ಇದರ ಬಗ್ಗೆ ನೀವು ಹೆಚ್ಚು ಜಾಗರೂಕರಾಗಿರಬೇಕು. ಒಂದು ವೇಳೆ ನಿಮ್ಮ ಪ್ಯಾನ್​ ದುರುಪಯೋಗವಾದರೆ ಆನ್​ಲೈನ್​ ಮೂಲಕ ದೂರು ಸಲ್ಲಿಸುವುದು ಹೇಗೆಂದು ಇಲ್ಲಿ ತಿಳಿಯಿರಿ.

author img

By ETV Bharat Tech Team

Published : Sep 12, 2024, 10:42 AM IST

MISUSE OF PAN CARD  ONLINE COMPLAINT  PAN CARD APPLICATION  PAN CARD DETAILS
ಸಾಂದರ್ಭಿಕ ಚಿತ್ರ (ETV Bharat)

PAN Card Misuse: ಭಾರತ ಸರ್ಕಾರದಿಂದ ನೀಡಲಾಗುವ ಪ್ಯಾನ್ (ಶಾಶ್ವತ ಖಾತೆ ಸಂಖ್ಯೆ) ಕಾರ್ಡ್ ತೆರಿಗೆದಾರರಿಗೆ ನಿರ್ಣಾಯಕ ದಾಖಲೆಯಾಗಿರುತ್ತದೆ. ಹಣಕಾಸು ಚಟುವಟಿಕೆಗಳ ಕುರಿತು ಇದು ಮಾಹಿತಿ ಒದಗಿಸುತ್ತದೆ. ಅಷ್ಟೇ ಅಲ್ಲದೇ, ಗುರುತಿನ ಮತ್ತು ಜನ್ಮ ದಿನಾಂಕದ ಪುರಾವೆಯಾಗಿಯೂ ಕೆಲಸ ಮಾಡುತ್ತದೆ. ಆದರೆ ಇತ್ತೀಚಿಗೆ ಪ್ಯಾನ್ ಕಾರ್ಡ್ ದುರುಪಯೋಗ ಹೆಚ್ಚಾಗುತ್ತಿದೆ. ಇದು ಹಣಕಾಸು ನಷ್ಟ ಮತ್ತು ಗುರುತಿನ ಕಳ್ಳತನಕ್ಕೆ ಕಾರಣವಾಗುತ್ತಿದೆ. ಇಂತಹ ಮೋಸದಾಟದ ವಿರುದ್ಧ ರಕ್ಷಣೆ ಮತ್ತು PAN ಕಾರ್ಡ್ ವಂಚನೆಯನ್ನು ಪತ್ತೆ ಮಾಡುವುದು, ವರದಿ ಮಾಡುವುದು ಹೇಗೆಂಬ ಉಪಯುಕ್ತ ಮಾಹಿತಿ ಇಲ್ಲಿದೆ.

ಪ್ಯಾನ್ ಕಾರ್ಡ್ ವಂಚನೆ ತಿಳಿಯುವುದು ಹೇಗೆ?: PAN ಕಾರ್ಡ್ ವಂಚನೆಯು ಕ್ರಿಮಿನಲ್ ಉದ್ದೇಶಗಳಿಗಾಗಿ ನಿಮ್ಮ PAN ಕಾರ್ಡ್‌ನ ಅನಧಿಕೃತ ಬಳಕೆಯನ್ನು ಒಳಗೊಂಡಿರುತ್ತದೆ. ಹಣಕಾಸಿನ ಮಾಹಿತಿ ಅಥವಾ ನಿಮ್ಮ ಗುರುತು ಕಳ್ಳತನಕ್ಕೆ ಕಾರಣವಾಗುತ್ತದೆ. ನಿಮ್ಮ ಪ್ಯಾನ್ ಕಾರ್ಡ್‌ನ ದುರುಪಯೋಗವು ತೀವ್ರ ಆರ್ಥಿಕ ಅಪರಾಧಗಳು ಮತ್ತು ಕಾನೂನು ಪರಿಣಾಮಗಳಿಗೂ ಕಾರಣವಾಗಬಹುದು.

ಪ್ಯಾನ್ ಕಾರ್ಡ್ ದುರ್ಬಳಕೆಯ ನಿದರ್ಶನಗಳು: PAN ಕಾರ್ಡ್ ದುರುಪಯೋಗದ ಉದಾಹರಣೆಗಳೆಂದರೆ, ಮೋಸದ ಸಾಲದ ಅರ್ಜಿಗಳು, ಅಕ್ರಮ ಚಟುವಟಿಕೆಗಳಿಗಾಗಿ ಬ್ಯಾಂಕ್ ಖಾತೆಗಳನ್ನು ತೆರೆಯುವುದು, SMS ಮೂಲಕ ಫಿಶಿಂಗ್ ವಂಚನೆಗಳು ಮತ್ತು ಸೆಲೆಬ್ರಿಟಿಗಳ ಹೆಸರಿನಲ್ಲಿ ಕ್ರೆಡಿಟ್ ಕಾರ್ಡ್‌ಗಳನ್ನು ಪಡೆಯುವುದಾಗಿದೆ.

ಪ್ಯಾನ್ ಕಾರ್ಡ್ ದುರುಪಯೋಗದ ಬಗ್ಗೆ ಆನ್‌ಲೈನ್‌ನಲ್ಲಿ ಹೀಗೆ ದೂರು ನೀಡಿ:

  • PAN ಕಾರ್ಡ್ ವಂಚನೆಯ ದೂರು ಸಲ್ಲಿಸಲು ಈ ಹಂತಗಳನ್ನು ಅನುಸರಿಸಿರಿ:
  • Tax Information Network ಪೋರ್ಟಲ್‌ಗೆ ಭೇಟಿ ನೀಡಿ.
  • 'Customer Care' ವಿಭಾಗಕ್ಕೆ ಭೇಟಿ ನೀಡಿ ಮತ್ತು 'Complaints/Queries' ಆಯ್ಕೆ ಮಾಡಿ.
  • ದೂರು ಫಾರ್ಮ್ ಭರ್ತಿ ಮಾಡಿ, ಸಮಸ್ಯೆಯನ್ನು ವಿವರಿಸಿ, ಕ್ಯಾಪ್ಚಾ ನಮೂದಿಸಿ ಮತ್ತು Submit ಮೇಲೆ ಕ್ಲಿಕ್​ ಮಾಡಿ ದೂರು ಸಲ್ಲಿಸಿರಿ.

ಪ್ಯಾನ್ ಕಾರ್ಡ್ ದುರುಪಯೋಗವನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಿ:

  • ನಿಮ್ಮ ಪ್ಯಾನ್ ಕಾರ್ಡ್ ದುರ್ಬಳಕೆಯಾಗಿದೆಯೇ ಎಂದು ಪರಿಶೀಲಿಸಲು ಈ ಹಂತಗಳನ್ನು ಅನುಸರಿಸಿ:
  • ಕ್ರೆಡಿಟ್ ಬ್ಯೂರೋ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ನಿಮ್ಮ ಕ್ರೆಡಿಟ್ ಸ್ಕೋರ್ ಪರಿಶೀಲಿಸಿ.
  • ಹಣಕಾಸಿನ ವಿವರ ನಮೂದಿಸಿ ಮತ್ತು ನಿಮ್ಮ ಫೋನ್‌ಗೆ ಕಳುಹಿಸಲಾದ OTP ಪರಿಶೀಲಿಸಿ.
  • ಪ್ಯಾನ್ ಕಾರ್ಡ್‌ ದುರ್ಬಳಕೆಯಾಗಿದ್ದರೆ ನಿಮ್ಮ ಕ್ರೆಡಿಟ್ ಸ್ಕೋರ್ ಸೂಚಿಸುತ್ತದೆ.

ಪ್ಯಾನ್ ಕಾರ್ಡ್ ವಂಚನೆಗಳನ್ನು ತಡೆಯುವುದು ಹೇಗೆ?:

  • ಪ್ಯಾನ್ ಕಾರ್ಡ್ ವಂಚನೆಯನ್ನು ತಪ್ಪಿಸಲು ಈ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ:
  • ಆನ್​ಲೈನ್​​ನಲ್ಲಿ ನಿಮ್ಮ ಪ್ಯಾನ್ ಸಂಖ್ಯೆಯ ಬಗ್ಗೆ ಮಾಹಿತಿ ನೀಡುವಾಗ ಮೊದಲು ವೆಬ್‌ಸೈಟ್ URL 'https' ನೊಂದಿಗೆ ಪ್ರಾರಂಭವಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
  • ಅನುಮಾನಾಸ್ಪದ ವೆಬ್‌ಸೈಟ್‌ಗಳಲ್ಲಿ ವೈಯಕ್ತಿಕ ಮಾಹಿತಿಯನ್ನು ನಮೂದಿಸುವುದನ್ನು ತಪ್ಪಿಸಿ.
  • ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಿ ಮತ್ತು ಹಣಕಾಸಿನ ಹೇಳಿಕೆಗಳನ್ನು ಪರಿಶೀಲಿಸಿ.
  • ನಿಮ್ಮ ಪ್ಯಾನ್ ಕಾರ್ಡ್‌ಗೆ ಲಿಂಕ್ ಮಾಡಲಾದ ವಹಿವಾಟುಗಳಿಗಾಗಿ ಫಾರ್ಮ್ 26AS ಅನ್ನು ಪರಿಶೀಲಿಸಿ.

ಇಂಥ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ನೀವು ನಿಮ್ಮ ಪ್ಯಾನ್ ಕಾರ್ಡ್ ಅನ್ನು ವಂಚನೆಯಿಂದ ರಕ್ಷಿಸಬಹುದು ಮತ್ತು ಸಂಭಾವ್ಯ ಅಪಾಯಗಳನ್ನು ತಗ್ಗಿಸಬಹುದು. ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ನಿಮ್ಮ ಬ್ಯಾಂಕ್ ಅಥವಾ ತೆರಿಗೆ ಅಧಿಕಾರಿಗಳಿಗೆ ತಕ್ಷಣವೇ ವರದಿ ಮಾಡುವುದು ಸೂಕ್ತ.

ಪ್ಯಾನ್​ ಕಾರ್ಡ್​ ಕುರಿತು ಹೆಚ್ಚಿನ ಮಾಹಿತಿ ನೀಡುವ ಲಿಂಕ್​ಗಳು:

ಹಂತ-1: ಉಚಿತ ಇ-ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೇ? ಇಲ್ಲಿದೆ ಸುಲಭ ವಿಧಾನ - Free e PAN Card

ಹಂತ-2: NSDL ಪೋರ್ಟಲ್ ಮೂಲಕ ಭೌತಿಕವಾಗಿ ಪ್ಯಾನ್​ ಕಾರ್ಡ್​ ಸಲ್ಲಿಸುವುದು ಹೀಗೆ - Submit PAN Through NSDL Portal

ಹಂತ-3: ಪರ್ಯಾಯ ಮಾರ್ಗದಿಂದ ಪ್ಯಾನ್​ ಕಾರ್ಡ್​ ಪಡೆಯುವುದು ಹೇಗೆ? - UTIITSL PAN Card Application

ಹಂತ-4: ಪ್ಯಾನ್ ಕಾರ್ಡ್‌ಗಾಗಿ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ, ಶುಲ್ಕ ಎಷ್ಟು? - PAN Card Offline Apply

ಹಂತ 5: ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಈ ಗುರುತಿನ ಪುರಾವೆಗಳು ಅಗತ್ಯ - PAN Card Identity Proof

ಹಂತ 6: PAN ಕಾರ್ಡ್ ಅಪ್ಲಿಕೇಶನ್ ಸ್ಟೇಟಸ್ ಟ್ರ್ಯಾಕ್​ ಮಾಡುವುದು ಹೇಗೆ? - Track PAN Card Application Status

ಹಂತ 7: ಪ್ಯಾನ್ (PAN) ಕಾರ್ಡ್‌ನಿಂದ ಪ್ರಯೋಜನಗಳೇನು? - PAN Card Benefits

ETV Bharat Logo

Copyright © 2024 Ushodaya Enterprises Pvt. Ltd., All Rights Reserved.