ETV Bharat / technology

ನಕಲಿ ವೆಬ್​ಸೈಟ್​ಗಳ ಬಗ್ಗೆ ಇರಲಿ ಎಚ್ಚರಿಕೆ; ಹಾಗಿದ್ರೆ ಮಾತ್ರ ಸೈಬರ್​ ವಂಚನೆಯಿಂದ ಬಚಾವ್​ ಆಗಲು ಸಾಧ್ಯ - HOW TO AWARE OF CYBER FRAUD

ನಿಜವೆಂದು ತೋರುವ ಈ ನಕಲಿ ವೆಬ್​​ಸೈಟ್​ ಪತ್ತೆ ಮಾಡುವುದು ಹೇಗೆ, ಎಚ್ಚರಿಕೆ ಹೇಗೆ ವಹಿಸಬೇಕು, ವಂಚನೆಗೆ ಗುರಿಯಾಗದಂತೆ ಇರುವುದು ಹೇಗೆ ಎಂಬ ಇಲ್ಲಿದೆ ಮಾಹಿತಿ.

How to Identify Fake Websites and Stay Safe from Cyber Fraud
ನಕಲಿ ವೆಬ್​ಸೈಟ್​ಗಳ ಬಗ್ಗೆ ಇರಲಿ ಎಚ್ಚರಿಕೆ; ಹಾಗಿದ್ರೆ ಮಾತ್ರ ಸೈಬರ್​ ವಂಚನೆಯಿಂದ ಬಚಾವ್​ ಆಗಲು ಸಾಧ್ಯ (ಸಂಗ್ರಹ ಚಿತ್ರ - ಈ ಟಿವಿ ಭಾರತ)
author img

By ETV Bharat Karnataka Team

Published : Jan 21, 2025, 4:22 PM IST

ಹೈದರಾಬಾದ್​: ಯಾವುದೋ ಸಮಸ್ಯೆ ಎದುರಾದಾಗ ಅದನ್ನು ಪರಿಹರಿಸಿಕೊಳ್ಳಲು ಕಸ್ಟಮರ್​ ಕೇರ್​ ನಂಬರ್​ ಬೇಕಾದಾಗ ಅಥವಾ ಯಾವುದಾದರೂ ಬುಕ್ಕಿಂಗ್​ ಮಾಡುವಾಗ ಆನ್​ಲೈನ್​ ಸೇವೆ ಸುಲಭವಾಗಿ ಆಯ್ಕೆ ಮಾಡಿಕೊಳ್ಳುತ್ತೇವೆ. ಆದರೆ, ಇದುವೇ ಸೈಬರ್​ ವಂಚನೆಗೆ ಒಳಗಾಗುವ ರಹದಾರಿ ಆಗಿದೆ ಎಂಬುದನ್ನು ಕೂಡ ಅನೇಕ ವೇಳೆ ಮರೆತು ಬಿಡುತ್ತೇವೆ.

ಯಾವುದನ್ನೂ ಸರಿಯಾಗಿ ಪರಿಶೀಲಿಸದೇ ವಂಚನೆಗೆ ಒಳಗಾಗುತ್ತೇವೆ. ಪರಿಶೀಲನೆಗೆ ಒಳಪಡದ ಕಸ್ಟಮರ್​ ಕೇರ್​ ನಂಬರ್​ ಅಥವಾ ಬುಕ್ಕಿಂಗ ಮಾಡಲು ವೆರಿಫೈಡ್​ ಮಾಡದ ಆನ್​​ ಲೈನ್​ ಸೈಟ್​​ಗಳಿಗೆ ವಿಸಿಟ್​ ಮಾಡಿ ಕೋಟ್ಯಾಂತರ ರೂ ನಷ್ಟ ಮಾಡಿಕೊಳ್ಳಲಾಗುತ್ತಿದೆ. ಆನ್​ಲೈನ್​ಲ್ಲಿ ನೈಜವೆಂದು ತೋರುವ ಈ ನಕಲಿ ವೆಬ್​ಸೈಟ್​ಗಳು ಅನೇಕ ಬ್ರಾಂಡ್​, ಸೇವಾ ಮಾಹಿತಿ ಅಥವಾ ಇ ಕಾಮರ್ಸ್​ ಜಾಲತಾಣದ ಅಸಲಿ ಎಂಬಂತೆ ಕಾಣಬಹುದು. ಈ ರೀತಿಯ ವಂಚನೆಗಳು ಹಬ್ಬದ ಋತುಮಾನದಲ್ಲಿ ಹೆಚ್ಚು ಎಂಬುದು ಗಮನದಲ್ಲಿರಲಿ.

ಹಾಗಾದರೆ ಈ ನಿಜವೆಂದು ತೋರುವ ಈ ನಕಲಿ ವೆಬ್​​ಸೈಟ್​ ಪತ್ತೆ ಮಾಡುವುದು ಹೇಗೆ, ಎಚ್ಚರಿಕೆ ಹೇಗೆ ವಹಿಸಿ, ವಂಚನೆಗೆ ಗುರಿಯಾಗದಂತೆ ಇರುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

ಯುಆರ್​ಎಲ್​ ಪರೀಕ್ಷಿಸಿ: ಅಸಲಿ ವೆಬ್​ಸೈಟ್​ಗಳ ಯುಆರ್​ಎಲ್​ https://, ಇದರಿಂದ ಪ್ರಾರಂಭವಾಗಿದ್ದು, ಇದು ಸಂಪರ್ಕವನ್ನು ಸುಭದ್ರಗೊಳಿಸುತ್ತದೆ. ಈ ಯುಆರ್​ಎಲ್​ ಅಲ್ಲಿ ಗೊತ್ತು ಆಗದಂತೆ ಸಣ್ಣ ಬದಲಾವಣೆ ನಡೆಸುವ ಮೂಲಕ ಅದು ಅಸಲಿಯೇ ಎಂಬುವಂತೆ ನಕಲಿ ಜಾಲತಾಣಗಳು ಭಾಸವಾಗುತ್ತದೆ. ಉದಾರಣೆಗೆ ಅದರಲ್ಲಿ ಒಂದು ಸಣ್ಣ ತಪ್ಪು ಅಕ್ಷರ ಅಥವಾ ಹೆಚ್ಚುವರಿ ಅಕ್ಷರಗಳನ್ನು ಬಳಕೆ ಮಾಡಲಾಗುತ್ತದೆ. ಇದು ನಕಲಿಯಾಗಿರುತ್ತದೆ.

ಪ್ಯಾಡ್​ಲಾಕ್​ ಪರೀಕ್ಷಿಸಿ: ಯುಆರ್​ಎಲ್​ ಆರಂಭದಲ್ಲಿ ಪ್ಯಾಡ್​​ಲಾಕ್​ ಐಕಾನ್​ಗಳು ಭದ್ರತೆ ಗುಣಮಟ್ಟವನ್ನು ಪ್ರದರ್ಶಿಸುತ್ತದೆ. ನಕಲಿ ವೆಬ್​ಸೈಟ್​​ಗಳನ್ನು ಪರಿಶೀಲಿಸದೇ ಹೋದರೆ ಇವು ನಿಮ್ಮ ಡೇಟಾ ಕಳವು ಮಾಡಬಹುದು. ಅಸಲಿ ವೆಬ್​​ಸೈಟ್​ಗಳು ಸುರಕ್ಷತಾ ಗುಣಮಟ್ಟವನ್ನು ಹೊಂದಿರುತ್ತದೆ.

ಹೆಚ್ಚುತ್ತಿರುವ ಬೆದರಿಕೆ: ಸೈಬರ್​ ಅಪರಾಧಗಳು ಆಗಾಗ್ಗೆ ಆನ್​ಲೈನ್​ ಶಾಪಿಂಗ್​ ಮಾಡುವ, ಕಸ್ಟಮರ್​ ಸರ್ವೀಸ್​ ಎದುರು ನೋಡುವರು. ಪ್ರಯಾಣದ ಟಿಕೆಟ್​ ರದ್ದು ಮಾಡುವಂತಹರನ್ನು ಗುರಿಯಾಗಿಸಿಕೊಂಡಿರುತ್ತದೆ. ಬಳಕೆದಾರರ ನಂಬಿಕೆ ಮೂಡಿಸಲು ಇವರು ಬ್ರಾಂಡ್​, ಶೋರೂಮ್​ ಅಥವಾ ವಾಹನ ಡೀಲರ್​ಶಿಪ್​ನಂಹಹ ಸೇವೆ ನೀಡುವ ಜಾಲತಾಣದಂತೆ ಬಿಂಬಿಸಿಕೊಳ್ಳುತ್ತಾರೆ.

ಇರಲಿ ಎಚ್ಚರಿಕೆ: ಈ ರೀತಿಯ ವಂಚನೆ ತಪ್ಪಿಸಿಲು ಈ ಅಂಶಗಳನ್ನು ಮರಿಬೇಡಿ.

  • ನೇರವಾಗಿ ಅಧಿಕೃತ ಕಂಪನಿಯ ವೆಬ್​ಸೈಟ್​​ಗಳಿಗೆ ಮಾತ್ರವೇ ಭೇಟಿ ನೀಡಿ
  • ಬಹು ಮೂಲಗಳಿಂದ ಸಂಪರ್ಕ ಮಾಹಿತಿಗಳ ಕ್ರಾಸ್​ ಚೆಕ್​ ಮಾಡಿ.
  • ಅಪರಿಚಿತ ಅಥವಾ ಪರಿಶೀಲಿಸದ ಮೂಲದ ಲಿಂಕ್​ ತಪ್ಪಿಸಿ

ದೊಡ್ಡ ಮಟ್ಟದ ನಷ್ಟ ತಪ್ಪಿಸಲು ಒಂದು ಸಣ್ಣ ಮುನ್ನೆಚ್ಚರಿಕೆ ಸಾಕು ಎಂಬುದನ್ನು ನಾವು ಮರೆಯಬಾರದು. ಆನ್​ಲೈನ್​ ಸೇವೆ ವಿಚಾರದಲ್ಲಿ ಎಚ್ಚರಿದಿಂದ ಇದ್ದು, ಅನುಮಾನಸ್ಪದ ವೆಬ್​ಸೈಟ್​ಗಳ ಕುರಿತು ಅಧಿಕಾರಿಗಳಿಗೆ ವರದಿ ಮಾಡುವಂತೆ ಸೈಬರ್​ ತಜ್ಞರು ತಿಳಿಸಿದ್ದಾರೆ.

ಇದನ್ನೂ ಓದಿ: AI ಜನರೇಟೆಡ್​ ಎರರ್ ​- ಪ್ರೋನ್​ ಫೀಚರ್ಸ್ ತೆಗೆದುಹಾಕಲು ಆಪಲ್​ ನಿರ್ಧಾರ, ಕಾರಣವೇನು?

ಇದನ್ನೂ ಓದಿ: ಇಲ್ಲಿನ ಮಕ್ಕಳಿಗೆ ನೆರವಾಗುತ್ತಿದೆ ರೋಬೋಟ್​ ಸ್ನೇಹ; ಭಾವನಾತ್ಮಕವಾಗಿ ಹತ್ತಿರವಾಗುತ್ತಿರುವುದಕ್ಕೆ ಕಾರಣವೇ ಇದು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.