ಹೈದರಾಬಾದ್: ಟೆಕ್ ದೈತ್ಯ ಗೂಗಲ್ ತನ್ನ ಆಂಡ್ರಾಯ್ಡ್ ಬಳಕೆದಾರರಿಗಾಗಿ ಬಹುನಿರೀಕ್ಷಿತ ಜೆಮಿನಿ ಲೈವ್ ಫೀಚರ್ ಬಿಡುಗಡೆ ಮಾಡಿದೆ. ಅದು ಕೂಡ ಉಚಿತವಾಗಿ! ಈಗ ಅಂಡ್ರಾಯ್ಡ್ ಬಳಕೆದಾರರು ಕ್ಯಾಮೆರಾ ಮತ್ತು ಸ್ಟ್ರೀನ್ ರೆಕಾರ್ಡಿಂಗ್‌ನೊಂದಿಗೆ ಜೆಮಿನಿ ಲೈವ್ ತಮ್ಮಿಷ್ಟದಂತೆ ಬಳಸಬಹುದು. ಮುಂಬರುವ ವಾರದಲ್ಲಿ ಎಲ್ಲ ಆಂಡ್ರಾಯ್ಡ್ ಬಳಕೆದಾರರನ್ನು ತಲುಪುವ ನಿರೀಕ್ಷೆಯಿದೆ ಎಂದು ಗೂಗಲ್ ತಿಳಿಸಿದೆ.
ಜೆಮಿನಿ ಲೈವ್ ಫೀಚರ್ ಮೂಲಕ ಆಂಡ್ರಾಯ್ಡ್ ಬಳಕೆದಾರರು ತಮ್ಮ ಸರ್ಚ್ ಅಥವಾ ಫೋನ್ ಚಟುವಟಿಕೆಗಾಗಿ Al ಚಾಲಿತ ಫಲಿತಾಂಶಗಳನ್ನು ಪಡೆಯಬಹುದಾಗಿದೆ. ಆರಂಭದಲ್ಲಿ ಈ ಫೀಚರ್ಗಾಗಿ ಬಳಕೆದಾರರು ಹಣ ಸಂದಾಯ ಮಾಡಬೇಕಾಗಿತ್ತು. ಪಿಕ್ಸೆಲ್ 9 ಸರಣಿ ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 25 ಸರಣಿಗಳಿಗೆ ಮಾತ್ರ ಈ ವೈಶಿಷ್ಟ್ಯವನ್ನು ಉಚಿತವಾಗಿ ನೀಡಲಾಗಿತ್ತು. ಇತರ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ, ಜೆಮಿನಿ ಲೈವ್‌ಗೆ ಪ್ರವೇಶವನ್ನು ಜೆಮಿನಿ ಅಡ್ವಾನ್ಸ್ಡ್ ಲಾಕ್ ಮಾಡಲಾಗಿತ್ತು. ಆದರೆ, ಇದೀಗ ಉಚಿತವಾಗಿ ಎಲ್ಲ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಾಗುವಂತೆ ಮಾರ್ಪಾಡು ಮಾಡಿದೆ.
"ಕ್ಯಾಮೆರಾ ಮತ್ತು ಸ್ಕ್ರೀನ್ ಹಂಚಿಕೆಯೊಂದಿಗೆ ಜೆಮಿನಿ ಲೈವ್ ಬಗ್ಗೆ ನಮಗೆ ಉತ್ತಮ ಪ್ರತಿಕ್ರಿಯೆಗಳು ಬರುತ್ತಿವೆ. ಆದ್ದರಿಂದ ನಾವು ಅದನ್ನು ಹೆಚ್ಚಿನ ಜನರಿಗೆ ತರಲು ನಿರ್ಧರಿಸಿದ್ದೇವೆ. ಇಂದಿನಿಂದ ಮತ್ತು ಮುಂಬರುವ ವಾರಗಳಲ್ಲಿ, ನಾವು ಜೆಮಿನಿ ಅಪ್ಲಿಕೇಶನ್‌ನೊಂದಿಗೆ ಎಲ್ಲಾ ಆಂಡ್ರಾಯ್ಡ್ ಬಳಕೆದಾರರಿಗೆ ಇದನ್ನು ಬಿಡುಗಡೆ ಮಾಡುತ್ತಿದ್ದೇವೆ" ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡುವ ಮೂಲಕ ಗೂಗಲ್ ಈ ವೈಶಿಷ್ಟ್ಯದ ಬಗ್ಗೆ ಹೇಳಿಕೊಂಡಿದೆ.
ಕಳೆದ ವಾರವಷ್ಟೇ ಟೆಕ್ ದೈತ್ಯ ಜೆಮಿನಿ ಲೈವ್ ಫೀಚರ್ ಅನ್ನು ಬಿಡುಗಡೆ ಮಾಡಲಾಗಿದ್ದು, ಭವಿಷ್ಯದಲ್ಲಿ ಮತ್ತಷ್ಟು ಅಪ್ಡೇಟ್ ಅಂಶಗಳನ್ನು ಸೇರ್ಪಡೆ ಮಾಡಿಕೊಳ್ಳಲಿದೆ. ಸದ್ಯಕ್ಕೆ ಜೆಮಿನಿ ಲೈವ್ ಫೀಚರ್ನಿಂದ ಎಲ್ಲ ಆಂಡ್ರಾಯ್ಡ್ ಬಳಕೆದಾರರು ಗೂಗಲ್‌ನ ಜೆಮಿನಿ ಲೈವ್‌ನಲ್ಲಿ ಸ್ಟ್ರೀನ್ ಶಾಟ್ ಹಂಚಿಕೆ ಮತ್ತು ಕ್ಯಾಮೆರಾ ವೈಶಿಷ್ಟ್ಯಗಳೊಂದಿಗೆ ಪ್ರಶ್ನೆಗಳನ್ನು ಕೇಳಬಹುದು, ವಾಯ್ಸ್ ಆಧಾರಿತ ಮಾಹಿತಿ ಪಡೆಯಬಹುದು, ನೈಜ ಸಮಯದಲ್ಲಿ ಸಂಭಾಷಣೆಗಳನ್ನು ರೆಕಾರ್ಡ್ ಮಾಡಬಹುದು ಮತ್ತು ವಿಶ್ಲೇಷಿಸಬಹುದು. ಕೃತಕ ಬುದ್ಧಿಮತ್ತೆ (Al) ಸಹಾಯಕರೊಂದಿಗೆ ವಿಚಾರಗಳನ್ನು ತಿಳಿದುಕೊಳ್ಳಬಹುದು. ತಮ್ಮ ಮೊಬೈಲ್ ಸ್ಕ್ರೀನ್ ಮೇಲೆ ಸಂಬಂಧಿತ ವಿಷಯವನ್ನು ವೀಕ್ಷಿಸಬಹುದು ಅಥವಾ ತಮ್ಮ ಸುತ್ತಲಿನ ಪ್ರಪಂಚದಲ್ಲಿರುವ ವಸ್ತುಗಳನ್ನು ಸಹ ವೀಕ್ಷಿಸಬಹುದಾಗಿದೆ.
ಸಹಜ ರೀತಿಯಲ್ಲಿ AI ಕೆಲಸ: ಸರಳವಾಗಿ ಹೇಳುವುದಾದರೆ, ಸ್ಕ್ರೀನ್ ಶಾಟ್ ಹಂಚಿಕೆ ಅಥವಾ ಧ್ವನಿ ಚಾಟ್‌ನ ಮೂಲಕ ನೀವು ಎಲ್ಲ ಮಾಹಿತಿಯನ್ನು ಪಡೆಯುವ ಒಂದು ಆ್ಯಪ್ ಆಗಿದ್ದು, ಇದರಲ್ಲಿ ಬಳಕೆದಾರರು ಮತ್ತು AI ಇಬ್ಬರೂ ಪರಸ್ಪರ ಮಾತನಾಡಬಹುದು ಮತ್ತು ಪ್ರತಿಕ್ರಿಯೆಯನ್ನು ನೀಡಬಹುದು. AI ಇಲ್ಲಿ ಸ್ವಾಭಾವಿಕವಾಗಿ ಕೆಲಸ ಮಾಡುತ್ತದೆ.
ಉದಾಹರಣೆಯಾಗಿ ಹೇಳುವುದಾದರೆ... ಗಣಿತದ ಸಮಸ್ಯೆಯನ್ನು ಪರಿಹರಿಸಲು, ಫೋನ್‌ನ ಕ್ಯಾಮೆರಾವನ್ನು ಕಾಗದದ ಮೇಲಿನ ಸಮಸ್ಯೆಗೆ ತೋರಿಸಿ ಮತ್ತು ಅದನ್ನು ಹೇಗೆ ಪರಿಹರಿಸಬೇಕು ಎಂದು ಜೆಮಿನಿ ಲೈವ್ AI ಬಾಟ್‌ಗೆ ಕೇಳಿದರೆ ಸಾಕು, ಇದು ತಾರ್ಕಿಕ ಕಾರಣಗಳೊಂದಿಗೆ ಹಂತ - ಹಂತದ ಮಾರ್ಗದರ್ಶನ ನೀಡುತ್ತದೆ. ಅಲ್ಲದೇ ನಮಗೆ ಅರ್ಥವಾಗುವಂತೆ ತಿಳಿಸುವ ಮೂಲಕ ಅದನ್ನು ಪೂರ್ಣಗೊಳಿಸುತ್ತದೆ.
ಬಳಕೆದಾರರು ತಮ್ಮ ಪರದೆ ಅಥವಾ ಕ್ಯಾಮೆರಾವನ್ನು ಹಂಚಿಕೊಳ್ಳಲು ಮತ್ತು ಬಹುತೇಕ ಯಾವುದೇ ವಿಷಯದ ಮೇಲೆ AI ನಿಂದ ಸಹಾಯ ಪಡೆಯಲು ಅವಕಾಶ ನೀಡುತ್ತದೆ. ಇದಕ್ಕೂ ಮೊದಲು, ಪಿಕ್ಸೆಲ್ 9 ಸರಣಿ ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಸರಣಿಗಳಿಗೆ ಈ ವೈಶಿಷ್ಟ್ಯವನ್ನು ಉಚಿತವಾಗಿ ನೀಡಲಾಗಿತ್ತು. ಇತರ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ, ಜೆಮಿನಿ ಲೈವ್‌ಗೆ ಪ್ರವೇಶವನ್ನು ಜೆಮಿನಿ ಅಡ್ವಾನ್ಸ್ಡ್‌ನ ಹಿಂದೆ ಲಾಕ್ ಮಾಡಲಾಗಿದೆ.
ಜೆಮಿನಿ ಲೈವ್ ಒಂದು ರೀತಿಯಲ್ಲಿ ಜೆಮಿನಿಯ ಕಣ್ಣುಗಳಂತಿದ್ದು, ಗೂಗಲ್‌ನ AI ಸಹಾಯಕ ಬಳಕೆದಾರರು ಏನು ನೋಡುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಮಲ್ಟಿಮೋಡಲ್ AI ಅನ್ನು ಬಳಸಿಕೊಂಡು ಬಳಕೆದಾರರು ತಮ್ಮ ಪರದೆಗಳಲ್ಲಿ ಅಥವಾ ಕ್ಯಾಮೆರಾ ವೀಕ್ಷಣೆಯಲ್ಲಿ ಏನಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಕೂಡ ಇದು ಸಹಾಯ ಮಾಡುತ್ತದೆ. ನವೀಕರಣಗಳ ಕುರಿತು ಸಾಮಾನ್ಯ ಮಾಹಿತಿಗಿಂತ ಹೆಚ್ಚಿನದನ್ನು ಜೆಮಿನಿ ಲೈವ್ ಫೀಚರ್ ಮೂಲಕ ಪಡೆಯಬಹುದು.
ಜೆಮಿನಿ ಲೈವ್ ಬಳಸುವುದು ಹೇಗೆ ?: ನಿಮ್ಮ ಆಂಡ್ರಾಯ್ಡ್ ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲಿ, ಜೆಮಿನಿ ಮೊಬೈಲ್ ಅಪ್ಲಿಕೇಶನ್ ತೆರೆಯಿರಿ. "ಹೇ ಗೂಗಲ್, ಲೈವ್ ಆಗಿ ಮಾತನಾಡೋಣ" ಅಥವಾ "ಹೇ ಗೂಗಲ್ ಈ ವಿಷಯ ಕುರಿತು ಮಾತನಾಡೋಣ" ಎಂದು ಹೇಳುವ ಮೂಲಕ ನೀವು ಲೈವ್‌ಗೆ ಹೋಗಬಹುದು. ಅಲ್ಲದೇ ಹೀಗೂ ಸಂವಹನ ಮಾಡುವ ಮೂಲಕ ಅರ್ಥೈಸಿಕೊಳ್ಳಬಹುದು.
ಜೆಮಿನಿ AI ಸಹಾಯಕವನ್ನು ಆ್ಯಕ್ಟಿವ್ ಮಾಡಿ: ಜೆಮಿನಿ AI ಸಹಾಯಕವನ್ನು ತೆರೆಯಲು ಪವರ್ ಬಟನ್ ಒತ್ತಿ ಹಿಡಿದುಕೊಳ್ಳಿ.
ಜೆಮಿನಿ ಲೈವ್ ಅನ್ನು ಆ್ಯಕ್ಟಿವ್ ಮಾಡಿ: ಜೆಮಿನಿ ಲೈವ್ ಅನ್ನು ಆ್ಯಕ್ಟಿವ್ ಮಾಡಲು ಮೈಕ್ ಐಕಾನ್ ಪಕ್ಕದಲ್ಲಿರುವ ಮೂರು ಸಾಲುಗಳಿಂದ ಪ್ರತಿನಿಧಿಸಲ್ಪಡುವ ಹೊಸ ಲೈವ್ ಬಟನ್ ಟ್ಯಾಪ್ ಮಾಡಿ.
ನಿಮ್ಮ ಸಂವಹನ ಮೋಡ್ ಆಯ್ಕೆ ಮಾಡಿ: ಕ್ಯಾಮೆರಾ ಆಯ್ಕೆಯನ್ನು ಅಥವಾ ಪರದೆಯ ಕೆಳಭಾಗದಲ್ಲಿರುವ ಸ್ಕ್ರೀನ್-ಹಂಚಿಕೆ ಆಯ್ಕೆಯನ್ನು ಆಯ್ಕೆ ಮಾಡಿ.
ಒಮ್ಮೆ ಆ್ಯಕ್ಟಿವ್ ಮಾಡಿದ ನಂತರ, ನೀವು AI ಸಹಾಯಕರಿಂದ ನಿಮಗೆ ಬೇಕಾದ ಪ್ರಶ್ನೆಗಳನ್ನು ಕೇಳಬಹುದು ಮತ್ತು ಅತ್ತ ಕಡೆಯಿಂದ ಪ್ರತಿಕ್ರಿಯೆಗಳನ್ನು ಪಡೆಯಬಹುದು. ಜೆಮಿನಿ ಜೊತೆಗಿನ ನಿಮ್ಮ ಸಂಭಾಷಣೆಯ ಸಮಯದಲ್ಲಿ ನೀವು ಕ್ಯಾಮೆರಾ ಮತ್ತು ಸ್ಕ್ರೀನ್-ಹಂಚಿಕೆ ಕಾರ್ಯಚಟುವಟಿಕೆಗಳನ್ನು ಸಹ ಪ್ರವೇಶಿಸಬಹುದು.
ಇದನ್ನೂ ಓದಿ: ಬಿಗ್ ಬ್ಯಾಟರಿ, ಸೂಪರ್ AI ಫೀಚರ್ಸ್: ಮಾರುಕಟ್ಟೆಗೆ ಬರ್ತಿದೆ ಒಪ್ಪೊ ಹೊಸ ಮಾಡೆಲ್ - OPPO K13 5G LAUNCH DATE