ETV Bharat / technology

ಒಡಿಶಾದಲ್ಲಿ ಇಂದು DRDO ಕ್ಷಿಪಣಿ ಪರೀಕ್ಷೆ: 6 ಗ್ರಾಮಗಳ 3 ಸಾವಿರ ನಿವಾಸಿಗಳ ಸ್ಥಳಾಂತರ - Missile Test

Missile Test In ITR Chandipur Odisha: ಒಡಿಶಾದ ಚಂಡೀಪುರದಲ್ಲಿ ಇಂದು ಡಿಆರ್‌ಡಿಒ ಪರೀಕ್ಷಾರ್ಥ ಕ್ಷಿಪಣಿ ಉಡಾವಣೆ ನಡೆಯಲಿದೆ. ಲಾಂಚ್ ಪ್ಯಾಡ್ ಸಮೀಪದ ಗ್ರಾಮಗಳ 3,000ಕ್ಕೂ ಹೆಚ್ಚು ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

author img

By ETV Bharat Tech Team

Published : Sep 12, 2024, 10:09 AM IST

PEOPLE DISPLACED  ITR CHANDIPUR  DRDO MISSILE TEST
ಒಡಿಶಾದಲ್ಲಿಂದು DRDO ಕ್ಷಿಪಣಿ ಪರೀಕ್ಷೆ (ETV Bharat)

DRDO Missile Test: ಒಡಿಶಾದ ಚಂಡೀಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ಐಟಿಆರ್)ನಿಂದ ಇಂದು ಕ್ಷಿಪಣಿ ಪರೀಕ್ಷೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಲಾಂಚ್ ಪ್ಯಾಡ್​ನ ಎರಡೂವರೆ ಕಿಲೋಮೀಟರ್ ವ್ಯಾಪ್ತಿಯ ಜನರನ್ನು ಬೇರೆಡೆ ಸ್ಥಳಾಂತರಿಸಲಾಗಿದೆ.

ಜನರು ಇಂದು ಬೆಳಗ್ಗೆ ತಮ್ಮ ಮನೆಗಳನ್ನು ತೊರೆದು ತಾತ್ಕಾಲಿಕ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಇದಕ್ಕಾಗಿ ಜಿಲ್ಲಾಡಳಿತ ಹಾಗೂ ಪೊಲೀಸ್ ಆಡಳಿತ ಸೂಕ್ತ ಕ್ರಮಗಳನ್ನು ಕೈಗೊಂಡಿದೆ. ಚಂಡಿಪುರದ ITR LC-III ಲಾಂಚ್ ಪ್ಯಾಡ್‌ನಿಂದ ಉಡಾವಣೆ ನಡೆಯಲಿದೆ.

ಜೈದೇವಕಸಬಾ ಪಾಹಿ ಮತ್ತು ಸಹಜನಗರ ಪಾಹಿ ಗ್ರಾಮಗಳ 1,093 ಜನರು, ಭೀಮಪುರ ಪಾಹಿ ಮತ್ತು ತುಂಡ್ರಾ ಪಾಹಿ ಗ್ರಾಮಗಳ 895 ಜನರು ಮತ್ತು ಖಡುಪಾಹಿ ಮತ್ತು ಕುಸುಮುಳಿಯಿಂದ 1,112 ಜನರು ಸೇರಿದಂತೆ ಒಟ್ಟು 3,100 ಜನರನ್ನು ಸ್ಥಳಾಂತರಿಸಲಾಗಿದೆ. ತಾತ್ಕಾಲಿಕ ಶಿಬಿರಗಳಲ್ಲಿ ಅವರಿಗ ಸೂಕ್ತ ಸೌಲಭ್ಯ ನೀಡಲಾಗುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಜೈದೇವಕಸಬಾ ಪಾಹಿ ಮತ್ತು ಸಹಜನನಗರ ಪಾಹಿಯ ಜನರಿಗೆ ಜಯದೇವಕಸ್ಬಾ ಸೈಕ್ಲೋನ್ ಶೆಲ್ಟರ್‌ನಲ್ಲಿ ತಾತ್ಕಾಲಿಕ ಶಿಬಿರ ನಿರ್ಮಿಸಲಾಗಿದೆ. ಅದೇ ರೀತಿ, ಖಾಡು ಪಾಹಿ ಮತ್ತು ತುಂಡ್ರಾ ಪಾಹಿಯ ಜನರಿಗೆ ತಾತ್ಕಾಲಿಕ ಶಿಬಿರಗಳನ್ನು ಖಾದು ಸೈಕ್ಲೋನ್ ಶೆಲ್ಟರ್‌ನಲ್ಲಿ ಮಾಡಲಾಗಿದೆ. ಕುಸುಮುಲಿ ಮತ್ತು ಭೀಮಪುರ ಕಣಿವೆಗಳ ಜನರಿಗೆ ಭೀಮ್‌ಪುರ ಸೈಕ್ಲೋನ್​ ಶೆಲ್ಟರ್​ನಲ್ಲಿ ಆಶ್ರಯ ನೀಡಲಾಗಿದೆ. ಕ್ಷಿಪಣಿ ಪರೀಕ್ಷೆಯ ನಂತರ ಜಿಲ್ಲಾಡಳಿತ ಅವರನ್ನು ಗ್ರಾಮಕ್ಕೆ ಕರೆತರಲಿದೆ ಎಂದು ಡಿಆರ್​ಡಿಒ ಹೇಳಿದೆ.

ಈಗಾಗಲೇ ಸೂಚಿಸಲಾದ ಪ್ರದೇಶಗಳಲ್ಲಿ ಬೆಳಗ್ಗೆಯಿಂದ ಕ್ಷಿಪಣಿ ಪರೀಕ್ಷೆ ಮುಗಿಯುವವರೆಗೆ ಗ್ರಾಮಸ್ಥರು ತಾತ್ಕಾಲಿಕ ಶಿಬಿರಗಳಲ್ಲೇ ಉಳಿಯುವಂತೆ ಧ್ವನಿವರ್ಧಕಗಳ ಮೂಲಕ ತಿಳಿಸಲಾಗಿದೆ. ತಾತ್ಕಾಲಿಕ ಆಶ್ರಯದಲ್ಲಿ ಜನರಿಗೆ ಊಟೋಪಹಾರದ ವ್ಯವಸ್ಥೆಯಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಎಸ್ಪಿ ಪ್ರತಿಕ್ರಿಯಿಸಿ, "ತಾತ್ಕಾಲಿಕ ಆಶ್ರಯಗಳಲ್ಲಿ ನಿರಾಶ್ರಿತರಿಗೆ ಅನುಕೂಲವಾಗುವಂತೆ 100ಕ್ಕೂ ಹೆಚ್ಚು ಸರ್ಕಾರಿ ಅಧಿಕಾರಿಗಳು ಮತ್ತು ನೌಕರರನ್ನು ನಿಯೋಜಿಸಲಾಗಿದೆ. ಪೊಲೀಸ್ ಆಡಳಿತದಿಂದ ಹದಿನೈದು ಪೊಲೀಸ್ ವಿಭಾಗಗಳನ್ನು ನೇಮಿಸಲಾಗಿದೆ. ಜನರ ಮನೆಗಳು ಮತ್ತು ಆಸ್ತಿಗಳು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಜಾಗರೂಕತೆ ವಹಿಸಿದ್ದಾರೆ. ಜನರ ಸುರಕ್ಷತೆಗೆ ವಿಶೇಷ ಆದ್ಯತೆ ನೀಡಲಾಗಿದೆ" ಎಂದು ಹೇಳಿದರು.

ಇದನ್ನೂ ಓದಿ: ಪ್ರತಿ ಡಿವೈಸ್​ನಲ್ಲಿ ಭಾರತೀಯ ನಿರ್ಮಿತ ಚಿಪ್ ಹೊಂದುವುದು ನಮ್ಮ ಕನಸು: ಪ್ರಧಾನಿ ಮೋದಿ - Made in India Chip

ETV Bharat Logo

Copyright © 2024 Ushodaya Enterprises Pvt. Ltd., All Rights Reserved.