Dolphins Welcome Sunita Williams: ಒಂಬತ್ತು ತಿಂಗಳ ಕಾಯುವಿಕೆಯ ನಂತರ ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಸೇರಿದಂತೆ ನಾಲ್ವರು ನಾಸಾ ಗಗನಯಾತ್ರಿಗಳು ಬಾಹ್ಯಾಕಾಶ ನಿಲ್ದಾಣದಿಂದ ಸುರಕ್ಷಿತವಾಗಿ ಇಂದು ಬೆಳಗ್ಗೆ (ಭಾರತೀಯ ಕಾಲಮಾನ) ಭೂಮಿಗೆ ಮರಳಿದ್ದಾರೆ.
ಫ್ಲೋರಿಡಾ ಸಮುದ್ರದಲ್ಲಿ ಇಳಿದ ಸ್ಪೇಸ್‌ಎಕ್ಸ್‌ನ ಕ್ರೂ-9 ನೌಕೆಯನ್ನು ಸ್ವಾಗತಿಸಲು ಅಮೆರಿಕದ ಕೋಸ್ಟ್ ಗಾರ್ಡ್ ಜೊತೆಗೆ ಡಾಲ್ಫಿನ್‌ಗಳೂ ಸಹ ಅಲ್ಲಿದ್ದವು. ನೌಕೆ ಇಳಿಯುತ್ತಿದ್ದಾಗ ಅದರ ಬಳಿ ಡಾಲ್ಫಿನ್‌ಗಳು ಈಜುತ್ತಿದ್ದ ದೃಶ್ಯ ಸೆರೆಯಾಗಿದೆ. ವಿಡಿಯೋದಲ್ಲಿ ಕೋಸ್ಟ್ ಗಾರ್ಡ್ ಬೋಟ್ಗಳು ಮತ್ತು ಸ್ಪೇಸ್‌ಎಕ್ಸ್ ಹಡಗನ್ನೂ ಕಾಣಬಹುದು.
Dolphins were in the gulf to welcome the NASA astronauts home after being rescued.
— primalkey (@primalkey) March 18, 2025
Congratulations Elon for bringing back the Astronauts ! pic.twitter.com/bg8AN5FTOg
ಒಂಬತ್ತು ತಿಂಗಳ ಕಾಯುವಿಕೆ ಸುಖಾಂತ್ಯ: ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಕಳೆದ ವರ್ಷದ ಜೂನ್ 5ರಂದು ಬೋಯಿಂಗ್‌ನ ಸ್ಟಾರ್‌ಲೈನರ್ ನೌಕೆಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದ್ದರು. ಅದಾದ ನಂತರ, ನೌಕೆಯಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ ಸುನೀತಾ ಮತ್ತು ಸಹ ಗಗನಯಾತ್ರಿಗಳು ಬಾಹ್ಯಾಕಾಶ ನಿಲ್ದಾಣದಲ್ಲೇ ಸಿಲುಕಿಕೊಂಡಿದ್ದರು. ಸ್ಟಾರ್‌ಲೈನರ್ ನೌಕೆಯಲ್ಲಿ ಹೀಲಿಯಂ ಸೋರಿಕೆಯಾಗಿತ್ತು.
A pod of dolphins is assisting in the NASA / SpaceX Crew-9 recovery 💙🐬 pic.twitter.com/pKhQZkBM7F
— Owen Sparks (@OwenSparks_) March 18, 2025
ಸುನೀತಾ ತಮ್ಮ ವೃತ್ತಿಜೀವನದಲ್ಲಿ 9 ವಿಭಿನ್ನ ಬಾಹ್ಯಾಕಾಶ ನಡಿಗೆ (Space Walk) ಒಳಗೊಂಡಂತೆ 62 ಗಂಟೆಗಳ ಕಾಲ ಬಾಹ್ಯಾಕಾಶ ನಡಿಗೆ ಮಾಡಿದ್ದಾರೆ. ಅನುಭವಿ ಗಗನಯಾತ್ರಿ ಸುನೀತಾರನ್ನು ಐಎಸ್‌ಎಸ್‌ನಲ್ಲಿ ಮೂರು ತಿಂಗಳು ಕಳೆದ ನಂತರ ನಿಲ್ದಾಣದ ಕಮಾಂಡರ್ ಆಗಿ ನೇಮಿಸಲಾಯಿತು. ಮತ್ತು ಈ ತಿಂಗಳ ಆರಂಭದವರೆಗೂ ಅವರು ಹುದ್ದೆಯಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ಇದನ್ನೂ ಓದಿ: ಪ್ರತಿ ಸಲ ಬಾಹ್ಯಾಕಾಶ ನಡಿಗೆ ಬಳಿಕ ಭಾರತಕ್ಕೆ ಭೇಟಿ ನೀಡುವ ಸುನೀತಾ ವಿಲಿಯಮ್ಸ್: ಈ ಬಾರಿ?