ETV Bharat / technology

FRI ಸೇಫ್​ಗಾರ್ಡ್​ ಪರಿಚಯಿಸಿದ ಕೇಂದ್ರ: ಮೊಬೈಲ್​ ಬಳಕೆದಾರರಿಗೆ ವಂಚನೆಗಳಿಂದ ಸಿಗುವುದೇ ಮುಕ್ತಿ? - FRI SAFEGUARD

FRI Safeguard: ಸೈಬರ್ ವಂಚನೆಯ ಬಗ್ಗೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ದೂರಸಂಪರ್ಕದಲ್ಲಿ ಸೈಬರ್ ವಂಚನೆಯನ್ನು ತಡೆಗಟ್ಟಲು ಭಾರತ ಸರ್ಕಾರವು ಅತ್ಯಾಧುನಿಕ ಸಾಧನವೊಂದನ್ನು ಪರಿಚಯಿಸಿದೆ.

FINANCIAL FRAUD RISK INDICATOR  CYBER FRAUD AND FINANCIAL CRIME  DIGITAL INTELLIGENCE PLATFORM  DEPARTMENT OF TELECOMMUNICATIONS
ಸಾಂದರ್ಭಿಕ ಚಿತ್ರ (ETV Bharat File Photo)
author img

By ETV Bharat Tech Team

Published : May 23, 2025 at 9:23 AM IST

2 Min Read

FRI Safeguard: ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯು ಸೈಬರ್ ವಂಚನೆಯನ್ನು ನಿಗ್ರಹಿಸಲು ಅತ್ಯಾಧುನಿಕ ಸಾಧನವಾದ Financial Fraud Risk Indicator (FRI) ಅನ್ನು ಪರಿಚಯಿಸಿದೆ. ಈ ಉಪಕರಣವು ಬ್ಯಾಂಕುಗಳು, ಯುಪಿಐ ಸೇವಾ ಪೂರೈಕೆದಾರರು ಮತ್ತು ಇತರ ಹಣಕಾಸು ಸಂಸ್ಥೆಗಳಿಗೆ ಮೊಬೈಲ್ ನಂಬರ್​ನ ಅಪಾಯದ ವರ್ಗದ ಬಗ್ಗೆ ತಿಳಿಸುವ ಮೂಲಕ ಹಣಕಾಸಿನ ವಂಚನೆಯನ್ನು ತಡೆಯಲು ನೆರವಾಗಲಿದೆ.

FRI ಕಾರ್ಯವೇನು?: FRI ಎನ್ನುವುದು ಮೊಬೈಲ್ ಸಂಖ್ಯೆಗಳನ್ನು ಮಧ್ಯಮ, ಹೆಚ್ಚಿನ ಮತ್ತು ಅತಿ ಹೆಚ್ಚಿನ ಅಪಾಯ ಎಂದು ಮೂರು ವರ್ಗಗಳಾಗಿ ವರ್ಗೀಕರಿಸುವ ಒಂದು ರಿಸ್ಕ್​ ಸ್ಕೋರಿಂಗ್ ಸಿಸ್ಟಮ್​ ಆಗಿದೆ. ಈ ಸ್ಕೋರ್ ಭಾರತೀಯ ಸೈಬರ್ ಕ್ರೈಂ ಕೋಆರ್ಡಿನೇಷನ್​ ಸೆಂಟರ್​ (I4C), DOT ಯ ಚಕ್ಷು ಪೋರ್ಟಲ್ ಮತ್ತು ಬ್ಯಾಂಕ್‌ಗಳಿಂದ ಬಂದ ಮಾಹಿತಿ ಸೇರಿದಂತೆ ವಿವಿಧ ಮೂಲಗಳಿಂದ ಪಡೆದ ಮಾಹಿತಿಯನ್ನು ಆಧರಿಸಿದೆ.

ಒಂದು ಮೊಬೈಲ್ ಸಂಖ್ಯೆಗೆ ಸೈಬರ್ ವಂಚನೆಯ ದೂರುಗಳು ನಿರಂತರವಾಗಿ ಬಂದರೆ ಅಥವಾ ಯಾವುದೇ ಅಪರಾಧದಲ್ಲಿ ಭಾಗಿಯಾಗಿರುವುದು ಕಂಡುಬಂದರೆ ಅದನ್ನು 'ಹೆಚ್ಚಿನ' ಅಥವಾ 'ಅತಿ ಹೆಚ್ಚಿನ ಅಪಾಯ' ವರ್ಗಗಳೆಂದು ಪರಿಗಣಿಲಾಗುತ್ತದೆ. ಅಂತಹ ಸಂಖ್ಯೆಯಿಂದ ಡಿಜಿಟಲ್ ವಹಿವಾಟು ನಡೆದಾಗಲೆಲ್ಲಾ ಸಂಬಂಧಪಟ್ಟ ಬ್ಯಾಂಕ್ ಅಥವಾ UPI ಅಪ್ಲಿಕೇಶನ್‌ಗೆ ತಕ್ಷಣವೇ ಎಚ್ಚರಿಕೆ ಸಿಗುತ್ತದೆ ಮತ್ತು ಅಗತ್ಯವಿದ್ದರೆ ವಹಿವಾಟನ್ನು ನಿಲ್ಲಿಸಲಾಗುತ್ತದೆ.

ಡಿಜಿಟಲ್ ಇಂಟೆಲಿಜೆನ್ಸ್ ಯುನಿಟ್​ ಪ್ರಮುಖ ಪಾತ್ರ: ಡಿಜಿಟಲ್ ಇಂಟೆಲಿಜೆನ್ಸ್ ಯುನಿಟ್ (ಡಿಐಯು) ಮೊಬೈಲ್ ಸಂಖ್ಯೆ ರದ್ದತಿ ಪಟ್ಟಿ (ಎಂಎನ್ಆರ್ಎಲ್) ಮೂಲಕ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳೊಂದಿಗೆ ನಿರಂತರವಾಗಿ ಡೇಟಾವನ್ನು ಹಂಚಿಕೊಳ್ಳುತ್ತಿದೆ. ಈ ಪಟ್ಟಿಯು ಸೈಬರ್ ಅಪರಾಧದಲ್ಲಿ ಬಳಸಲಾಗಿರುವುದು ಅಥವಾ ಪರಿಶೀಲನೆ ವಿಫಲವಾಗುವಂತಹ ಕೆಲವು ಕಾರಣಗಳಿಂದ ನಿರ್ಬಂಧಿಸಲಾದ ಸಂಖ್ಯೆಗಳನ್ನು ಒಳಗೊಂಡಿದೆ.

ಸೈಬರ್ ವಂಚನೆಯಲ್ಲಿ ಭಾಗಿಯಾಗಿರುವ ಮೊಬೈಲ್ ಸಂಖ್ಯೆಗಳು ಸಾಮಾನ್ಯವಾಗಿ ಕೆಲವೇ ದಿನಗಳವರೆಗೆ ಸಕ್ರಿಯವಾಗಿರುತ್ತವೆ. ಆದ್ದರಿಂದ ಯಾವುದೇ ಸಂಖ್ಯೆಯು ಅನುಮಾನಾಸ್ಪದವಾಗಿದ್ದರೆ ಅದನ್ನು ತನಿಖೆಗೆ ಒಳಪಡಿಸಲಾಗುತ್ತದೆ. ಸಂಬಂಧಪಟ್ಟವರಿಗೆ ತಕ್ಷಣವೇ ಮಾಹಿತಿ ನೀಡಲಾಗುತ್ತದೆ.

ಮೊದಲ ಬಳಕೆದಾರರಾದ ಫೋನ್‌ಪೇ: ಡಿಜಿಟಲ್ ಪಾವತಿ ಕಂಪನಿ ಫೋನ್‌ಪೇ FRI ಅನ್ನು ಅಳವಡಿಸಿಕೊಂಡ ಮೊದಲ ಸಂಸ್ಥೆಯಾಗಿದೆ. ''ನಾವು 'ಅತಿ ಹೆಚ್ಚಿನ ಅಪಾಯ' ವರ್ಗಕ್ಕೆ ಸೇರುವ ಮೊಬೈಲ್ ಸಂಖ್ಯೆಗಳಿಂದ ವಹಿವಾಟುಗಳನ್ನು ನಿರ್ಬಂಧಿಸುತ್ತಿದ್ದೇವೆ'' ಎಂದು ಫೋನ್‌ಪೇ ಹೇಳಿದೆ. ಅಲ್ಲದೆ, 'PhonePe Protect' ವೈಶಿಷ್ಟ್ಯದ ಅಡಿಯಲ್ಲಿ ಅಪ್ಲಿಕೇಶನ್ ಈಗ ಸ್ಕ್ರೀನ್​ ಮೇಲೆ ಅಲರ್ಟ್​ಗಳನ್ನು ತೋರಿಸುತ್ತಿದೆ. 'ಮಧ್ಯಮ ಅಪಾಯ' ಸಂಖ್ಯೆಗಳೊಂದಿಗಿನ ವಹಿವಾಟುಗಳ ಕುರಿತು ಕಂಪನಿಯು ಶೀಘ್ರದಲ್ಲೇ ಎಚ್ಚರಿಕೆ ನೀಡಲು ಪ್ರಾರಂಭಿಸಲಿದೆ.

ಓದಿ: ಪಿಎಂ ಇ-ಡ್ರೈವ್; ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ ಹಂಚಿಕೆ ಭರವಸೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.