ETV Bharat / technology

ದೇಶದಲ್ಲಿ ಬ್ರಾಡ್‌ಬ್ಯಾಂಡ್​ಗೆ ಭಾರೀ ಬೇಡಿಕೆ: ಬಳಕೆದಾರರ ಸಂಖ್ಯೆ 944 ಮಿಲಿಯನ್‌ಗೆ ಏರಿಕೆ! - BROADBAND SUBSCRIBERS REPORT

Broadband Subscribers Report: ದಿನದಿಂದ ದಿನಕ್ಕೆ ಇಂಟರ್​ನೆಟ್​ ಬಳಕೆದಾರರ ಏರಿಕೆ ಗಗನಕ್ಕೇರುತ್ತಿದೆ. ಸದ್ಯ ಬ್ರಾಡ್‌ಬ್ಯಾಂಡ್ ಬಳಕೆದಾರರ ಸಂಖ್ಯೆ 944 ಮಿಲಿಯನ್‌ಗೆ ತಲುಪಿದೆ. ಈ ಬಗ್ಗೆ ಸರ್ಕಾರವೇ ಮಾಹಿತಿ ನೀಡಿದೆ.

BROADBAND SUBSCRIBERS DATA  TELE DENSITY UP  MOBILE NUMBER PORTABILITY  TELECOM REGULATORY AUTHORITY INDIA
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Tech Team

Published : April 25, 2025 at 8:16 AM IST

2 Min Read

Broadband Subscribers Report: ನಮ್ಮ ದೇಶದಲ್ಲಿ ಬ್ರಾಡ್‌ಬ್ಯಾಂಡ್ ಬಳಕೆದಾರರ ಸಂಖ್ಯೆ ಕಡಿಮೆಯಿಲ್ಲ. ಇತ್ತೀಚೆಗೆ ಸರ್ಕಾರ ಬಿಡುಗಡೆ ಮಾಡಿದ ವರದಿಯಲ್ಲಿ ಅಚ್ಚರಿಗೊಳಿಸುವ ಅಂಶ ಹೊರ ಬಿದ್ದಿದೆ. ಹೌದು, ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಗುರುವಾರ ಬಿಡುಗಡೆ ಮಾಡಿದ ಡಾಟಾದಲ್ಲಿ ಕೆಲವೊಂದು ಮಾಹಿತಿಗಳು ಹೊರಬಿದ್ದಿವೆ.

ಫೆಬ್ರವರಿ 2025ರ ಅಂತ್ಯದ ವೇಳೆಗೆ ಭಾರತದಲ್ಲಿ ಬ್ರಾಡ್‌ಬ್ಯಾಂಡ್ ಚಂದಾದಾರರ ಸಂಖ್ಯೆ 944.04 ಮಿಲಿಯನ್ ಅಂದ್ರೆ 94.4 ಕೋಟಿಗೆ ತಲುಪಿದೆ. ಈ ಡಾಟಾವು ದೇಶಾದ್ಯಂತ 1,189 ದೂರಸಂಪರ್ಕ ನಿರ್ವಾಹಕರಿಂದ ಪಡೆದ ಮಾಹಿತಿಯನ್ನು ಆಧರಿಸಿದೆ.

ಟ್ರಾಯ್​ ಪ್ರಕಾರ, ಫೆಬ್ರವರಿಯಲ್ಲಿ 12.06 ಮಿಲಿಯನ್ (1.2 ಕೋಟಿ) ಮೊಬೈಲ್ ಗ್ರಾಹಕರು ಮೊಬೈಲ್ ಸಂಖ್ಯೆ ಪೋರ್ಟಬಿಲಿಟಿಗಾಗಿ (MNP) ಅರ್ಜಿ ಸಲ್ಲಿಸಿದ್ದಾರೆ. ಜನವರಿ ಅಂತ್ಯದ ವೇಳೆಗೆ MNP ಅರ್ಜಿಗಳ ಸಂಚಿತ ಸಂಖ್ಯೆ 1,093.33 ಮಿಲಿಯನ್ ಆಗಿದ್ದು, ಫೆಬ್ರವರಿ ಅಂತ್ಯದ ವೇಳೆಗೆ ಇದು 1,105.39 ಮಿಲಿಯನ್‌ಗೆ ಏರಿದೆ ಎಂದು ಮಾಹಿತಿ ನೀಡಿದೆ.

ವೈರ್‌ಲೆಸ್ ವಿಭಾಗದಲ್ಲಿ ಖಾಸಗಿ ಟೆಲಿಕಾಂ ಕಂಪನಿಗಳು ಒಟ್ಟು ಶೇ.92.03 ಮಾರುಕಟ್ಟೆ ಪಾಲನ್ನು ಹೊಂದಿದ್ದು, ಪ್ರಾಬಲ್ಯ ಮುಂದುವರಿಸಿದೆ. ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ಕೇವಲ ಶೇ.7.97 ಪಾಲನ್ನು ಹೊಂದಿವೆ. ಈ ಅವಧಿಯಲ್ಲಿ ಒಟ್ಟು ದೂರವಾಣಿ ಬಳಕೆದಾರರ ಸಂಖ್ಯೆಯೂ ಹೆಚ್ಚಾಗಿದೆ. ಜನವರಿಯಲ್ಲಿ ಈ ಸಂಖ್ಯೆ 1,192.03 ಮಿಲಿಯನ್ ಆಗಿದ್ದು, ಫೆಬ್ರವರಿಯಲ್ಲಿ 1,197.23 ಮಿಲಿಯನ್‌ಗೆ ಏರಿದೆ. ಅಂದರೆ ಮಾಸಿಕ ಶೇ.0.42ರಷ್ಟು ಬೆಳವಣಿಗೆ ದರ ದಾಖಲಾಗಿದೆ.

ಶೇ.55.79ರಷ್ಟು ಚಂದಾದಾರರು ನಗರ ಪ್ರದೇಶದವರು: ನಗರ ಪ್ರದೇಶಗಳಲ್ಲಿ ಗ್ರಾಹಕರ ಸಂಖ್ಯೆ 663.83 ಮಿಲಿಯನ್‌ನಿಂದ 667.93 ಮಿಲಿಯನ್‌ಗೆ ಏರಿದರೆ, ಗ್ರಾಮೀಣ ಗ್ರಾಹಕರು 528.20 ಮಿಲಿಯನ್‌ನಿಂದ 529.31 ಮಿಲಿಯನ್‌ಗೆ ಹೆಚ್ಚಳವಾಗಿದ್ದಾರೆ. ದೇಶದಲ್ಲಿ ಟೆಲಿ-ಡೆನ್ಸಿಟಿ (ಪ್ರತಿ 100 ಜನರಿಗೆ ದೂರವಾಣಿ ಸಂಪರ್ಕ) ಜನವರಿಯಲ್ಲಿ ಶೇ.84.54ರಿಂದ ಫೆಬ್ರವರಿಯಲ್ಲಿ ಶೇ.84.85ಕ್ಕೆ ಏರಿದೆ. ಅರ್ಬನ್​ ಟೆಲಿ-ಡೆನ್ಸಿಟಿ ಶೇ.131.40ರಿಂದ ಶೇ.132.01ಕ್ಕೆ ಮತ್ತು ರೂರಲ್​ ಟೆಲಿ-ಡೆನ್ಸಿಟಿ ಶೇ.58.38ರಿಂದ ಶೇ.58.48ಕ್ಕೆ ಏರಿದೆ. ಒಟ್ಟು ದೂರವಾಣಿ ಚಂದಾದಾರರಲ್ಲಿ, ಶೇಕಡಾ 55.79ರಷ್ಟು ಜನರು ನಗರ ಪ್ರದೇಶದಿಂದ ಬಂದವರು ಮತ್ತು ಶೇಕಡಾ 44.21ರಷ್ಟು ಜನರು ಗ್ರಾಮೀಣ ಪ್ರದೇಶದಿಂದ ಬಂದವರು.

ಯಂತ್ರದಿಂದ ಯಂತ್ರಕ್ಕೆ (M2M) ಮೊಬೈಲ್ ಸಂಪರ್ಕಗಳ ಸಂಖ್ಯೆಯೂ ಹೆಚ್ಚಳ ಕಂಡಿದೆ. ಜನವರಿಯಲ್ಲಿ 63.09 ಮಿಲಿಯನ್ ಇದ್ದಿದ್ದು, ಫೆಬ್ರವರಿಯಲ್ಲಿ 64.71 ಮಿಲಿಯನ್‌ಗೆ ಏರಿದೆ. ಇವುಗಳಲ್ಲಿ, ಭಾರ್ತಿ ಏರ್‌ಟೆಲ್ ಲಿಮಿಟೆಡ್ ಅತಿ ಹೆಚ್ಚು ಸಂಪರ್ಕಗಳನ್ನು ಹೊಂದಿದ್ದು, 33.86 ಮಿಲಿಯನ್ ಆಗಿದೆ. ಇದು ಶೇಕಡಾ 52.33ರಷ್ಟು M2M ಮಾರುಕಟ್ಟೆ ಪಾಲನ್ನು ನೀಡುತ್ತದೆ. ಏರ್‌ಟೆಲ್ ನಂತರದ ಸ್ಥಾನದಲ್ಲಿ ವೊಡಾಫೋನ್ ಐಡಿಯಾ ಲಿಮಿಟೆಡ್ ಇದೆ.

ಓದಿ: ಗುಡ್​ ನ್ಯೂಸ್​; ಭಾರತೀಯರು ಚಂದ್ರನ ಮೇಲೆ ಇಳಿಯುವುದು ಯಾವಾಗ? ಇಸ್ರೋ ಅಧ್ಯಕ್ಷರ ಹೇಳಿಕೆ ಹೀಗಿದೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.