Automatic Cars Under 8 Lakh: ಭಾರತದಲ್ಲಿ ಮ್ಯಾನುವಲ್ ಕಾರುಗಳ ಜೊತೆಗೆ ಆಟೋಮ್ಯಾಟಿಕ್ ಕಾರುಗಳಿಗೂ ಬೇಡಿಕೆ ಹೆಚ್ಚಿದೆ. ಏಕೆಂದರೆ ಆಟೋ ಮ್ಯಾಟಿಕ್ ವಾಹನಗಳು ಆರಾಮದಾಯಕ ಮತ್ತು ಅನುಕೂಲಕರ ಚಾಲನಾ ಅನುಭವ ಒದಗಿಸುತ್ತವೆ. ಗೇರ್‌ಗಳನ್ನು ಬದಲಾಯಿಸುವ ಮತ್ತು ಕ್ಲಚ್ ಪೆಡಲ್ ಬಳಸುವ ಅಗತ್ಯವಿಲ್ಲದ ಕಾರಣ ಆಟೋಮ್ಯಾಟಿಕ್ ಕಾರುಗಳು ಗ್ರಾಹಕರಿಗೆ ಇಷ್ಟವಾಗಲು ಕಾರಣ.
ಅನೇಕ ಕಂಪನಿಗಳ ಹೊಸದಾಗಿ ಬಿಡುಗಡೆಯಾದ ಆರಂಭಿಕ ಹಂತದ ಕಾರುಗಳು ಸಹ ಈಗ ಸ್ವಯಂಚಾಲಿತ ಗೇರ್‌ಬಾಕ್ಸ್ ಆಯ್ಕೆಗಳನ್ನು ನೀಡುತ್ತಿವೆ. ಪ್ರೀಮಿಯಂ ಬೆಲೆಯಲ್ಲಿ ಹಲವು ಆಯ್ಕೆಗಳು ಲಭ್ಯವಿದ್ದರೂ, ಭಾರತದಲ್ಲಿ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಅತ್ಯುತ್ತಮ ಆಟೋಮ್ಯಾಟಿಕ್ ಕಾರುಗಳು ಮಾರುತಿ ಸುಜುಕಿ ಮತ್ತು ರೆನಾಲ್ಟ್‌ನಿಂದ ಬಂದವು. 8 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಐದು ಆಟೋಮ್ಯಾಟಿಕ್ ಕಾರುಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..

5. ಮಾರುತಿ ಸುಜುಕಿ ವ್ಯಾಗನ್ ಆರ್ (ಬೆಲೆ: ರೂ. 6.74 ಲಕ್ಷದಿಂದ ರೂ. 7.50 ಲಕ್ಷ): ಮಾರುತಿ ವ್ಯಾಗನ್ ಆರ್ ಎರಡು ಎಂಜಿನ್ ಆಯ್ಕೆಗಳೊಂದಿಗೆ ಬರುವ ಒಂದು ಉತ್ತಮ ಆಟೋಮೆಟಿಕ್ ಕಾರು. ಎರಡು ಎಂಜಿನ್ ಆಯ್ಕೆಗಳು ಇವೆ. ಅವು 1.0-ಲೀಟರ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಮತ್ತು 1.2-ಲೀಟರ್ 4-ಸಿಲಿಂಡರ್ ಪೆಟ್ರೋಲ್ ಎಂಜಿನ್. ಎರಡೂ ಎಂಜಿನ್‌ಗಳು VXi, ZXi ಮತ್ತು ZXi+ ಟ್ರಿಮ್ ಹಂತಗಳಲ್ಲಿ ಮ್ಯಾನುವಲ್ ಟ್ರಾನ್ಸ್‌ಮಿಷನ್ ಮತ್ತು ಆಟೋಮ್ಯಾಟಿಕ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಎಂಬ ಎರಡು ಆಯ್ಕೆಗಳಲ್ಲಿ ಲಭ್ಯವಿದೆ.
1.0-ಲೀಟರ್ ಎಂಜಿನ್ 68bhp ಪವರ್ ಮತ್ತು 91Nm ಟಾರ್ಕ್ ಉತ್ಪಾದಿಸುತ್ತದೆ. ಆದರೆ 1.2-ಲೀಟರ್ ಎಂಜಿನ್ 90bhp ಪವರ್ ಮತ್ತು 114Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. AMT ಆಯ್ಕೆಯು ನಗರ ಪ್ರದೇಶಗಳಲ್ಲಿ ಇದನ್ನು ಬಳಸುವವರಿಗೆ ಉತ್ತಮವಾಗಿರುತ್ತದೆ. ಟ್ರಾನ್ಸ್‌ಮಿಷನ್ ಮ್ಯಾನುವಲ್ ಇನ್‌ಪುಟ್‌ಗಳೊಂದಿಗೆ ಉತ್ತಮವಾಗಿ ಕಾರ್ಯ ನಿರ್ವಹಣೆ ತೋರುತ್ತಿದೆ. ಮತ್ತು ‘ಹೆಡ್ ನೋಡ್’ ಪರಿಣಾಮವು ಹೆಚ್ಚಾಗಿ ಮೊದಲ ಮತ್ತು ಎರಡನೇ ಗೇರ್‌ಗಳ ನಡುವೆ ಸೀಮಿತವಾಗಿರುತ್ತದೆ.

4. ಮಾರುತಿ ಸುಜುಕಿ ಸೆಲೆರಿಯೊ (ಬೆಲೆ: ರೂ. 6.50 ಲಕ್ಷದಿಂದ ರೂ. 7.37 ಲಕ್ಷ): ಮಾರುತಿ ಸೆಲೆರಿಯೊ ಮತ್ತೊಂದು ಉತ್ತಮ ಆಟೋಮೆಟಿಕ್ ಕಾರು. ಕಂಪನಿಯು ತನ್ನ VXi, ZXi ಮತ್ತು ZXi+ ರೂಪಾಂತರಗಳಲ್ಲಿ ಆಟೋಮೆಟಿಕ್ ಮತ್ತು ಮ್ಯಾನುವಲ್ ಟ್ರಾನ್ಸ್‌ಮಿಷನ್ ಗೇರ್‌ಬಾಕ್ಸ್ ನೀಡುತ್ತದೆ. ಸೆಲೆರಿಯೊ ಕೂಡ ಮಾರುತಿ ಆಲ್ಟೊ K10 ನಂತೆಯೇ 1.0-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಎಂಜಿನ್ 68bhp ಪವರ್ ಮತ್ತು 91Nm ಟಾರ್ಕ್ ಉತ್ಪಾದಿಸುತ್ತದೆ. AMT ಆಯ್ಕೆ ಹೊಂದಿರುವ ಸೆಲೆರಿಯೊ ಪ್ರಸ್ತುತ ಭಾರತದಲ್ಲಿ ಮಾರಾಟದಲ್ಲಿರುವ ಅತ್ಯಂತ ಇಂಧನ - ಸಮರ್ಥ ಕಾರು. ಇದು ಪ್ರತಿ ಲೀಟರ್‌ಗೆ 26.68 ಕಿ.ಮೀ ಮೈಲೇಜ್ ಪಡೆಯುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

3. ಮಾರುತಿ ಸುಜುಕಿ ಆಲ್ಟೊ ಕೆ10 (ಬೆಲೆ: ರೂ. 5.81 ಲಕ್ಷದಿಂದ ರೂ. 6.10 ಲಕ್ಷ): ಮಾರುತಿ ಆಲ್ಟೊ ಕೆ10 ಪ್ರಸ್ತುತ ಭಾರತದಲ್ಲಿ ಅತ್ಯಂತ ಅಗ್ಗದ ಕಾರು. ಆದರೆ ಆಲ್ಟೊ ಕೆ10 ಅತ್ಯುತ್ತಮ ಕೈಗೆಟುಕುವ ಆಟೋಮ್ಯಾಟಿಕ್ ಕಾರುಗಳ ಲಿಸ್ಟ್ನಲ್ಲಿ ಮೂರನೇ ಸ್ಥಾನದಲ್ಲಿದೆ. ಏಕೆಂದರೆ ಇದು ಮಾರುತಿಯ ಸ್ವಂತ ಆಟೋಮ್ಯಾಟಿಕ್ ಕಾರು ಎಸ್-ಪ್ರೆಸ್ಸೊಗಿಂತ ಹೆಚ್ಚು ದುಬಾರಿಯಾಗಿದೆ. ಇದು ಎರಡನೇ ಸ್ಥಾನದಲ್ಲಿದೆ. ಆಲ್ಟೊ ಕೆ10 ನ ಟಾಪ್-ಸ್ಪೆಕ್ ವಿಎಕ್ಸ್‌ಐ ಮತ್ತು ವಿಎಕ್ಸ್‌ಐ+ ರೂಪಾಂತರಗಳನ್ನು 5-ಸ್ಪೀಡ್ ಎಎಂಟಿ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ನೀಡಲಾಗುತ್ತದೆ. ಇದು ಕೇವಲ ಒಂದು ಎಂಜಿನ್ ಆಯ್ಕೆಯನ್ನು ಹೊಂದಿದೆ. ಇದು 1.0-ಲೀಟರ್, 3-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಜೋಡಿಯಾಗಿದೆ. ಈ ಎಂಜಿನ್ 66 ಬಿಎಚ್‌ಪಿ ಪವರ್ ಮತ್ತು 89 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

2. ಮಾರುತಿ ಸುಜುಕಿ ಎಸ್-ಪ್ರೆಸ್ಸೊ (ಬೆಲೆ: ರೂ. 5.72 ಲಕ್ಷದಿಂದ ರೂ. 6 ಲಕ್ಷ): ಮಾರುತಿ ಎಸ್-ಪ್ರೆಸ್ಸೊ ಕಡಿಮೆ ಬೆಲೆಯಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ಹೊಂದಿರುವ ಎರಡನೇ ಅತ್ಯುತ್ತಮ ಕಾರು. ಇದರ ಉನ್ನತ-ವಿಶಿಷ್ಟ ರೂಪಾಂತರಗಳಾದ VXi (O) ಮತ್ತು VXi + (O) ಗಳನ್ನು 5-ಸ್ಪೀಡ್ AMT ಗೇರ್‌ಬಾಕ್ಸ್‌ನೊಂದಿಗೆ ನೀಡಲಾಗುತ್ತದೆ. 5-ಸ್ಪೀಡ್ AMT ಗೇರ್‌ಬಾಕ್ಸ್ ಅನ್ನು 1.0-ಲೀಟರ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಜೋಡಿಸಲಾಗಿದೆ. ಈ ಎಂಜಿನ್ 68 bhp ಪವರ್ ಮತ್ತು 91 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಉತ್ತಮ ಶ್ರೇಣಿಯನ್ನು ನೀಡುವ ಮಾರುತಿ ಎಸ್-ಪ್ರೆಸ್ಸೊದ ಸ್ವಯಂ ಚಾಲಿತ ರೂಪಾಂತರವು ರೆನಾಲ್ಟ್ ಕ್ವಿಡ್‌ಗಿಂತ ರೂ. 45,000 ಕಡಿಮೆ ಬೆಲೆಯನ್ನು ಹೊಂದಿದೆ. ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ರೂಪಾಂತರಗಳ ಅಗತ್ಯವಿರುವ ಬಳಕೆದಾರರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ.

1. ರೆನಾಲ್ಟ್ ಕ್ವಿಡ್ (ಬೆಲೆ: ರೂ. 5.55 ಲಕ್ಷದಿಂದ ರೂ. 6.45 ಲಕ್ಷ): ರೆನಾಲ್ಟ್ ಕ್ವಿಡ್ ಪ್ರಸ್ತುತ ಭಾರತದಲ್ಲಿ ಲಭ್ಯವಿರುವ ಅತ್ಯಂತ ಅಗ್ಗದ ಹ್ಯಾಚ್‌ಬ್ಯಾಕ್ ಆಗಿದ್ದು, ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿದೆ. ಕಂಪನಿಯು ಮಿಡ್-ಸ್ಪೆಕ್ RXL(O) ಟ್ರಿಮ್‌ನಿಂದಲೇ 5-ಸ್ಪೀಡ್ AMT ಗೇರ್‌ಬಾಕ್ಸ್ ಅನ್ನು ನೀಡುತ್ತದೆ. ಇದು 1.0-ಲೀಟರ್, 3-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಜೋಡಿಯಾಗಿದ್ದು, ಅದು 68bhp ಪವರ್ ಮತ್ತು 92.5Nm ಟಾರ್ಕ್ ಅನ್ನು ಅಭಿವೃದ್ಧಿಪಡಿಸುತ್ತದೆ.
ಓದಿ: ಶಾಕಿಂಗ್ ನಿರ್ಧಾರ: ಭಾರತದಲ್ಲಿ ಈ ಕಾರಿಗೆ ವಿದಾಯ ಹೇಳಿದ ವೋಲ್ವೋ!