Indian Scooter Exports Record: ಇದು ಭಾರತೀಯ ಆಟೋಮೊಬೈಲ್ ವಲಯಕ್ಕೆ ಹೆಮ್ಮೆಯ ವಿಷಯ. ಭಾರತದಲ್ಲಿ ತಯಾರಿಸಲಾದ ಸ್ಕೂಟರ್‌ಗಳು ಜಾಗತಿಕ ಮಾರುಕಟ್ಟೆಯಲ್ಲಿ ತಮ್ಮ ಮೌಲ್ಯವನ್ನು ಸಾಬೀತುಪಡಿಸುತ್ತಿವೆ. ಹೋಂಡಾ ಆ್ಯಕ್ಟಿವಾ ಮತ್ತು ಟಿವಿಎಸ್ ಜುಪಿಟರ್‌ನಂತಹ ದೈತ್ಯ ಸ್ಕೂಟರ್‌ಗಳನ್ನು ಹಿಂದಿಕ್ಕಿ, ಸ್ಕೂಟರ್ವೊಂದು ವಿದೇಶಿಯರ ಹೃದಯ ಗೆಲ್ಲುತ್ತಿದೆ.
ಭಾರತದಲ್ಲಿ ಹೆಚ್ಚು ಮಾರಾಟವಾಗುವ ಸ್ಕೂಟರ್‌ಗಳ ಪಟ್ಟಿಯಲ್ಲಿ ಹೋಂಡಾ ಆ್ಯಕ್ಟಿವಾ ಮತ್ತು ಟಿವಿಎಸ್ ಜೂಪಿಟರ್ ಅಗ್ರಸ್ಥಾನದಲ್ಲಿರಬಹುದು. ಆದರೆ ನಮ್ಮ ದೇಶದಲ್ಲಿ ತಯಾರಾದ ಸ್ಕೂಟರ್‌ಗಳನ್ನು ವಿದೇಶಗಳಿಗೆ ರಫ್ತು ಮಾಡುವ ವಿಷಯಕ್ಕೆ ಬಂದಾಗ ಈ ಎರಡೂ ಕಂಪನಿಗಳ ಇತರ ಮಾದರಿಗಳನ್ನು ಮೀರಿಸಿ ಮುನ್ನುಗ್ಗುತ್ತಿವೆ. ಅಂತಹ ಒಂದು ಅದ್ಭುತ ಸ್ಕೂಟರ್ ಈಗ ಹೆಚ್ಚು ಪವರ್ಫುಲ್ ಅಪ್ಡೇಟ್ನೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಆ ಸ್ಕೂಟರ್‌ನ ಹೆಸರು ಟಿವಿಎಸ್ ಎನ್‌ಟಾರ್ಕ್.
2024-25ನೇ ಆರ್ಥಿಕ ವರ್ಷದಲ್ಲಿ 64,988 ಸ್ಕೂಟರ್ ವಿದೇಶಗಳಿಗೆ ರಫ್ತಾಗಿದೆ. ನಮ್ಮ ದೇಶದ ಅತ್ಯಂತ ಜನಪ್ರಿಯ ಮಾದರಿಯಾದ ಹೋಂಡಾ ಆ್ಯಕ್ಟಿವಾದ ಕೇವಲ 41,026 ಯುನಿಟ್‌ಗಳು ಮತ್ತು ಟಿವಿಎಸ್ ಜೂಪಿಟರ್‌ನ ಕೇವಲ 19,504 ಯುನಿಟ್‌ಗಳನ್ನು ಮಾತ್ರ ರಫ್ತು ಮಾಡಲಾಗಿದೆ. ಈ ಅಂಕಿಅಂಶಗಳು TVS Ntorqನ ಅಂತಾರಾಷ್ಟ್ರೀಯ ಜನಪ್ರಿಯತೆಯನ್ನು ಸ್ಪಷ್ಟವಾಗಿ ಪ್ರದರ್ಶಿಸುತ್ತವೆ. ಇದೀಗ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಲು ಟಿವಿಎಸ್ ಸಿದ್ಧತೆ ನಡೆಸಿದೆ.
ಟಿವಿಎಸ್ ಕಳೆದ ಏಳು ವರ್ಷಗಳಿಂದ ಎನ್‌ಟಾರ್ಕ್ ಬ್ರಾಂಡ್‌ನಡಿಯಲ್ಲಿ ಮಾರುಕಟ್ಟೆಯಲ್ಲಿ ವಿವಿಧ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಈ ಸರಣಿಯಲ್ಲಿ 125 ಸಿಸಿ ಎಂಜಿನ್‌ನೊಂದಿಗೆ ಬಿಡುಗಡೆಯಾಗುತ್ತಿರುವ ಮೊದಲ ಸ್ಕೂಟರ್ ಇದಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಈ ಸ್ಕೂಟರ್ ಹೋಂಡಾ ಆ್ಯಕ್ಟಿವಾ 125, ಟಿವಿಎಸ್ ಜುಪಿಟರ್ 125, ಸುಜುಕಿ ಆಕ್ಸೆಸ್ 125, ಹೀರೋ ಬರ್ಗ್‌ಮನ್ ಸ್ಟ್ರೀಟ್ 125, ಮತ್ತು ಯಮಹಾ ರೇಜರ್ 125 ಗಳೊಂದಿಗೆ ಸ್ಪರ್ಧಿಸುತ್ತದೆ.
ಆದರೂ ಸ್ಕೂಟರ್ ವಿಭಾಗದಲ್ಲಿ 150 ಸಿಸಿ ಮತ್ತು 160 ಸಿಸಿ ಎಂಜಿನ್ ಹೊಂದಿರುವ ಕಾರ್ಯಕ್ಷಮತೆಯ ವಾಹನಗಳಿಗೆ ಪ್ರಸ್ತುತ ಬೇಡಿಕೆ ಹೆಚ್ಚುತ್ತಿದೆ. ಈ ಪ್ರವೃತ್ತಿಯನ್ನು ಗುರುತಿಸಿರುವ ಟಿವಿಎಸ್, ಈಗ ಎನ್‌ಟಾರ್ಕ್ ಬ್ರಾಂಡ್ ಅಡಿಯಲ್ಲಿ 150 ಸಿಸಿ ಎಂಜಿನ್ ಹೊಂದಿರುವ ಹೊಸ ಸ್ಕೂಟರ್ ಅನ್ನು ತರಲು ಸಿದ್ಧತೆ ನಡೆಸಿದೆ.
ಹಬ್ಬದ ಸೀಸನ್ ಮುಂಚಿತವಾಗಿ ಟಿವಿಎಸ್ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಐಕ್ಯೂಬ್‌ನ ಕಡಿಮೆ ಬೆಲೆಯ ರೂಪಾಂತರವನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ. ವಿಶ್ವಾಸಾರ್ಹ ಮಾಧ್ಯಮ ವರದಿಗಳ ಪ್ರಕಾರ, ಕಂಪನಿಯು ತನ್ನ 150 ಸಿಸಿ ಟಿವಿಎಸ್ ಎನ್‌ಟಾರ್ಕ್ ಸ್ಕೂಟರ್ ಅನ್ನು ಅದೇ ಸಮಯದಲ್ಲಿ ಅಥವಾ ಕೆಲವೇ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಇದು ನಿಜವಾಗಿದ್ದರೆ ಈ ಹೊಸ ಸ್ಕೂಟರ್ ಯಮಹಾ ಏರೋಕ್ಸ್ 155 ಮತ್ತು ಹೀರೋ ಜೂಮ್ 160ನಂತಹ ಪವರ್ಫುಲ್ ಸ್ಕೂಟರ್‌ಗಳೊಂದಿಗೆ ನೇರವಾಗಿ ಸ್ಪರ್ಧಿಸುತ್ತದೆ.
ಮುಂಬರುವ ಟಿವಿಎಸ್ ಎನ್‌ಟಾರ್ಕ್ 150 ಸಿಸಿ ಸ್ಕೂಟರ್ ಹಲವು ವಿಶಿಷ್ಟ ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಪ್ರಸ್ತುತ ಟಿವಿಎಸ್ 300 ಸಿಸಿಗಿಂತ ಕಡಿಮೆ ಸಾಮರ್ಥ್ಯದ ಲಿಕ್ವಿಡ್-ಕೂಲ್ಡ್ ಎಂಜಿನ್‌ಗಳನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸಿದೆ. ಏಕೆಂದರೆ ಕಂಪನಿಯು ಪ್ರಸ್ತುತ ಈ ವರ್ಗದಲ್ಲಿರುವ ಎಂಜಿನ್‌ಗಳು ಹೆಚ್ಚಾಗಿ ಏರ್ ಕೂಲ್ಡ್ ತಂತ್ರಜ್ಞಾನದೊಂದಿಗೆ ಕಾರ್ಯನಿರ್ವಹಿಸುತ್ತವೆ.
ಹಾಗಾಗಿ ಟಿವಿಎಸ್ ತನ್ನ ಹೊಸ 150 ಸಿಸಿ ಎನ್‌ಟಾರ್ಕ್ ಸ್ಕೂಟರ್ ಅನ್ನು ಈ ಹೊಸ ಲಿಕ್ವಿಡ್-ಕೂಲ್ಡ್ ಎಂಜಿನ್‌ನೊಂದಿಗೆ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಇದರ ಜೊತೆಗೆ ಈ ಸ್ಕೂಟರ್ ಅತ್ಯಾಧುನಿಕ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಸ್ಪ್ಲಿಟ್ ಸೀಟ್ (ಎರಡು ಭಾಗಗಳಾಗಿ ವಿಂಗಡಿಸಲಾದ ಸೀಟ್) ಮತ್ತು ದೊಡ್ಡ ಅಲಾಯ್ ವೀಲ್‌ಗಳಂತಹ ಸೊಗಸಾದ ಮತ್ತು ಉಪಯುಕ್ತ ವೈಶಿಷ್ಟ್ಯಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ.
ಇದನ್ನೂ ಓದಿ: ಫ್ರಂಟ್, ಬ್ಯಾಕ್ 50ಎಂಪಿ ಕ್ಯಾಮೆರಾ: ವಿವೋ ನ್ಯೂ ಮಾಡೆಲ್ ಸ್ಮಾರ್ಟ್ಫೋನ್ ಗುರುವಾರ ಲಾಂಚ್