Bajaj New Chetak: ಬಜಾಜ್ ಆಟೋ ತನ್ನ ಎಲೆಕ್ಟ್ರಿಕ್ ವಾಹನ ವಿಭಾಗವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಪರಿಚಯಿಸಿದೆ. ‘ಬಜಾಜ್ ಚೇತಕ್ 3001’ ಎಂಬ ಹೆಸರಿನ ಈ ಇವಿ ಈಗಾಗಲೇ ಲಭ್ಯವಿರುವ ಚೇತಕ್ 2903 ಮಾದರಿಗೆ ಆಧುನಿಕ ಪರ್ಯಾಯ. ಡಿಸೈನ್, ಪರ್ಫಾರ್ಮೆನ್ಸ್ ಮತ್ತು ಬಳಕೆದಾರರ ಅಗತ್ಯತೆಗಳ ವಿಷಯದಲ್ಲಿ ಈ ಸ್ಕೂಟರ್ ಅನ್ನು ವಿಶೇಷವಾಗಿ ನಗರದ ವಾಹನ ಚಾಲಕರಿಗಾಗಿ ವಿನ್ಯಾಸಗೊಳಿಸಲಾಗಿದೆ ಎಂಬುದು ಸ್ಪಷ್ಟ.
ಏರುತ್ತಿರುವ ಪೆಟ್ರೋಲ್ ಬೆಲೆಗಳೊಂದಿಗೆ ಹೋರಾಡುತ್ತಿರುವ ಮತ್ತು ತಮ್ಮ ವೆಚ್ಚ ಕಡಿಮೆ ಮಾಡಲು ಬಯಸುವ ಗ್ರಾಹಕರಿಗಾಗಿ ಕಂಪನಿ ಈ ಮಾದರಿಯನ್ನು ವಿಶೇಷವಾಗಿ ವಿನ್ಯಾಸಗೊಳಿಸಿದೆ. ಚೇತಕ್ 35 ಸಿರೀಸ್ನ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾದ ಚೇತಕ್ 3001 ಮಾದರಿ ಮಾರಾಟದ ವಿಷಯದಲ್ಲಿ ಗಮನಾರ್ಹ ಸಾಧನೆ ಮಾಡಲಿದೆ ಎನ್ನುತ್ತದೆ ಕಂಪನಿ.
ಚೇತಕ್ 3001 ಸ್ಕೂಟರ್‌ನಲ್ಲಿ ರೈಡರ್ನ ಪಾದದ ಕೆಳಗೆ 3.0 kWh ಬ್ಯಾಟರಿ ಅಳವಡಿಸಲಾಗಿದೆ. ಇದು ಪೂರ್ಣ ಚಾರ್ಜ್‌ನಲ್ಲಿ ಸುಮಾರು 127 ಕಿ.ಮೀ ದೂರ ಕ್ರಮಿಸುವುದಾಗಿ ಕಂಪನಿ ಹೇಳಿಕೊಂಡಿದೆ. ಬ್ಯಾಟರಿಯನ್ನು ಚಾರ್ಜ್ ಮಾಡಲು 750W ಹೋಮ್ ಚಾರ್ಜರ್ ಒದಗಿಸಲಾಗಿದ್ದು, 3 ಗಂಟೆ 50 ನಿಮಿಷಗಳಲ್ಲಿ ಶೇ.80ರಷ್ಟು ಚಾರ್ಜ್ ಪೂರ್ಣಗೊಳಿಸುತ್ತದೆ. ಹೀಗಾಗಿ, ತನ್ನ ವಿಭಾಗದಲ್ಲಿ ಫಾಸ್ಟ್ ಚಾರ್ಜಿಂಗ್ ಆಗುವ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಒಂದಾಗಿದೆ.
ಮನೆಯಲ್ಲಿಯೇ ಚಾರ್ಜ್ ಮಾಡಿ ಕಡಿಮೆ ಸಮಯದಲ್ಲಿ ಮತ್ತೆ ಪ್ರಯಾಣಿಸಲು ಸಿದ್ಧವಾಗಬಹುದಾದ ಈ ಸ್ಕೂಟರ್‌ನ ವಿನ್ಯಾಸವು ಬಜಾಜ್‌ನ ಎಂಜಿನಿಯರಿಂಗ್ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳುವಂತೆ ಮಾಡುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಚೇತಕ್ 3001ರಲ್ಲಿ 35 ಲೀಟರ್ ಬೂಟ್ ಸ್ಪೇಸ್ ಲಭ್ಯವಿದೆ. ಶಾಲಾ ಚೀಲಗಳು, ದಿನಸಿ ಸಾಮಗ್ರಿ ಅಥವಾ ಹೆಚ್ಚುವರಿ ಹೆಲ್ಮೆಟ್ ಸಾಗಿಸುವ ಅಗತ್ಯವನ್ನು ಉತ್ತಮವಾಗಿ ಪೂರೈಸುತ್ತದೆ. ಹಿಂದಿನ ಮಾದರಿಗಳಿಗೆ ಹೋಲಿಸಿದರೆ ಬಳಕೆದಾರರಿಗೆ ಹೆಚ್ಚು ಪ್ರಾಯೋಗಿಕ ಸ್ಥಳಾವಕಾಶ ನೀಡುತ್ತದೆ.
ನಿಯಮಿತ ಪ್ರಯಾಣಕ್ಕಾಗಿ, ಸಣ್ಣ ಮಾಲ್‌ಗಳು ಮತ್ತು ಮಾರುಕಟ್ಟೆಗಳಿಗೆ ಹೋಗಲು ಸ್ಕೂಟರ್ ಅನ್ನು ಆರಾಮವಾಗಿ ಬಳಸಬಹುದು. ತಂತ್ರಜ್ಞಾನ, ಸುರಕ್ಷತೆ ಮತ್ತು ಬಳಕೆದಾರಸ್ನೇಹಿ ವಿನ್ಯಾಸಗಳ ವಿಷಯದಲ್ಲಿ ಈ ಸ್ಕೂಟರ್ ತನ್ನ ಸರಣಿಯಲ್ಲಿ ಒಂದು ಹೆಜ್ಜೆ ಮುಂದಿದೆ. ವಿಶೇಷವಾಗಿ, ಸ್ಕೂಟರ್‌ನ ವೈಶಿಷ್ಟ್ಯಗಳು, ಸ್ಥಿರ ನಿರ್ಮಾಣ ಮತ್ತು ಸ್ಮಾರ್ಟ್ ಸಂಪರ್ಕ ವ್ಯವಸ್ಥೆಗಳು ಎಲ್ಲವನ್ನೂ ಸಂಯೋಜಿಸಿದಾಗ, ಇದೊಂದು ಕ್ಲಾಸ್-ಲೀಡರ್ ವಾಹನ ಎನ್ನಬಹುದು.
ಹೆಚ್ಚಿನ ಸ್ಕೂಟರ್‌ಗಳಲ್ಲಿ ಸಾಮಾನ್ಯವಾಗಿ ಕಂಡುಬರದ ವೈಶಿಷ್ಟ್ಯಗಳಾದ ಮ್ಯೂಸಿಕ್, ಕಾಲ್ ಕಂಟ್ರೋಲ್ಸ್, ಆಟೋ ಆಫ್ ಟರ್ನ್ ಸಿಗ್ನಲ್‌ಗಳು, ರಿವರ್ಸ್ ಅಲರ್ಟ್, ಹಿಲ್ ಹೋಲ್ಡ್ ಅಸಿಸ್ಟ್, 'ಗೈಡ್ ಮಿ ಹೋಮ್' ಲೈಟಿಂಗ್ಸ್ ಚೇತಕ್ 3001ನಲ್ಲಿ ಲಭ್ಯ. ಇವು ಬಳಕೆದಾರರ ಅನುಭವವನ್ನು ಸುಲಭಗೊಳಿಸುವುದಲ್ಲದೆ, ಸುರಕ್ಷತೆಯನ್ನುೂಸುಧಾರಿಸುತ್ತವೆ. ಇದಲ್ಲದೆ ಚೇತಕ್ ಸೀರಿಸ್ನ ವಿಶಿಷ್ಟ ಲಕ್ಷಣವಾಗಿರುವ ಉಕ್ಕಿನ ಬಾಡಿ ನಿರ್ಮಾಣವು ಈ ಮಾದರಿಯಲ್ಲಿಯೂ ಮುಂದುವರೆದಿದೆ.
ಇದು ಸ್ಕೂಟರ್ ಅನ್ನು ಬಲಪಡಿಸುವುದಲ್ಲದೆ ಪ್ಲಾಸ್ಟಿಕ್ ಪ್ಯಾನೆಲ್‌ಗಳಿಂದ ಉಂಟಾಗುವ ಹಾನಿಯ ಅಪಾಯ ಕಡಿಮೆ ಮಾಡುತ್ತದೆ. ಫ್ಲೆಕ್ಸಿಂಗ್ ಫುಟ್ಬೋರ್ಡ್ಗಳು ಬಾಗಿಸದೆ ಮೂರು-ಸ್ಟಬಲ್ ಬಿಲ್ಡ್ಕ್ವಾಲಿಟಿ ಜೊತೆ ಈ ಸ್ಕೂಟರ್ ಮೆಟಲ್ ಶೆಲ್ ಹೊಂದಿರುವ ಅತ್ಯಂತ ಬಾಳಿಕೆ ಬರುವ ಸ್ಕೂಟರ್‌ಗಳಲ್ಲಿ ಒಂದಾಗಿದೆ. IP67 ರೇಟಿಂಗ್‌ನೊಂದಿಗೆ ಈ ಸ್ಕೂಟರ್ ಡಸ್ಟ್ ಮತ್ತು ವಾಟರ್ನಿಂದ ಸಂಪೂರ್ಣವಾಗಿ ರಕ್ಷಿಸಲ್ಪಟ್ಟಿದೆ. ಇದು ಮಳೆ, ಹುಲ್ಲಿನ ರಸ್ತೆಗಳು, ಒಣ ಪ್ರದೇಶಗಳಲ್ಲಿ ಮತ್ತು ವಿಭಿನ್ನ ಹವಾಮಾನ ಪರಿಸ್ಥಿತಿಗಳಲ್ಲಿ ಸವಾರಿ ಮಾಡಬಹುದು.
ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಹಿಂದಿನ ಚೇತಕ್ ಸರಣಿಯು ದೇಶದಲ್ಲಿ ಅತಿ ಹೆಚ್ಚು ಮಾರಾಟವಾದ ಇವಿ ಸ್ಕೂಟರ್ ಬ್ರ್ಯಾಂಡ್ ಆಗಿತ್ತು. ಬಜಾಜ್ ಹೊಸ ಚೇತಕ್ 3001 ಸ್ಕೂಟರ್ ಶೀಘ್ರದಲ್ಲೇ ಅಮೆಜಾನ್‌ನಂತಹ ಪ್ರಮುಖ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುತ್ತದೆ ಎಂದು ಘೋಷಿಸಿದೆ. ಗ್ರಾಹಕರಿಗೆ ಖರೀದಿ ಅನುಭವವನ್ನು ಇನ್ನಷ್ಟು ಸುಲಭಗೊಳಿಸುವ ಉದ್ದೇಶದಿಂದ ಈ ಡಿಜಿಟಲ್ ತಂತ್ರವನ್ನು ಜಾರಿಗೆ ತರಲಾಗುತ್ತಿದೆ. ಮುಂಬರುವ ವಾರಗಳಲ್ಲಿ ವಿತರಣೆಗಳು ಚುರುಕಾದ ವೇಗದಲ್ಲಿ ಮುಂದುವರಿಯುವ ನಿರೀಕ್ಷೆಯಿದೆ.
ಬಜಾಜ್ ಚೇತಕ್ 3001 ಬೆಲೆ, ಕಲರ್ ಆಯ್ಕೆಗಳು: ಚೇತಕ್ 3001 ಅನ್ನು ಕಂಪನಿ ರೂ. 99,990 (ಎಕ್ಸ್-ಶೋರೂಂ) ಬೆಲೆಗೆ ಬಿಡುಗಡೆ ಮಾಡಿದೆ. ಈ ಬೆಲೆಯೊಂದಿಗೆ ಸ್ಕೂಟರ್ ಈಗ ಈ ಸಾಲಿನಲ್ಲಿ ಅತ್ಯಂತ ಕೈಗೆಟುಕುವ ಸ್ಕೂಟರ್ ಆಗಿದೆ. ಇತರ ಭಾರತೀಯ EV ಗಳನ್ನೂ ಮೀರಿಸುತ್ತಿದೆ. ಚೇತಕ್ 3001 ಕಂಪನಿಯ ಇತರ ಚೇತಕ್ 2903ಗಿಂತ ಕೇವಲ 1,500 ರೂ. ಹೆಚ್ಚು ದುಬಾರಿ. ಕೆಂಪು, ಹಳದಿ ಮತ್ತು ನೀಲಿ ಬಣ್ಣಗಳಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗಿದೆ.
ಇದನ್ನೂ ಓದಿ: ದೇಶಿಯ ಮಾರುಕಟ್ಟೆಗೆ ಹೊಸ ಅಡ್ವೆಂಚರ್ ಬೈಕ್ ಪರಿಚಯಿಸಿದ ಹೋಂಡಾ: ಪ್ರೀಮಿಯಂ ಬೆಲೆ, ಸೂಪರ್ ಫೀಚರ್ಸ್