ETV Bharat / technology

ಒಂದು ಹನಿ ಪೆಟ್ರೋಲ್​ ಇಲ್ಲದೇ 110 ಕಿ.ಮೀ ಪ್ರಯಾಣ, ಹೊಸ ವಿಭಾಗಕ್ಕೆ ಕಾಲಿಟ್ಟ ಔಡಿ! - AUDI A5 MODEL

ಅನೇಕ ಆಟೋಮೊಬೈಲ್ ಕಂಪನಿಗಳು ಹೈಬ್ರಿಡ್ ಮತ್ತು ಪ್ಲಗ್-ಇನ್ ಹೈಬ್ರಿಡ್ ಎಲೆಕ್ಟ್ರಿಕ್ ವಾಹನಗಳನ್ನು ಬಳಸುತ್ತಿವೆ. ಈ ಕಾರುಗಳ ವಿಶೇಷವೆಂದರೆ ಪೆಟ್ರೋಲ್ ಜೊತೆಗೆ ಬ್ಯಾಟರಿಯಲ್ಲೂ ಚಲಿಸುತ್ತವೆ. ಸದ್ಯ ಔಡಿ ಈ ವಿಭಾಗಕ್ಕೆ ಎಂಟ್ರಿ ಕೊಡುತ್ತಿದೆ.

PHEV POWERTRAIN  AUDI A5 MODEL FEATURES  AUDI A5 SPECIFICATIONS  AUDI A5 MODEL DETAILS
ಔಡಿ (Photo Credit: Audi)
author img

By ETV Bharat Tech Team

Published : March 28, 2025 at 1:59 PM IST

1 Min Read

Audi A5 Model: ಆಟೋಮೊಬೈಲ್ ಉದ್ಯಮದಲ್ಲಿ ಹೈಬ್ರಿಡ್ ವಾಹನಗಳ ಪ್ರವೃತ್ತಿ ವೇಗವಾಗಿ ಬೆಳೆಯುತ್ತಿದೆ. ಹೆಚ್ಚಿನ ಕಾರು ತಯಾರಕರು ಹೈಬ್ರಿಡ್ ಮತ್ತು ಪ್ಲಗ್-ಇನ್ ಹೈಬ್ರಿಡ್ ಎಲೆಕ್ಟ್ರಿಕ್ ವಾಹನಗಳನ್ನು (PHEV) ಪರಿಚಯಿಸುತ್ತಿದ್ದಾರೆ. ಈಗ ಐಷಾರಾಮಿ ಕಾರು ತಯಾರಕ ಔಡಿ ಕೂಡ ತನ್ನ ಹೊಸ ಮಾದರಿ A5 ನೊಂದಿಗೆ ಈ ವಿಭಾಗವನ್ನು ಪ್ರವೇಶಿಸುತ್ತಿದೆ.

ಈ ಕಾರನ್ನು ಇತ್ತೀಚೆಗೆ ಹೊಸ PHEV ಪವರ್‌ಟ್ರೇನ್‌ನೊಂದಿಗೆ ನವೀಕರಿಸಲಾಗಿದೆ. ಅದರೊಂದಿಗೆ, ಅದು ವಿದ್ಯುತ್ ಮೋಟಾರ್ ಬಳಸಿ 110 ಕಿ.ಮೀ.ವರೆಗೆ ಪ್ರಯಾಣಿಸುತ್ತದೆ. ಇದು ದೈನಂದಿನ ಪ್ರಯಾಣಕ್ಕೆ ಪೆಟ್ರೋಲ್ ಬಳಕೆಯನ್ನು ಕಡಿಮೆ ಮಾಡಲು ಅವಕಾಶವನ್ನು ಒದಗಿಸುತ್ತದೆ. ಬ್ಯಾಟರಿ ಮತ್ತು ಪೆಟ್ರೋಲ್ ಎರಡರಿಂದಲೂ ಚಲಿಸುವುದರಿಂದ ಕಾರಿನ ನಿರ್ವಹಣೆಯೂ ಕಡಿಮೆಯಾಗುತ್ತದೆ.

ಹೊಸ PHEV ಶಕ್ತಿಶಾಲಿ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ವಿದ್ಯುತ್ ಮೋಟರ್‌ನೊಂದಿಗೆ ಜೋಡಿಸಲಾಗಿದೆ. ಇದು ಹೆಚ್ಚಿನ ಮೈಲೇಜ್ ಜೊತೆಗೆ ಉತ್ತಮ ಪವರ್​ ಡೆಲಿವರಿ ಅನ್ನು ಮಾಡುತ್ತದೆ. A5 E-ಹೈಬ್ರಿಡ್ 2.0-ಲೀಟರ್, 4-ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್​ನಿಂದ ನಿಯಂತ್ರಿಸಲ್ಪಡುತ್ತದೆ. ಇದು 252 ಬಿಎಚ್‌ಪಿ ಶಕ್ತಿಯನ್ನು ಉತ್ಪಾದಿಸುತ್ತದೆ. ಇದು 142 ಎಚ್‌ಪಿ ಶಕ್ತಿಯನ್ನು ನೀಡುವ ವಿದ್ಯುತ್ ಮೋಟರ್‌ನೊಂದಿಗೆ ಸಹ ಕಾರ್ಯನಿರ್ವಹಿಸುತ್ತದೆ. ಇವು 300 ಬಿಎಚ್‌ಪಿ ಪವರ್ ಮತ್ತು 450 ಎನ್‌ಎಂ ಟಾರ್ಕ್ ಉತ್ಪಾದಿಸುತ್ತವೆ.

ಇದು ಕ್ವಾಟ್ರೋ ಆಲ್-ವೀಲ್ ಡ್ರೈವ್ ಸಿಸ್ಟಮ್‌ನೊಂದಿಗೆ 7-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನಲ್ಲಿ ಚಲಿಸುತ್ತದೆ. ಔಡಿ ತನ್ನ ಇತ್ತೀಚಿನ A5 ಪ್ಲಗ್-ಇನ್ ಹೈಬ್ರಿಡ್ (PHEV) ಮಾದರಿಯಲ್ಲಿ ಇತ್ತೀಚಿನ ಬ್ಯಾಟರಿ ತಂತ್ರಜ್ಞಾನವನ್ನು ಪರಿಚಯಿಸಿದೆ. ಇದು ಉತ್ತಮ ಇಂಧನ ದಕ್ಷತೆಯನ್ನು ನೀಡುತ್ತದೆ ಮತ್ತು ಫಾಸ್ಟ್​ ಚಾರ್ಜ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಬ್ಯಾಟರಿ ಪ್ಯಾಕ್ 25.9 kWh ಸಾಮರ್ಥ್ಯವನ್ನು ಹೊಂದಿದೆ.

ಇದನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿದರೆ 110 ಕಿ.ಮೀ ವರೆಗೆ ಆರಾಮವಾಗಿ ಪ್ರಯಾಣಿಸಬಹುದು. ಇದು 11 kW ವರೆಗಿನ AC ಫಾಸ್ಟ್​ ಚಾರ್ಜಿಂಗ್ ಅನ್ನು ಸಪೋರ್ಟ್​ ಮಾಡುತ್ತದೆ. ಇದರರ್ಥ ಬ್ಯಾಟರಿಯನ್ನು 0 ರಿಂದ 100 ಪ್ರತಿಶತದಷ್ಟು ಸಂಪೂರ್ಣವಾಗಿ ಚಾರ್ಜ್ ಮಾಡಲು ಕೇವಲ 2.5 ಗಂಟೆಗಳು ಬೇಕಾಗುತ್ತದೆ. ಇದು ಬಳಕೆದಾರರಿಗೆ ಸಮಯವನ್ನು ಉಳಿಸುವ ಅವಕಾಶವನ್ನು ಒದಗಿಸುತ್ತದೆ. ಪ್ಲಗ್-ಇನ್ ಹೈಬ್ರಿಡ್ ಆವೃತ್ತಿಯು ಹಿಂಭಾಗದಲ್ಲಿ ಹೊಸ ಹೈ-ವೋಲ್ಟೇಜ್ ಬ್ಯಾಟರಿಯನ್ನು ಹೊಂದಿದೆ. ಇದರ ಬೆಲೆಗಳು ಮತ್ತು ಇನ್ನಿತರ ಫೀಚರ್​ಗಳು ಮುಂದಿನ ದಿನಗಳಲ್ಲಿ ತಿಳಿದು ಬರಲಿದೆ.

ಇದನ್ನೂ ಓದಿ: ಅಂತೂ ಇಂತೂ ಮಾರುಕಟ್ಟೆಗೆ ಬಂತು ರಾಯಲ್​ ಎನ್​ಫೀಲ್ಡ್​ ಕ್ಲಾಸಿಕ್​ 650!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.