APPLE STORE In Bengaluru: ಆ್ಯಪಲ್ನ ಭರವಸೆಗಳು ಭಾರತದಲ್ಲಿ ಹೊಸ ರೆಕ್ಕೆಗಳನ್ನು ಹುಟ್ಟುಹಾಕಿವೆ. ಕಂಪನಿಯು ದೇಶದಲ್ಲಿ ತನ್ನ ಉತ್ಪಾದನೆಯನ್ನು ಹೆಚ್ಚಿಸಿದೆ. ಈಗ ಅದು ಎರಡು ಹೊಸ ಆ್ಯಪಲ್ ಮಳಿಗೆಗಳನ್ನು ತೆರೆಯಲು ಯೋಜಿಸುತ್ತಿದೆ. ಅಷ್ಟೇ ಅಲ್ಲ ಮುಂಬರುವ ದಿನಗಳಲ್ಲಿ ಮುಂಬೈ ಮತ್ತು ಬೆಂಗಳೂರಿನಲ್ಲಿಯೂ ಸಹ ತನ್ನ ಶಾಪ್ ಅನ್ನು ಓಪನ್ ಮಾಡಲು ಪ್ಲಾನ್ ಮಾಡುತ್ತಿದೆ. ಆದರೂ ಈ ಸುದ್ದಿಯ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಆ್ಯಪಲ್ ಸ್ಟೋರ್‌ಗಳ ಅನುಕೂಲವೆಂದರೆ ಹೊಸ ಐಫೋನ್‌ಗಳನ್ನು ನೀವು ಇಲ್ಲಿ ವೀಕ್ಷಿಸಬಹುದು. ಅಷ್ಟೇ ಅಲ್ಲದೆ, ನಿಮ್ಮ ಕಣ್ಣುಗಳ ಮುಂದೆ ಎಲ್ಲಾ ಮಾದರಿಗಳು ಮತ್ತು ಕಲರ್ ನೋಡುವ ಮೂಲಕ ನಿಮ್ಮ ನೆಚ್ಚಿನ ಐಫೋನ್, ಐಪ್ಯಾಡ್ ಅಥವಾ ಮ್ಯಾಕ್ ಅನ್ನು ನೀವು ಖರೀದಿ ಮಾಡಬಹುದು. ಫೈನಾನ್ಷಿಯಲ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಕಂಪನಿಯು ನೋಯ್ಡಾ ಮತ್ತು ಪುಣೆಯಲ್ಲಿ ಹೊಸ ಆ್ಯಪಲ್ ಮಳಿಗೆಗಳನ್ನು ತೆರೆಯಲು ಕಂಪನಿ ಯೋಜಿಸುತ್ತಿದೆ. ಇದಕ್ಕೂ ಮೊದಲು, ಆ್ಯಪಲ್ ತನ್ನ ಮೊದಲ ಮಳಿಗೆಗಳನ್ನು ಮುಂಬೈನ ಬಿಕೆಸಿ ಮತ್ತು ದೆಹಲಿಯ ಸಾಕೇತ್‌ನಲ್ಲಿ ತೆರೆದಿದೆ.
ಆಫ್‌ಲೈನ್ ಮಾರಾಟವನ್ನು ಹೆಚ್ಚಿಸಲು ಸಹಾಯ: ವರದಿಯ ಪ್ರಕಾರ, ದೆಹಲಿಯ ಸಾಕೇತ್ ಮತ್ತು ಮುಂಬೈನ ಬಿಕೆಸಿಯಲ್ಲಿ ಹೊಸ ಮಳಿಗೆಗಳನ್ನು ತೆರೆಯುವುದರಿಂದ ಕಂಪನಿಯು ಆಫ್‌ಲೈನ್ ಮಾರಾಟವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡಿದೆ. ಈಗ ಕಂಪನಿಯು ಇನ್ನೂ ಎರಡು ಹೊಸ ಮಳಿಗೆಗಳನ್ನು ತೆರೆಯುವುದರಿಂದ ಹೆಚ್ಚಿನ ಲಾಭ ಪಡೆಯುವ ನಿರೀಕ್ಷೆಯಿದೆ. ವರದಿಯ ಪ್ರಕಾರ, ಹೊಸ ಮಳಿಗೆಗಳನ್ನು ನೋಯ್ಡಾದ ಮಾಲ್ ಆಫ್ ಇಂಡಿಯಾ ಮತ್ತು ಪುಣೆಯ ಕೋಪಾ ಮಾಲ್‌ನಲ್ಲಿ ತೆರೆಯಲಾಗುವುದು ಎಂಬ ಮಾಹಿತಿ ಹೊರಬಿದ್ದಿದೆ.
ಭಾರತದಲ್ಲಿ ಗಮನವನ್ನು ಹೆಚ್ಚಿಸುತ್ತಿದೆ ಆಪಲ್: ಇತ್ತೀಚಿನ ವರ್ಷಗಳಲ್ಲಿ ಆ್ಯಪಲ್ ಭಾರತದ ಮೇಲೆ ತನ್ನ ಗಮನವನ್ನು ಹೆಚ್ಚಿಸುತ್ತಿದೆ. ಒಂದೆಡೆ, ಭಾರತದಿಂದ ಆ್ಯಪಲ್ನ ಸಾಗಣೆ ಹೆಚ್ಚಾಗಿದೆ. ಮತ್ತೊಂದೆಡೆ, ಚೀನಾದಲ್ಲಿ ಅದರ ಸಾಗಣೆ ಕಡಿಮೆಯಾಗಿದೆ. ಚೀನಾ ಮತ್ತು ಅಮೆರಿಕ ನಡುವೆ ಹೆಚ್ಚುತ್ತಿರುವ ಸುಂಕ ಯುದ್ಧದಿಂದಾಗಿ ಆ್ಯಪಲ್ ಭಾರತದಲ್ಲಿ ಐಫೋನ್ ಉತ್ಪಾದನೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ಭಾರತದಲ್ಲಿರುವ ಎರಡೂ ಮಳಿಗೆಗಳು ಒಟ್ಟಾಗಿ ಮೊದಲ ವರ್ಷದಲ್ಲೇ 800 ಕೋಟಿ ರೂ. ಆದಾಯ ಗಳಿಸಿವೆ. ನೋಯ್ಡಾ, ಪುಣೆ ಮತ್ತು ನಂತರ ಬೆಂಗಳೂರು ಮತ್ತು ಮುಂಬೈನಲ್ಲಿ ಹೊಸ ಆ್ಯಪಲ್ ಸ್ಟೋರ್‌ಗಳನ್ನು ತೆರೆದರೆ, ಖಂಡಿತವಾಗಿಯೂ ಕಂಪನಿಯ ಆದಾಯವು ಹಲವು ಪಟ್ಟು ಹೆಚ್ಚಾಗುವ ನಿರೀಕ್ಷೆಯಿದೆ.
ಎಲ್ಲಾ ಇತ್ತೀಚಿನ ಮಾದರಿಯ ಐಫೋನ್‌ಗಳನ್ನು ಈಗ ಭಾರತದಲ್ಲಿ ತಯಾರಿಸಲಾಗುತ್ತಿದೆ ಮತ್ತು ಪ್ರಪಂಚದಾದ್ಯಂತ ಸಾಗಿಸಲಾಗುತ್ತಿದೆ. ಅಮೆರಿಕ ವಿಯೆಟ್ನಾಂ ಮೇಲಿನ ಸುಂಕವನ್ನು ಹೆಚ್ಚಿಸುವ ಬಗ್ಗೆ ಮಾತನಾಡಿರುವುದರಿಂದ ಆ್ಯಪಲ್ ಮತ್ತು ಗೂಗಲ್‌ನಂತಹ ಕಂಪನಿಗಳು ತಮ್ಮ ಉತ್ಪಾದನೆಯನ್ನು ವಿಯೆಟ್ನಾಂನಿಂದ ಭಾರತಕ್ಕೆ ಸ್ಥಳಾಂತರಿಸಲು ತಯಾರಿ ನಡೆಸುತ್ತಿವೆ ಎಂದು ಹೇಳಲಾಗುತ್ತದೆ.
ಹೊಸ ಐಫೋನ್ ಮೇಲೆ ಗಮನಹರಿಸಿದ ಆ್ಯಪಲ್: ಆ್ಯಪಲ್ ಇತ್ತೀಚೆಗೆ ಐಫೋನ್ 16e ಅನ್ನು ಬಿಡುಗಡೆ ಮಾಡಿದೆ. ಕಂಪನಿಯು ಹೊಸ ಐಫೋನ್ ಮಾದರಿಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ ಎಂದು ಹೇಳಲಾಗಿದ್ದು, ಇವುಗಳನ್ನು ಐಫೋನ್ 17 ಸೀರಿಸ್ನಲ್ಲಿ ತರಲಾಗುವುದು. ಈ ಸರಣಿಯನ್ನು ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಪ್ರಾರಂಭಿಸಬಹುದು. ಹೊಸ ಮಾದರಿಯ ಐಫೋನ್ 17 ಏರ್ ಕೂಡ ಸುದ್ದಿಯಲ್ಲಿದೆ. ಕಂಪನಿಯು ಹೊಸ ಮಾದರಿಯನ್ನು ಸ್ಲಿಮ್ ಸ್ಮಾರ್ಟ್‌ಫೋನ್ ಆಗಿ ಪರಿಚಯಿಸಬಹುದು.
ಇನ್ನು ನಾಲ್ಕು ನಗರಗಳಲ್ಲಿ ಆಪಲ್ ಶಾಪ್ಗಳನ್ನು ಹೊಂದುವುದರಿಂದ ಲಕ್ಷಾಂತರ ಜನರು ಆಫ್‌ಲೈನ್‌ನಲ್ಲಿ ಐಫೋನ್ ಖರೀದಿಸಲು ಅನುಕೂಲವಾಗಲಿದೆ. ಅಷ್ಟೇ ಅಲ್ಲದೆ, ಗ್ರಾಹಕರು ಆ್ಯಪಲ್ ಸ್ಟೋರ್‌ನಲ್ಲಿ ಎಲ್ಲ ರೂಪಾಂತರ ಮತ್ತು ಬಣ್ಣದ ಮಾದರಿಗಳನ್ನು ಖರೀದಿಸಬಹುದಾಗಿದೆ.
ಓದಿ: ದೇಶದಲ್ಲಿ ಬ್ರಾಡ್ಬ್ಯಾಂಡ್ಗೆ ಭಾರೀ ಬೇಡಿಕೆ: ಬಳಕೆದಾರರ ಸಂಖ್ಯೆ 944 ಮಿಲಿಯನ್‌ಗೆ ಏರಿಕೆ!