Affordable Recharge Plans: 5G ಟೆಕ್ನಾಲಾಜಿ ಬಂದ ಬಳಿಕ ಇಂಟರ್ನೆಟ್ ಪ್ರಪಂಚವು ಸಂಪೂರ್ಣವಾಗಿ ಬದಲಾಗಿದೆ. ಈಗ ಬಳಕೆದಾರರು ಹೆಚ್ಚಿನ ವೇಗದ ಇಂಟರ್ನೆಟ್ ನಿರೀಕ್ಷಿಸಲು ಪ್ರಾರಂಭಿಸಿದ್ದಾರೆ. ಹೀಗಾಗಿ ಟೆಲಿಕಾಂ ಕಂಪನಿಗಳು ಸಹ ಈ ಓಟದಲ್ಲಿ ಹಿಂದೆ ಬಿದ್ದಿಲ್ಲ. ಏರ್‌ಟೆಲ್, ಜಿಯೋ ಮತ್ತು ವಿಐ ನಂತಹ ದೊಡ್ಡ ಕಂಪನಿಗಳು ಈಗ ತಮ್ಮ ಬಳಕೆದಾರರಿಗೆ ಅತ್ಯಂತ ಕೈಗೆಟುಕುವ ಪ್ರಿಪೇಯ್ಡ್ ಯೋಜನೆಗಳನ್ನು ಪ್ರಾರಂಭಿಸಿವೆ. ಇದರಲ್ಲಿ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಅನಿಯಮಿತ 5G ಡೇಟಾ ಲಭ್ಯವಿದೆ. ಈ ಯೋಜನೆಗಳು ಡೇಟಾವನ್ನು ಮಾತ್ರವಲ್ಲದೆ ವಾಯ್ಸ್ ಮತ್ತು ಮೆಸೇಜ್ ಸೌಲಭ್ಯಗಳನ್ನು ಸಹ ಒದಗಿಸುತ್ತವೆ. ಹೀಗಾಗಿ ಬಳಕೆದಾರರಿಗೆ ಸಂಪೂರ್ಣ ಪ್ಯಾಕೇಜ್ ಅನ್ನು ನೀಡುತ್ತವೆ.
ಏರ್‌ಟೆಲ್ ಪ್ಲಾನ್: ಏರ್‌ಟೆಲ್ ಬಗ್ಗೆ ಹೇಳುವುದಾದರೆ, ಕಂಪನಿಯು 379 ರೂ.ಗಳ ಮೂಲ ಪ್ರಿಪೇಯ್ಡ್ ಯೋಜನೆಯನ್ನು ಪರಿಚಯಿಸಿದೆ. ಇದು 30 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ, ಪ್ರತಿದಿನ 2GB ಹೈ-ಸ್ಪೀಡ್ ಡೇಟಾ, ಅನ್‌ಲಿಮಿಟೆಡ್ ಕಾಲ್ಸ್ ಮತ್ತು 100 ಮೆಸೇಜ್ಗಳನ್ನು ನೀಡಲಾಗುತ್ತದೆ. ವಿಶೇಷವೆಂದರೆ ನೀವು 5G ಫೋನ್ ಬಳಸುತ್ತಿದ್ದರೆ ಮತ್ತು ನಿಮ್ಮ ಪ್ರದೇಶದಲ್ಲಿ 5G ನೆಟ್‌ವರ್ಕ್ ಲಭ್ಯವಿದ್ದರೆ, ಈ ಯೋಜನೆಯಲ್ಲಿ ನೀವು ಫ್ರೀ ಅನ್‌ಲಿಮಿಟೆಡ್ 5G ಡೇಟಾದ ಪ್ರಯೋಜನವನ್ನು ಸಹ ಪಡೆಯುತ್ತೀರಿ. ಇದಲ್ಲದೆ ಮೂರು ತಿಂಗಳ ಅಪೊಲೊ 24/7 ಸರ್ಕಲ್ ಸಬ್ಸ್ಕ್ರಿಪ್ಶನ್, ಏರ್‌ಟೆಲ್ ಎಕ್ಸ್‌ಸ್ಟ್ರೀಮ್‌ನಲ್ಲಿ ಫ್ರೀ ಕಂಟೆಂಟ್, ಫ್ರೀ ಹೆಲೋಟ್ಯೂನ್ ಮತ್ತು AI ಆಧಾರಿತ ಸ್ಪ್ಯಾಮ್ ಕರೆ ಪತ್ತೆ ವೈಶಿಷ್ಟ್ಯದಂತಹ ಕೆಲವು ಹೆಚ್ಚುವರಿ ಪ್ರಯೋಜನಗಳನ್ನು ಸಹ ಸೇರಿಸಲಾಗಿದೆ.
ಜಿಯೋದ ಪ್ಲಾನ್: ಜಿಯೋ ತನ್ನ 349 ರೂಗಳ ಯೋಜನೆಯನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದು 28 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದರಲ್ಲಿಯೂ ಸಹ ಬಳಕೆದಾರರು ಪ್ರತಿದಿನ 2GB ಡೇಟಾ, ಅನ್‌ಲಿಮಿಟೆಡ್ ಕಾಲ್ಸ್ ಮತ್ತು 100 ಮೆಸೇಜ್ ಪಡೆಯಲಿದ್ದಾರೆ. ಈ ಯೋಜನೆಯಲ್ಲಿ 5G ಬಳಕೆದಾರರಿಗೆ ಫ್ರೀ ಅನ್‌ಲಿಮಿಟೆಡ್ 5G ಡೇಟಾವನ್ನು ನೀಡಲಾಗುತ್ತಿದೆ. ಒಂದೇ ಷರತ್ತು ಎಂದರೆ ನಿಮ್ಮ ಸಾಧನ ಮತ್ತು ಸ್ಥಳವು ಜಿಯೋದ 5G ನೆಟ್‌ವರ್ಕ್‌ಗೆ ಸಂಪರ್ಕಗೊಂಡಿರಬೇಕು. ಈ ಜಿಯೋ ಯೋಜನೆಯಲ್ಲಿಯೂ ಕೆಲವು ಉತ್ತಮ ಪ್ರಯೋಜನಗಳು ಅಡಗಿವೆ. ಜಿಯೋಟಿವಿ ಮತ್ತು ಜಿಯೋಸಿನಿಮಾಗೆ ಫ್ರೀ ಎಂಟ್ರಿ, ಜಿಯೋಕ್ಲೌಡ್‌ನಲ್ಲಿ 50GB ಫ್ರೀ ಸ್ಟೋರೇಜ್ ಮತ್ತು ಐಪಿಎಲ್ 2025 ವೀಕ್ಷಿಸಲು 90 ದಿನಗಳ ಉಚಿತ ಜಿಯೋಹಾಟ್‌ಸ್ಟಾರ್ ಚಂದಾದಾರಿಕೆ ಇದೆ.
ವೋಡಾಫೋನ್ ಐಡಿಯಾ ಪ್ಲಾನ್: Vi ಕಂಪನಿಯು ತನ್ನ ಬಳಕೆದಾರರನ್ನು ಆಕರ್ಷಿಸಲು 299 ರೂ.ಗಳ ಅಗ್ಗದ ಯೋಜನೆಯನ್ನು ಸಹ ಪ್ರಾರಂಭಿಸಿದೆ. ಈ ಯೋಜನೆಯು 28 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ ಮತ್ತು ದಿನಕ್ಕೆ 1GB ಡೇಟಾ, ಅನ್‌ಲಿಮಿಟೆಡ್ ಕಾಲ್ಸ್ ಮತ್ತು 100 ಮೆಸೇಜ್ಗಳನ್ನು ಒಳಗೊಂಡಿದೆ. Vi 5G ಬಳಕೆದಾರರಿಗೆ ಫ್ರೀ ಅನ್‌ಲಿಮಿಟೆಡ್ 5G ಡೇಟಾವನ್ನು ಸಹ ನೀಡುತ್ತಿದೆ. ಆದರೆ ಪ್ರಸ್ತುತ ಈ ಸೌಲಭ್ಯ ಮುಂಬೈನಲ್ಲಿ ಮಾತ್ರ ಲಭ್ಯವಿದೆ. ಆದರೂ ಶೀಘ್ರದಲ್ಲೇ ಇದನ್ನು ದೆಹಲಿ, ಕರ್ನಾಟಕ, ಪಂಜಾಬ್ ಮತ್ತು ಇತರ ರಾಜ್ಯಗಳಲ್ಲಿಯೂ ಬಿಡುಗಡೆ ಮಾಡಲಾಗುವುದು ಎಂದು ಕಂಪನಿ ಹೇಳಿದೆ. ಈ ಯೋಜನೆಯೊಂದಿಗೆ, Vi ತನ್ನ 'Vi ಗ್ಯಾರಂಟಿ' ಯೋಜನೆಯಡಿಯಲ್ಲಿ 130GB ವರೆಗೆ ಬೋನಸ್ ಡೇಟಾವನ್ನು ಸಹ ನೀಡುತ್ತಿದೆ. ಇದನ್ನು ಪ್ರಸ್ತುತ 4G ನೆಟ್‌ವರ್ಕ್‌ಗಳಲ್ಲಿ ಮಾತ್ರ ಬಳಸಬಹುದಾಗಿದೆ.
ಮೂರು ಟೆಲಿಕಾಂ ಕಂಪನಿಗಳ ಈ ಯೋಜನೆಗಳು ಸ್ಪಷ್ಟವಾಗಿ ಹೇಳುತ್ತಿರುವುದೇನೆಂದರೆ ಈಗ 5G ಕೇವಲ ಶ್ರೀಮಂತರಿಗೆ ಮಾತ್ರ ಸೀಮಿತವಾಗಿಲ್ಲ. ಈಗ ದೇಶದ ಪ್ರತಿಯೊಬ್ಬ ವ್ಯಕ್ತಿಯು ದಿನಕ್ಕೆ ಕೇವಲ ರೂ.10 ರಿಂದ ರೂ.13 ವೆಚ್ಚದಲ್ಲಿ ವೇಗದ ಇಂಟರ್ನೆಟ್, ಅನ್‌ಲಿಮಿಟೆಡ್ ಕಾಲ್ಸ್, ಮೆಸೇಜ್ ಮತ್ತು ಹಲವು ಡಿಜಿಟಲ್ ಸೇವೆಗಳ ಪ್ರಯೋಜನಗಳನ್ನು ಪಡೆಯಬಹುದು. 5G ವ್ಯಾಪ್ತಿಯ ವಿಷಯದಲ್ಲಿ ಜಿಯೋ ಮತ್ತು ಏರ್‌ಟೆಲ್ ಪ್ರಸ್ತುತ Vi ಗಿಂತ ಮುಂದಿದ್ದರೂ, Vi ತನ್ನ ಪ್ರಯತ್ನಗಳು ಸಹ ವೇಗವಾಗಿ ನಡೆಸುತ್ತಿವೆ.
ಓದಿ: ಹಿರಿಯರಿಗೆ, ವಿದ್ಯಾರ್ಥಿಗಳಿಗೆ ಬೆಸ್ಟ್ ‘ಇ’-ಸ್ಕೂಟರ್ - ಇದಕ್ಕೆ ಲೈಸೆನ್ಸ್ ಬೇಕಾಗಿಯೇ ಇಲ್ಲ!