2025 Yezdi Adventure Launched: 2025 ಯೆಜ್ಡಿ ಅಡ್ವೆಂಚರ್ ದೇಶೀಯ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಇದಕ್ಕೆ ಹೊಸ ಲುಕ್ ಜೊತೆಗೆ ಹಲವು ಹೊಸ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಇದರಿಂದಾಗಿ ಇದು ಹಳೆಯದಕ್ಕಿಂತ ಉತ್ತಮವಾಗಿದೆ. ಹೊಸ ಯೆಜ್ಡಿ ಅಡ್ವೆಂಚರ್ ಅನ್ನು 2024 ಆವೃತ್ತಿಯೊಂದಿಗೆ ಹೋಲಿಸಿ ನೋಡಿದ್ರೆ ಯಾವೆಲ್ಲ ಬದಲಾವಣೆಗಳನ್ನು ಮಾಡಲಾಗಿದೆ ಮತ್ತು ಅದು ಅದರ ಹಿಂದಿನ ಮಾದರಿಗಿಂತ ಹೇಗೆ ಉತ್ತಮವಾಗಿದೆ.
ಹೊಸ ಲುಕ್: ಬೈಕಿನ ಲುಕ್ನಲ್ಲಿ ಬಿಗ್ ಚೇಂಜ್ ಆಗಿದೆ. 2025 ಯೆಜ್ಡಿ ಅಡ್ವೆಂಚರ್‌ಗೆ ಹೊಸ ಟ್ವಿನ್-ಲ್ಯಾಂಪ್ ಹೆಡ್‌ಲೈಟ್ ಸೆಟಪ್ ನೀಡಲಾಗಿದೆ. ಈ ವಿನ್ಯಾಸವು ಹೋಂಡಾ CRF300 ರ್ಯಾಲಿಯಂತೆಯೇ ಕಾಣುತ್ತದೆ. ಹೊಸ ಲುಕ್ ಬೈಕ್‌ಗೆ ಹೆಚ್ಚು ರಗಡ್ ಮತ್ತು ಆಕರ್ಷಕ ಲುಕ್ ನೀಡುತ್ತದೆ.
ಈ ಬೈಕಿನ ಹೆಡ್‌ಲೈಟ್‌ನೊಂದಿಗೆ ಅಡ್ಜೆಸ್ಟಬಲ್ ವಿಂಡ್‌ಸ್ಕ್ರೀನ್ ಅನ್ನು ಸೇರಿಸಲಾಗಿದೆ. ಇದನ್ನು ಸವಾರನು ತನ್ನ ಅಗತ್ಯಕ್ಕೆ ಅನುಗುಣವಾಗಿ ಅಡ್ಜೆಸ್ಟ್ ಮಾಡಬಹುದಾಗಿದೆ. ಇದರ ಫ್ರಂಟ್ ಫೆಂಡರ್‌ಗೆ ನ್ಯೂ ಮತ್ತು ಶಾರ್ಪ್ ಲುಕ್ ನೀಡಲಾಗಿದೆ. ಇದು 2024 ಮಾದರಿಗಿಂತ ಉತ್ತಮವಾಗಿ ಕಾಣುತ್ತದೆ.
ಹಿಂಭಾಗದಲ್ಲಿ ಈಗ ಎರಡು ಹೊಸ LED ಟೈಲ್ ಲೈಟ್‌ಗಳನ್ನು ನೀಡಲಾಗಿದೆ. ಇದು ಉತ್ತಮವಾಗಿ ಕಾಣುವುದಲ್ಲದೆ 2024 ಮಾದರಿಗಿಂತ ಉತ್ತಮ ಬೆಳಕು ಮತ್ತು ಗೋಚರತೆಯನ್ನು ಸಹ ಒದಗಿಸುತ್ತದೆ.
ರೈಡಿಂಗ್ ಸೀಟ್ ಕಂಫರ್ಟ್: ದೂರ ಪ್ರಯಾಣಕ್ಕೂ ಈಗ ಈ ಬೈಕ್ನ್ನು ಸುಧಾರಿಸಲಾಗಿದೆ. 2025 ಯೆಜ್ಡಿ ಅಡ್ವೆಂಚರ್ ಪ್ಯಾಟ್ ಪ್ಯಾಡಿಂಗ್ ಸೀಟನ್ನು ಹೊಂದಿದೆ. ಇದು ಸವಾರಿ ಮಾಡುವಾಗ ಒಟ್ಟಾರೆ ಸೌಕರ್ಯವನ್ನು ಒದಗಿಸುತ್ತದೆ. ಇದರ ಸೀಟ್ ಕವರ್ ಅನ್ನು ಸಹ ಬದಲಾಯಿಸಲಾಗಿದೆ. ಇದು ಈಗ ಮೊದಲಿಗಿಂತ ಬೆಸ್ಟ್ ಗ್ರಿಪ್ ನೀಡುತ್ತದೆ. ಇದು ಉತ್ತಮ ಸವಾರಿ ಅನುಭವವನ್ನು ಸಹ ನೀಡುತ್ತದೆ.
ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್: 2025 ಯೆಜ್ಡಿ ಅಡ್ವೆಂಚರ್‌ನಲ್ಲಿ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ (TCS) ಅಳವಡಿಸಲಾಗಿದೆ. ಇದು ಸವಾರನ ಸುರಕ್ಷತೆಯನ್ನು ಹೆಚ್ಚಿಸುತ್ತದೆ. ಇದು ರಸ್ತೆಯಲ್ಲಿ ವ್ಹೀಲ್ ಸ್ಕಿಡ್ ಆಗುವುದನ್ನು ತಡೆಯಲು ಇದು ಕಾರ್ಯನಿರ್ವಹಿಸುತ್ತದೆ. ಸಣ್ಣ ಬೈಕ್‌ನಿಂದ ಸಾಹಸ ವಿಭಾಗಕ್ಕೆ ತಮ್ಮನ್ನು ಅಪ್‌ಗ್ರೇಡ್ ಮಾಡಲು ಬಯಸುವ ಹೊಸ ಸವಾರರಿಗೆ ಇದು ತುಂಬಾ ಪ್ರಯೋಜನಕಾರಿಯಾಗಿದೆ. ಏಕೆಂದರೆ ಇದು ಪರಿವರ್ತನೆಯನ್ನು ಹೆಚ್ಚು ಸುಲಭಗೊಳಿಸುತ್ತದೆ.
OBD-2B ಕಂಪ್ಲೈಂಟ್ ಎಂಜಿನ್: 2025 ಯೆಜ್ಡಿ ಅಡ್ವೆಂಚರ್‌ನ ಎಂಜಿನ್ OBD-2B ಕಂಪ್ಲೈಂಟ್ ಆಗಿದೆ. ಅಂದರೆ ಹೊರಸೂಸುವಿಕೆಯನ್ನು ಉತ್ತಮವಾಗಿ ಮೇಲ್ವಿಚಾರಣೆ ಮಾಡಲು ಇದಕ್ಕೆ ಹೆಚ್ಚಿನ ಸೆನ್ಸಾರ್ಗಳನ್ನು ನೀಡಲಾಗಿದೆ. ಇದು ಈಗ E20 ಇಂಧನದ ಮೇಲೆಯೂ ಚಲಿಸಬಹುದು. ಇದು ಶೇ.80ರಷ್ಟು ಪೆಟ್ರೋಲ್ ಮತ್ತು ಶೇ. 20ರಷ್ಟು ಎಥೆನಾಲ್ ಮಿಶ್ರಣವಾಗಿದೆ.
ಬದಲಾವಣೆ ಆಗಿದ್ದೇನು? 2025 ಯೆಜ್ಡಿ ಅಡ್ವೆಂಚರ್ ಹಳೆಯ 334 ಸಿಸಿ, ಲಿಕ್ವಿಡ್-ಕೂಲ್ಡ್, ಸಿಂಗಲ್-ಸಿಲಿಂಡರ್ ಎಂಜಿನ್ ಅನ್ನು ಬಳಸುತ್ತದೆ. ಇದು 29.57 ಪಿಎಸ್ ಪವರ್ ಮತ್ತು 29.56 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 2025 ಯೆಜ್ಡಿ ಅಡ್ವೆಂಚರ್ ಹೊಸ ಹೆಡ್‌ಲ್ಯಾಂಪ್ ಕ್ಲಸ್ಟರ್ ಅನ್ನು ಪಡೆಯುತ್ತದೆ. ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸಸ್ಪೆನ್ಷನ್ ಕಾರ್ಯನಿರ್ವಹಿಸುತ್ತದೆ.
ಬ್ರೇಕಿಂಗ್ ಕಾರ್ಯಕ್ಷಮತೆ ಎರಡೂ ತುದಿಗಳಲ್ಲಿ ಡಿಸ್ಕ್‌ಗಳೊಂದಿಗೆ ಬರುತ್ತದೆ. ಅಪ್ಡೇಟ್ಡ್ ಯೆಜ್ಡಿ ಅಡ್ವೆಂಚರ್ ಡ್ಯುಯಲ್-ಚಾನಲ್ ಎಬಿಎಸ್ ಅನ್ನು ಪ್ರಮಾಣಿತವಾಗಿ ಪಡೆಯುತ್ತದೆ. ಆದರೆ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಬ್ಲೂಟೂತ್ ಸಂಪರ್ಕವನ್ನು ಹೊಂದಿದೆ. ಯೆಜ್ಡಿ 2025 ಅಡ್ವೆಂಚರ್‌ಗಾಗಿ ಹೊಸ ಬಣ್ಣಗಳನ್ನು ಸಹ ಪರಿಚಯಿಸಿದೆ.
ಇದು ಅವಳಿ ಹೆಡ್‌ಲ್ಯಾಂಪ್ ಸೆಟಪ್ ಅನ್ನು ಹೊಂದಿದೆ. ಸ್ಟೈಲಿಂಗ್ ಹಳೆಯ BMW GS ಮಾದರಿಗಳಿಂದ ಪ್ರೇರಿತವಾಗಿದೆ ಎಂದು ತೋರುತ್ತದೆ. ಆದರೂ ಇದು ಹೊಸದಾಗಿ ಕಾಣುತ್ತದೆ. ಹೊಸ LED DRL ಸಹ ಇದೆ. ಅಪ್ಡೇಟ್ಡ್ ಫ್ಯೂಯಲ್ ಟ್ಯಾಂಕ್, ಸೈಡ್ ಪ್ಯಾನೆಲ್‌ಗಳು ಮತ್ತು ಟೈಲ್ ವಿಭಾಗದೊಂದಿಗೆ ಬ್ರ್ಯಾಂಡ್ ಇತರ ಪ್ಯಾನೆಲ್‌ಗಳನ್ನು ಸಹ ಬದಲಾಯಿಸಿದೆ.
ಅಡ್ವೆಂಚರ್ ಹೆಚ್ಚು ಪ್ರೀಮಿಯಂ ಆಗಿ ಕಾಣುತ್ತದೆ. ಫ್ಯೂಯಲ್ ಟ್ಯಾಂಕ್ ಸುತ್ತಲೂ ಕ್ರ್ಯಾಶ್ ಗಾರ್ಡ್‌ಗಳು ಸೇರಿದಂತೆ ಹಲವಾರು ಬದಲಾವಣೆಗಳಿವೆ. ADV ಈಗ ಅಡ್ಜೆಸ್ಟಬಲ್ ವೈಸರ್, ಬದಲಾಯಿಸಬಹುದಾದ ಟ್ರಾಕ್ಷನ್ ಕಂಟ್ರೋಲ್ ಮತ್ತು ಬದಲಾಯಿಸಬಹುದಾದ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ ಅನ್ನು ಒಳಗೊಂಡಿದೆ.
ಬೆಲೆ ಎಷ್ಟು? ಕ್ಲಾಸಿಕ್ ಲೆಜೆಂಡ್ಸ್ ಬುಧವಾರ ಭಾರತದಲ್ಲಿ 2025 ಯೆಜ್ಡಿ ಅಡ್ವೆಂಚರ್ ಅನ್ನು ಬಿಡುಗಡೆ ಮಾಡಿತು. ಈ ಮಾದರಿಯ ಬೆಲೆ ರೂ. 2.15 ಲಕ್ಷ ಎಕ್ಸ್-ಶೋರೂಂ. ADV ಯ ಟಾಪ್-ಸ್ಪೆಕ್ ರೂಪಾಂತರದ ಬೆಲೆ ರೂ. 2.27 ಲಕ್ಷ (ಎಕ್ಸ್-ಶೋರೂಂ).
2025 Yezdi Adventure ಕವರ್ ವೇರಿಯಂಟ್ | ಎಕ್ಸ್ ಶೋರೂಂ ಬೆಲೆ | 2024 Yezdi Adventure ಕಲರ್ ವೇರಿಯಂಟ್ | ಎಕ್ಸ್ ಶೋರೂಂ ಬೆಲೆ |
ಫಾರೆಸ್ಟ್ ಗ್ರೀನ್ (ಮ್ಯಾಟ್) | 2,14,900 ರೂ. | ವುಲ್ಫ್ ಗ್ರೇ | 2,15,900 ರೂ. |
ಡೆಜರ್ಟ್ ಖಾಕಿ (ಮ್ಯಾಟ್) | 2,17,900 ರೂ. | ಟೊರ್ನಾಡೊ ಬ್ಲ್ಯಾಕ್ | 2,17,900 ರೂ. |
ಓಸೆನ್ ಬ್ಲೂ (ಮ್ಯಾಟ್) | 2,17,900 ರೂ. | ಮ್ಯಾಗ್ನೈಟ್ ಮರೂನ್ | 2,17,900 ರೂ. |
ಟೊರ್ನಾಡೊ ಬ್ಲ್ಯಾಕ್ (ಮ್ಯಾಟ್) | 2,21,900 ರೂ. | ಗ್ಲೇಸಿಯರ್ ವೈಟ್ | 2,19,900 ರೂ. |
ಬಾಲ್ಫ್ ಗ್ರೇ (ಗ್ಲೋಸ್) | 2,26,900 ರೂ. | ||
ಗ್ಲೇಶಿಯರ್ ವೈಟ್ (ಗ್ಲೋಸ್) | 2,26,900 ರೂ. |
ಬುಕಿಂಗ್ ಆರಂಭ: 2025 ಯೆಜ್ಡಿ ಅಡ್ವೆಂಚರ್‌ಗಾಗಿ ಬುಕಿಂಗ್‌ಗಳು ಪ್ರಾರಂಭವಾಗಿವೆ. ಅಪ್ಡೇಟ್ಡ್ ಯೆಜ್ಡಿ ಅಡ್ವೆಂಚರ್ ಹಲವಾರು ಬದಲಾವಣೆಗಳೊಂದಿಗೆ ಬರುತ್ತದೆ. ಅವುಗಳಲ್ಲಿ ಪ್ರಮುಖವಾದದ್ದು ಹೊಸ ವಿನ್ಯಾಸ. ಇದು ಮಾದರಿಗೆ ತನ್ನದೇ ಆದ ಗುರುತನ್ನು ನೀಡುವುದಲ್ಲದೆ ಹೊಸ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.
ಓದಿ: ವಾಯ್ಸ್ನಿಂದ ಓಪನ್ ಆಗುವ ಸನ್ರೂಫ್, 7 ಸೀಟರ್ SUV ಅಲ್ಕಾಜರ್ ನ್ಯೂ ಮಾಡೆಲ್ ರಿಲೀಸ್