ETV Bharat / technology

ದೇಶಿ ಮಾರುಕಟ್ಟೆಗೆ ಲಗ್ಗೆಯಿಟ್ಟ ಟಿವಿಎಸ್​ ಅಪಾಚೆ ನ್ಯೂ ಮಾಡೆಲ್​: ಕೈಗೆಟುಕುವ ಬೆಲೆ, ಅದ್ಭುತ ಫೀಚರ್ಸ್!​ - APACHE RTR 200 4V LAUNCHED

Apache RTR 200 4V Launched: ಟಿವಿಎಸ್ ತನ್ನ ಜನಪ್ರಿಯ ಬೈಕ್ ಅಪಾಚೆಯ 20 ವರ್ಷಗಳನ್ನು 2025 ಅಪಾಚೆ ಆರ್‌ಟಿಆರ್ 200 4ವಿ ಹೊಸ ಮಾದರಿಯೊಂದಿಗೆ ಆಚರಿಸಿದೆ. ಇದರ ಬೆಲೆ ಮತ್ತು ವೈಶಿಷ್ಟ್ಯಗಳು ಇಲ್ಲಿವೆ..

2025 TVS APACHE RTR 200 4V PRICE  2025 TVS APACHE RTR 200 4V FEATURES  2025 TVS APACHE RTR 200 4V DETAILS
ದೇಶಿ ಮಾರುಕಟ್ಟೆಗೆ ಲಗ್ಗೆಯಿಟ್ಟ ಟಿವಿಎಸ್​ ಅಪಾಚೆ ನ್ಯೂ ಮಾಡೆಲ್ (Photo Credit: TVS Motors)
author img

By ETV Bharat Tech Team

Published : June 10, 2025 at 11:54 AM IST

3 Min Read

Apache RTR 200 4V Launched: ಟಿವಿಎಸ್ ಮೋಟಾರ್ ಕಂಪನಿಯು ತನ್ನ ಜನಪ್ರಿಯ ಬೈಕ್ ಅಪಾಚೆ ಆರ್‌ಟಿಆರ್ 200 ರ ಮುಂದಿನ ಪೀಳಿಗೆಯ ಮಾದರಿಯನ್ನು ಬಿಡುಗಡೆ ಮಾಡಿದೆ. ಹೌದು, ಅಪಾಚೆಯ 20 ವರ್ಷಗಳ ರೇಸಿಂಗ್ ಪರಂಪರೆಯನ್ನು ಆಚರಿಸುತ್ತಾ, ಕಂಪನಿಯು ಹೊಸ ಅಪಾಚೆ ಆರ್‌ಟಿಆರ್ 200 4ವಿ ಅನ್ನು ಬಿಡುಗಡೆ ಮಾಡಿದೆ.

ಇದು ಬಹಳಷ್ಟು ವಿಶೇಷ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಸವಾರಿ ಅನುಭವವನ್ನು ಸುಧಾರಿಸುತ್ತದೆ. ಇದು 37 ಎಂಎಂ ಅಪ್​ಸೈಡ್​ ಡೌನ್​ (ಯುಎಸ್‌ಡಿ) ಫ್ರಂಟ್​ ಸಸ್ಪೆನ್ಷನ್ ಮತ್ತು ಹೈಡ್ರೋಫಾರ್ಮ್ಡ್ ಹ್ಯಾಂಡಲ್‌ಬಾರ್ ಅನ್ನು ಹೊಂದಿದೆ. 3 ಆಕರ್ಷಕ ಬಣ್ಣ ಆಯ್ಕೆಗಳೊಂದಿಗೆ ಬರುವ ಹೊಸ ಅಪಾಚೆ ಆರ್‌ಟಿಆರ್ 200 4ವಿಯ ಎಕ್ಸ್-ಶೋರೂಂ ಬೆಲೆ ರೂ.1,53,990 ರಿಂದ ಪ್ರಾರಂಭವಾಗುತ್ತದೆ.

ಅಪಾಚೆ ಆರ್‌ಟಿಆರ್ 200 4ವಿ ಫೀಚರ್ಸ್​: ಗ್ಲಾಸಿ ಬ್ಲ್ಯಾಕ್​, ಮ್ಯಾಟ್ ಬ್ಲ್ಯಾಕ್​ ಮತ್ತು ಗ್ರಾನೈಟ್ ಗ್ರೇ ಮುಂತಾದ 3 ಬೆಸ್ಟ್​ ಕಲರ್​ ಆಯ್ಕೆಗಳೊಂದಿಗೆ ಬರುವ ಹೊಸ ಟಿವಿಎಸ್ ಅಪಾಚೆ ಆರ್‌ಟಿಆರ್ 4ವಿಯ ಹೊಸ ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದ್ರೆ, ಈಗ ಇದಕ್ಕೆ OBD2B ಕಂಪ್ಲೈಂಟ್ ಎಂಜಿನ್ ನೀಡಲಾಗಿದೆ. ಇದು ಮಾಲಿನ್ಯವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿದೆ.

ಇದು ಈಗ ರೆಡ್​ ಕಲರ್​ನ ಅಲಾಯ್​ ವೀಲ್​ಗಳನ್ನು ಹೊಂದಿದೆ. ಇದು ಅದರ ಲುಕ್​ ಅನ್ನು ಸಾಕಷ್ಟು ಸ್ಪೋರ್ಟಿ ಮಾಡಿದೆ. ಇದು ಹೊಸ ಬೋಲ್ಡ್ ಗ್ರಾಫಿಕ್ಸ್ ಅನ್ನು ಸಹ ಹೊಂದಿದೆ. ಇದಲ್ಲದೆ ಇದು 37mm USD ಫ್ರಂಟ್​ ಸಸ್ಪೆನ್ಷನ್ ಅನ್ನು ಹೊಂದಿದೆ. ಇದು ತಿರುವುಗಳಲ್ಲಿ ಉತ್ತಮ ನಿಯಂತ್ರಣವನ್ನು ನೀಡುತ್ತದೆ. ಹೈಡ್ರೋಫಾರ್ಮ್ಡ್ ಹ್ಯಾಂಡಲ್‌ಬಾರ್ ನಿರ್ವಹಣೆ ಮತ್ತು ಸ್ಥಿರತೆಯನ್ನು ಸುಧಾರಿಸುತ್ತದೆ. ಇದು ಡ್ಯುಯಲ್-ಚಾನೆಲ್ ABS ಅನ್ನು ಹೊಂದಿದೆ. ಇದು ಬೆಸ್ಟ್​ ಬ್ರೇಕಿಂಗ್ ಸಿಸ್ಟಮ್, LED ಹೆಡ್‌ಲ್ಯಾಂಪ್ ಮತ್ತು ಟರ್ನ್ ಇಂಡಿಕೇಟರ್‌ನೊಂದಿಗೆ DRL ಅನ್ನು ಸಹ ಹೊಂದಿದೆ.

ಪರ್ಫಾರ್ಮೆನ್ಸ್​, ಫೀಚರ್ಸ್​: ಹೊಸ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಪರ್ಫಾರ್ಮೆನ್ಸ್​ ಬಗ್ಗೆ ಹೇಳುವುದಾದರೆ, ಇದು 197.75 ಸಿಸಿ ಎಂಜಿನ್ ಹೊಂದಿದ್ದು, ಇದು 9000 ಆರ್‌ಪಿಎಂನಲ್ಲಿ 20.8 ಪಿಎಸ್ ಪವರ್ ಮತ್ತು 7250 ಆರ್‌ಪಿಎಂನಲ್ಲಿ 17.25 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಇದು ಅರ್ಬನ್, ಸ್ಪೋರ್ಟ್ ಮತ್ತು ರೈನ್‌ನಂತಹ ಮೂರು ರೈಡ್ ಮೋಡ್‌ಗಳನ್ನು ಸಹ ಹೊಂದಿದೆ. ಇದರ ಜೊತೆಗೆ ಸ್ಲಿಪ್ಪರ್ ಕ್ಲಚ್, ಅಡ್ಜೆಸ್ಟಬಲ್​ ಕ್ಲಚ್ ಮತ್ತು ಬ್ರೇಕ್ ಲಿವರ್ ಸಹ ಇದೆ. ಟಿವಿಎಸ್‌ನ ಈ ಕೂಲ್ ಬೈಕ್ ಟಿವಿಎಸ್ ಸ್ಮಾರ್ಟ್‌ಕನೆಕ್ಟ್ ಮತ್ತು ಬ್ಲೂಟೂತ್, ವಾಯ್ಸ್-ಅಸಿಸ್ಟ್‌ನೊಂದಿಗೆ ಡಿಜಿಟಲ್ ಕ್ಲಸ್ಟರ್ ಅನ್ನು ಸಹ ಹೊಂದಿದೆ.

60 ಲಕ್ಷಕ್ಕೂ ಹೆಚ್ಚು ಸವಾರರಿಂದ ವಿಶ್ವಾಸ: ಒಟ್ಟಾರೆಯಾಗಿ ಹೊಸ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬೈಕ್ ಅತ್ಯುತ್ತಮ ಎಂಜಿನಿಯರಿಂಗ್ ಮತ್ತು 60 ಲಕ್ಷಕ್ಕೂ ಹೆಚ್ಚು ಸವಾರರ ವಿಶ್ವಾಸದ ಸಂಕೇತವಾಗಿದೆ ಎಂದು ಹೇಳಬಹುದು. ಅಪಾಚೆ ಸೀರಿಸ್​ ಬೈಕ್‌ಗಳು ರೇಸ್ ಟ್ರ್ಯಾಕ್ ಆಧಾರಿತ ಮಾತ್ರವಲ್ಲ.. ರಸ್ತೆಯಲ್ಲಿ ಓಡಲು ಸಹ ಸಿದ್ಧವಾಗಿವೆ. ಈ ಮೋಟಾರ್‌ಸೈಕಲ್‌ಗಳು ಪರ್ಫಾರ್ಮೆನ್ಸ್​ ಜೊತೆಗೆ ಪವರ್​, ಕಂಟ್ರೋಲ್​ ಡಿಸೈನ್​ ಬಯಸುವವರಿಗೆ ಸೂಕ್ತವಾಗಿವೆ.

ವಿಮಲ್ ಸುಂಬ್ಲಿ ಹೇಳಿದ್ದೇನು? ಟಿವಿಎಸ್ ಮೋಟಾರ್ ಕಂಪನಿಯ ಪ್ರೀಮಿಯಂ ಸೆಗ್ಮೆಂಟ್ ಬೈಕ್‌ಗಳ ವ್ಯವಹಾರ ಮುಖ್ಯಸ್ಥ ವಿಮಲ್ ಸುಂಬ್ಲಿ ಮಾತನಾಡಿ, ಅಪಾಚೆ ಬ್ರ್ಯಾಂಡ್ ಕೇವಲ ಮೋಟಾರ್‌ಸೈಕಲ್ ಅಲ್ಲ.. ಎರಡು ದಶಕಗಳಲ್ಲಿ 60 ಲಕ್ಷಕ್ಕೂ ಹೆಚ್ಚು ಸವಾರರ ಉತ್ಸಾಹಭರಿತ ಸಮುದಾಯಕ್ಕೆ ಸ್ಫೂರ್ತಿ ನೀಡಿದ ಜಾಗತಿಕ ಚಳುವಳಿಯಾಗಿದೆ ಎಂದು ಹೇಳುತ್ತಾರೆ.

ನಮ್ಮ ರೇಸಿಂಗ್ ಡಿಎನ್‌ಎಯಿಂದ ಪ್ರೇರಿತರಾದ ಟಿವಿಎಸ್ ಅಪಾಚೆ ಮೋಟಾರ್‌ಸೈಕಲ್‌ಗಳು ನಿರಂತರವಾಗಿ ಕಾರ್ಯಕ್ಷಮತೆ, ನಿಖರತೆ ಮತ್ತು ತಂತ್ರಜ್ಞಾನದ ಪ್ರಬಲ ಸಂಯೋಜನೆಯನ್ನು ಸೃಷ್ಟಿಸಿವೆ. ಅಪ್​ಡೇಟ್ಡ್​ 2025 ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಈ ಪರಂಪರೆಯನ್ನು ಮುಂದುವರೆಸಿದೆ ಎಂದು ಹೇಳಿದರು.

ಬೆಲೆ ಮತ್ತು ಲಭ್ಯತೆ: ಹೊಸ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ 2025 ಈಗ ದೇಶಾದ್ಯಂತ ಟಿವಿಎಸ್ ಡೀಲರ್‌ಶಿಪ್‌ಗಳಲ್ಲಿ ಲಭ್ಯವಿದೆ. ಇದರ ಆರಂಭಿಕ ಬೆಲೆ ರೂ 1,53,990 (ಎಕ್ಸ್-ಶೋರೂಂ, ದೆಹಲಿ).

ಈ ಬೈಕ್ ಏಕೆ ಖರೀದಿಸಬೇಕು? ನೀವು ಶೈಲಿ, ಸುರಕ್ಷತೆ ಮತ್ತು ಕ್ರೀಡಾ ಮನೋಭಾವದ ಪರಿಪೂರ್ಣ ಸಂಯೋಜನೆಯ ಮೋಟಾರ್‌ಸೈಕಲ್ ಅನ್ನು ಹುಡುಕುತ್ತಿದ್ದರೆ, 2025 TVS Apache RTR 200 4V ನಿಮಗಾಗಿ ತಯಾರಿಸಲ್ಪಟ್ಟಿದೆ.

ಓದಿ: ಪದೆ ಪದೇ ಭಾರತೀಯ ಗಗನಯಾತ್ರಿ ಒಳಗೊಂಡಿರುವ ಮಿಷನ್ ಮುಂದೂಡಿಕೆ: ಈ ಬಾರಿ ಕಾರಣವೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.