Bajaj Pulsar NS160: ಪ್ರಸಿದ್ಧ ದ್ವಿಚಕ್ರ ವಾಹನ ತಯಾರಕ ಕಂಪನಿ ಬಜಾಜ್ ಆಟೋ ತನ್ನ ಜನಪ್ರಿಯ ಪಲ್ಸರ್ ಸೀರಿಸ್ ಬೈಕ್ ಬಜಾಜ್ ಪಲ್ಸರ್ NS160 ಅನ್ನು 2025ಕ್ಕೆ ಅಪ್ಡೇಟ್ ಮಾಡಿ ಮಾರುಕಟ್ಟೆಗೆ ಬಿಟ್ಟಿದೆ. ಇದರಲ್ಲಿ ಕೆಲವು ಹೊಸ ವೈಶಿಷ್ಟ್ಯಗಳನ್ನು ನೀಡಿದೆ.
ಕಂಪನಿ ಇದನ್ನು ಮೂರು ರೈಡಿಂಗ್ ಮೋಡ್‌ಗಳೊಂದಿಗೆ ಬಿಡುಗಡೆ ಮಾಡಿದೆ. ಮಾರುಕಟ್ಟೆಯಲ್ಲಿ ಕೈಗೆಟುಕುವ 160cc ಸ್ಟ್ರೀಟ್ ಬೈಕ್ ವಿಭಾಗದಲ್ಲಿ ಪಲ್ಸರ್ NS160, TVS Apache RTR 160 4V ಮತ್ತು ಹೀರೋ Xtreme 160Rನಂತಹ ಬೈಕ್‌ಗಳೊಂದಿಗೆ ಸ್ಪರ್ಧಿಸುತ್ತದೆ.
ಬಜಾಜ್ ಪಸ್ಲರ್ NS160 ಹೊಸ ರೈಡಿಂಗ್ ಮೋಡ್ಸ್: ರೋಡ್, ರೈನ್ ಮತ್ತು ಆಫ್ ರೋಡ್ ಎಂಬ ಮೂರು ಸವಾರಿ ವಿಧಾನಗಳೊಂದಿಗೆ ಬೈಕ್ ಅನ್ನು ಸಜ್ಜುಗೊಳಿಸಲಾಗಿದೆ. ಈ ವಿಧಾನಗಳೊಂದಿಗೆ ಜನರು ವಿಭಿನ್ನ ಭೂಪ್ರದೇಶಗಳು ಮತ್ತು ಪರಿಸರಗಳನ್ನು ನಿಭಾಯಿಸುವಾಗ ಉತ್ತಮ ಕಾರ್ಯಕ್ಷಮತೆಯನ್ನು ನಿರೀಕ್ಷಿಸಬಹುದು. ಪಲ್ಸರ್ NS160 ನಲ್ಲಿರುವ ರೈಡಿಂಗ್ ಮೋಡ್‌ಗಳು ವಿಭಿನ್ನ ಭೂಪ್ರದೇಶಗಳಿಗೆ ಅನುಗುಣವಾಗಿ ABS ಇಂಟರ್ವೇಂಶನ್ ಹೊಂದಿಸುತ್ತವೆ.

ರೋಡ್ ಮೋಡ್ ಅನ್ನು ದಿನನಿತ್ಯದ ಬಳಕೆಗಾಗಿ ಸ್ಟ್ಯಾಂಡರ್ಡ್ ABS ಇಂಟರ್ವೇಂಶನ್ ವಿನ್ಯಾಸಗೊಳಿಸಲಾಗಿದೆ. ರೈನ್ ಮೋಡ್ ಮಳೆ ಬಿದ್ದ ರಸ್ತೆಗಳ ಮೇಲ್ಮೈಗಳಲ್ಲಿ ಸ್ಕಿಡ್ ಆಗುವುದನ್ನು ತಡೆಯಲು ABS ಸೆನ್ಸಾರ್ ಹೆಚ್ಚಿಸುತ್ತದೆ. ಮೂರನೇ ಮೋಡ್ ಅಂದ್ರೆ ಆಫ್-ರೋಡ್ ಮೋಡ್ ರಿಯರ್ ವೀಲ್ ಮೇಲಿನ ABS ಕ್ರಿಯೆಯನ್ನು ಕಡಿಮೆ ಮಾಡುತ್ತದೆ. ಮಣ್ಣು ಮತ್ತು ಜಲ್ಲಿಕಲ್ಲುಗಳಂತಹ ಸಡಿಲ ಪ್ರದೇಶಗಳಲ್ಲಿ ಉತ್ತಮ ಕಂಟ್ರೋಲ್ ಒದಗಿಸುತ್ತದೆ.
ಮಾರುಕಟ್ಟೆಯಲ್ಲಿರುವ ತನ್ನ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ TVS Apache RTR 160 4V ಅರ್ಬನ್, ರೈನ್ ಮತ್ತು ಸ್ಪೋರ್ಟ್ ರೈಡಿಂಗ್ ಮೋಡ್‌ಗಳನ್ನು ಪಡೆಯುತ್ತದೆ. ಹೆಸರೇ ಸೂಚಿಸುವಂತೆ ಅರ್ಬನ್ ಮೋಡ್ ನಗರ ರಸ್ತೆಗಳಿಗೆ ಮೀಸಲಾಗಿದೆ. ಅಲ್ಲಿ ವೇಗದ ನಿಯಂತ್ರಣ ಮತ್ತು ಬ್ರೇಕಿಂಗ್ ಅಗತ್ಯವಿದೆ. ಆದ್ದರಿಂದ ವೇಗವಾದ ಪ್ರತಿಕ್ರಿಯೆಗಾಗಿ ABS ಇಂಟರ್ವೇಂಶನ್ ಪ್ರೋಗ್ರಾಮ್ ಮಾಡಲಾಗಿದೆ.
ರೈನ್ ಮೋಡ್‌ನಲ್ಲಿ ಜಾರು ಮೇಲ್ಮೈಗಳಲ್ಲಿ ಉತ್ತಮ ನಿಯಂತ್ರಣಕ್ಕಾಗಿ ABS ಕ್ರಿಯೆಯನ್ನು ವರ್ಧಿಸಲಾಗಿದೆ. ಆದರೆ ಸ್ಪೋರ್ಟ್ ಮೋಡ್‌ನಲ್ಲಿ ಅಪಾಚೆ RTR 160 4V ಗರಿಷ್ಠ ಶಕ್ತಿ ಮತ್ತು ಅತ್ಯುತ್ತಮವಾದ ABS ಪ್ರತಿಕ್ರಿಯೆ ನೀಡುತ್ತದೆ. ಹೀರೋ ಎಕ್ಸ್‌ಟ್ರೀಮ್ 160R 4V ಬಗ್ಗೆ ಹೇಳುವುದಾದರೆ ಪ್ರಸ್ತುತ ಕಂಪನಿಯು ಅದರಲ್ಲಿ ಯಾವುದೇ ರೈಡಿಂಗ್ ಮೋಡ್‌ಗಳನ್ನು ನೀಡುತ್ತಿಲ್ಲ. ಆದರೂ ಅದರಲ್ಲಿ ಕೆಲವು ಇತರ ವೈಶಿಷ್ಟ್ಯಗಳನ್ನು ನೀಡಲಾಗಿದೆ.
ಇತರೆ ಟೆಕ್ನಿಕ್ ಫೀಚರ್ಸ್: ಹೊಸ ಬಜಾಜ್ ಪಲ್ಸರ್ NS160ನ ಟೆಕ್ನಿಕ್ ಪ್ಯಾಕೇಜ್ ಅನ್ನು ರೈಡಿಂಗ್ ಮೋಡ್‌ಗಳ ಸೇರ್ಪಡೆಯೊಂದಿಗೆ ಮತ್ತಷ್ಟು ಸುಧಾರಿಸಲಾಗಿದೆ. ಈ ಬೈಕ್ ಈಗಾಗಲೇ ಟರ್ನ್-ಬೈ-ಟರ್ನ್ ನ್ಯಾವಿಗೇಶನ್, ಡಿಸೆಂಟ್ಸ್ ಟು ಎಮ್ಟಿ, ರೀಟ್ಔಟ್, ಗೇರ್ ಪೊಜಿಶನ್ ಇಂಡಿಕೇಟರ್, ಎವರೇಜ್ ಫ್ಯೂಯಲ್ ಎಕನಾಮಿ ಮತ್ತು ರಿಯಲ್ ಟೈಮ್ ಫ್ಯೂಯಲ್ ಎಕನಾಮಿನಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಇದಲ್ಲದೆ ಇದು ಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಸ್ಪೀಡೋಮೀಟರ್, RPM ಮೀಟರ್, ಫ್ಯೂಯಲ್ ಗೇಜ್, ಓಡೋಮೀಟರ್ ಮತ್ತು ಟ್ರಿಪ್ ಮೀಟರ್ ಅನ್ನು ಸಹ ಹೊಂದಿದೆ.

ಸವಾರರು ತಮ್ಮ ಸ್ಮಾರ್ಟ್‌ಫೋನ್ ಅನ್ನು ಬ್ಲೂಟೂತ್ ಮೂಲಕ ಸಂಪರ್ಕಿಸುವ ಮೂಲಕ ಟರ್ನ್-ಟು-ಟರ್ನ್ ನ್ಯಾವಿಗೇಷನ್, ಕಾಲ್ ಮತ್ತು ಟೆಕ್ಸ್ಟ್ ಅಲರ್ಟ್ಸ್ ಜೊತೆಗೆ ಮೊಬೈಲ್ ಬ್ಯಾಟರಿ ಸ್ಟೇಟಸ್ ಅನ್ನು ಸಹ ಪರಿಶೀಲಿಸಬಹುದು. ಬೈಕ್‌ನಲ್ಲಿ ಯುಎಸ್‌ಬಿ ಮೊಬೈಲ್ ಚಾರ್ಜಿಂಗ್ ಪೋರ್ಟ್ ಕೂಡ ನೀಡಲಾಗಿದೆ. 2025 ರ ಬಜಾಜ್ ಪಲ್ಸರ್ NS160 ಬೈಕಿನ ರೈಡಿಂಗ್ ಮೋಡ್‌ಗಳನ್ನು ಹೊರತುಪಡಿಸಿ ಬೇರೆ ಯಾವುದೇ ಪ್ರಮುಖ ಅಪ್ಡೇಟ್ಗಳು ಮಾಡಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.
ಬಜಾಜ್ ಪಲ್ಸರ್ NS160 ರ ಪವರ್‌ಟ್ರೇನ್: ಈ ಮೋಟಾರ್‌ಸೈಕಲ್‌ಗೆ ಶಕ್ತಿ ತುಂಬಲು, ಇದು 160.3 ಸಿಸಿ, ಆಯಿಲ್-ಕೂಲ್ಡ್ ಎಂಜಿನ್ ಹೊಂದಿದ್ದು, ಇದು 16.9 ಬಿಎಚ್‌ಪಿ ಪವರ್ ಮತ್ತು 14.6 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಬೈಕ್‌ನ ಎರಡೂ ತುದಿಗಳಲ್ಲಿ 17 ಇಂಚಿನ ವೀಲ್ಸ್ ಟ್ಯೂಬ್‌ಲೆಸ್ ಟೈರ್‌ಗಳಿಂದ ಕೂಡಿದೆ. ಬ್ರೇಕಿಂಗ್‌ಗಾಗಿ ಇದು ಫ್ರಂಟ್ನಲ್ಲಿ 300 ಎಂಎಂ ಡಿಸ್ಕ್ ಬ್ರೇಕ್ ಮತ್ತು ರಿಯರ್ನಲ್ಲಿ 230 ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿದ್ದು, ಇದು ಡ್ಯುಯಲ್-ಚಾನೆಲ್ ಎಬಿಎಸ್ ಹೊಂದಿದೆ.
ಬೆಲೆ: ಬಜಾಜ್ ಪಲ್ಸರ್ NS160 ಅನ್ನು ₹1.49 ಲಕ್ಷ (ಎಕ್ಸ್ ಶೋ ರೂಂ) ಆರಂಭಿಕ ಬೆಲೆಯಲ್ಲಿ ಪರಿಚಯಿಸಲಾಗಿದೆ.
ಇದನ್ನೂ ಓದಿ: ಇವಿ ಮಾರಾಟದಲ್ಲಿ ಗಮನಾರ್ಹ ಸಾಧನೆ: ಟೆಸ್ಲಾಗೆ ಸೈಡ್ ಹೊಡೆದು ಮುನ್ನುಗ್ಗುತ್ತಿರುವ ಬಿವೈಡಿ