ಕಡಬ(ದಕ್ಷಿಣ ಕನ್ನಡ): ತಮ್ಮನೇ ಅಣ್ಣನ ಮೇಲೆ ಪೆಟ್ರೋಲ್ ಸುರಿದು ಹತ್ಯೆಗೆ ಯತ್ನಿಸಿದ ಘಟನೆ ಕಡಬ ತಾಲೂಕಿನ ಕೋಡಿಂಬಾಳ ಸಮೀಪದ ಕೋರಿಯರ್ ಎಂಬಲ್ಲಿ ನಡೆದಿದೆ.
ಗದಗದ ನಿವಾಸಿ ನಿಂಗಪ್ಪ ಆರೋಪಿ. ಹನುಮಪ್ಪ ಗಂಭೀರವಾಗಿ ಗಾಯಗೊಂಡಿದ್ದು, ಕಡಬ ಪ್ರಾಥಮಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಸ್ಥಳೀಯ ಪೊಲೀಸರು ಆಗಮಿಸಿದ್ದು, ಸ್ಥಳೀಯರ ಸಹಕಾರದಿಂದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ರೈಲ್ವೆ ಹಳಿ ಬಳಿ ಘಟನೆ ನಡೆದ ಕಾರಣ ಸ್ಥಳಕ್ಕೆ ರೈಲ್ವೆ ಪೊಲೀಸರ ಆಗಮನಕ್ಕಾಗಿ ಕಾಯಲಾಗುತ್ತಿದೆ.
ಅಣ್ಣ ತಮ್ಮಂದಿರು ಪುತ್ತೂರಿನಿಂದ ರೈಲಿನಲ್ಲಿ ಬಜಕರೆ ನಿಲ್ದಾಣಕ್ಕೆ ಬಂದು, ಅಲ್ಲಿಂದ ನಡೆದುಕೊಂಡು ಘಟನಾ ಸ್ಥಳಕ್ಕೆ ಬಂದಿದ್ದರು. ಪುತ್ತೂರಿನಿಂದ ಆರೋಪಿ ಪೆಟ್ರೋಲ್ ಖರೀದಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ.
ಇದನ್ನೂ ವೈದ್ಯನ ಮನೆಗೆ ಬೆಂಕಿಯಿಟ್ಟಿದ್ದ ನಾಲ್ವರ ಬಂಧನ; ಸುಪಾರಿ ಕೊಟ್ಟಿದ್ದ ಆರೋಪಿ ನಾಪತ್ತೆ