ಬೆಳ್ಳಾರೆ(ದಕ್ಷಿಣ ಕನ್ನಡ): ಇಲ್ಲಿನ ಕೊಳ್ತಿಗೆ ಗ್ರಾಮದ ಕಣಿಯಾರು ಮಲೆ ಅರ್ತಿಯಡ್ಕ ಸಿಆರ್‌ಸಿ ಕಾಲೊನಿ ಸಮೀಪ ಕಾಡಾನೆ ದಾಳಿಗೆ ತುತ್ತಾಗಿ ಮಹಿಳೆ ಮೃತಪಟ್ಟಿದ್ದಾರೆ.
ಪೆರ್ಲಂಪಾಡಿ ಸಮೀಪದ ಅರ್ತಿಯಡ್ಕ ಎಂಬಲ್ಲಿನ ನಿವಾಸಿ ಸೆಲ್ಲಮ್ಮ (65) ಮೃತರು. ಇಂದು ಬೆಳಗ್ಗೆ ಮಹಿಳೆ ಸೇರಿ ಮೂವರು ರಬ್ಬರ್ ಟ್ಯಾಪಿಂಗ್ ಮಾಡಲು ತೆರಳಿದ್ದರು. ಈ ಸಂದರ್ಭದಲ್ಲಿ ಕಣಿಯಾರು ಮಲೆ ಎಂಬಲ್ಲಿ ಆನೆ ಅಟ್ಟಿಸಿಕೊಂಡು ಬಂದಿದೆ. ಇಬ್ಬರು ಓಡಿ ತಪ್ಪಿಸಿಕೊಂಡಿದ್ದರು. ಸೆಲ್ಲಮ್ಮ ಓಡುವ ಭರದಲ್ಲಿ ಎಡವಿ ಬಿದ್ದಿದ್ದು, ಆನೆ ಮುಖ ಮತ್ತು ಹೊಟ್ಟೆಯ ಭಾಗಕ್ಕೆ ತುಳಿದಿದೆ. ಇದರಿಂದಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಟಿ.ಯೋಗರಾಜ ಎಂಬವರು ನೀಡಿದ ದೂರಿನಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.
ಅರಣ್ಯಾಧಿಕಾರಿಗಳು, ಕೆಎಫ್ಡಿಸಿ ಅಧಿಕಾರಿಗಳು, ಸುಳ್ಯ ವೃತ್ತ ನಿರೀಕ್ಷಕರು ಹಾಗೂ ಬೆಳ್ಳಾರೆ ಠಾಣಾ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ.
ಇದನ್ನೂ ಓದಿ: ಮನೆ ಬಾಗಿಲಿಗೆ ಬಂದ ಕಾಡಾನೆ! ಗಜರಾಜನ ಕಂಡು ಬೆಚ್ಚಿಬಿದ್ದ ಕುಟುಂಬಸ್ಥರು - WILD ELEPHANT