ETV Bharat / state

ಬೆಂಗಳೂರು: ಟಿಪ್ಪರ್ ಡಿಕ್ಕಿಯಾಗಿ ಪೌರಕಾರ್ಮಿಕ ಮಹಿಳೆ ಸಾವು - WOMAN CIVIC WORKER DIES

ಟಿಪ್ಪರ್ ಡಿಕ್ಕಿಯಾಗಿ ಪೌರ ಕಾರ್ಮಿಕ ಮಹಿಳೆ ಸಾವನ್ನಪ್ಪಿದ್ದಾರೆ. ಘಟನೆ ಬಳಿಕ ಸ್ಥಳದಲ್ಲಿಯೇ ಟಿಪ್ಪರ್ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.

Deceased woman and Tipper
ಮೃತ ಮಹಿಳೆ ಹಾಗೂ ಟಿಪ್ಪರ್​ (ETV Bharat)
author img

By ETV Bharat Karnataka Team

Published : April 29, 2025 at 10:48 AM IST

1 Min Read

ಬೆಂಗಳೂರು: ಟಿಪ್ಪರ್ ಲಾರಿ ಡಿಕ್ಕಿಯಾದ ಪರಿಣಾಮ ಬಯೋಮೆಟ್ರಿಕ್ ಹಾಜರಾತಿ ನೀಡಲು ತೆರಳುತ್ತಿದ್ದ ಪೌರ ಕಾರ್ಮಿಕ ಮಹಿಳೆ ಸಾವನ್ನಪ್ಪಿರುವ ದಾರುಣ ಘಟನೆ ಇಂದು ಬೆಂಗಳೂರಿನಲ್ಲಿ ನಡೆದಿದೆ. ವೆಸ್ಟ್ ಆಫ್ ಕಾರ್ಡ್ ರಸ್ತೆಯ ಶಿವನಗರ ಮೇಲ್ಸೇತುವೆಯ ಕೆಳಗೆ ಅಪಘಾತ ಸಂಭವಿಸಿದ್ದು, ಶ್ರೀರಾಂಪುರದ ನಿವಾಸಿ ಸರೋಜಮ್ಮ(51) ಸಾವನ್ನಪ್ಪಿದವರು.

ಇಂದು ಬೆಳಗ್ಗೆ 6:30ಕ್ಕೆ ಕೆಲಸಕ್ಕೆ ಹಾಜರಾಗಲು ತೆರಳುತ್ತಿದ್ದ ಸರೋಜಮ್ಮ ಬಯೋಮೆಟ್ರಿಕ್ ಹಾಜರಾತಿ ನೀಡಲು ವಾರ್ಡ್ ಆಫೀಸ್ ಕಡೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ರಸ್ತೆ ಸಿಗ್ನಲ್ ದಾಟುವಾಗ ಟಿಪ್ಪರ್ ಲಾರಿ ಡಿಕ್ಕಿಯಾಗಿದೆ. ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ಬಳಿಕ ಟಿಪ್ಪರ್ ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ವಿಜಯನಗರ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರು: ಟಿಪ್ಪರ್ ಡಿಕ್ಕಿಯಾಗಿ ಪೌರಕಾರ್ಮಿಕ ಮಹಿಳೆ ಸಾವು (ETV Bharat)

ರೆಡ್ ಸಿಗ್ನಲ್ ಇದ್ದಿದ್ದರಿಂದ ಮಹಿಳೆ ರಸ್ತೆ ದಾಟುತ್ತಿದ್ದರು. ತಕ್ಷಣ ಗ್ರೀನ್ ಸಿಗ್ನಲ್ ಬದಲಾಗಿದ್ದರಿಂದ ಟಿಪ್ಪರ್ ಚಾಲಕ ಮಹಿಳೆಯನ್ನು ಗಮನಿಸದೆ‌ ಮುಂದೆ ಸಾಗಿದ್ದಾನೆ. ಇದರಿಂದ ಟಿಪ್ಪರ್‌ನ ಮುಂದಿನ ಚಕ್ರ ಹರಿದು ಮಹಿಳೆ ಸಾವನ್ನಪ್ಪಿದ್ದಾರೆ. ಇನ್ನೇನು 2 ದಿನಗಳಲ್ಲಿ ಆಕೆಗೆ ಖಾಯಂ ಪೌರಕಾರ್ಮಿಕ ನೇಮಕಾತಿ ಪತ್ರ ಹಸ್ತಾಂತರವಾಗಬೇಕಿತ್ತು ಎಂದು ಬಿಬಿಎಂಪಿ ಪೌರಕಾರ್ಮಿಕ ಸಿಬ್ಬಂದಿ ತಿಳಿಸಿದರು ಎಂದು ಸ್ಥಳೀಯ ನಿವಾಸಿ ರೋಷನ್ ಎಂಬುವವರು ಮಾಹಿತಿ ನೀಡಿದರು.

ಇದನ್ನೂ ಓದಿ: ನಾಮಕರಣಕ್ಕೆ ತೆರಳುವಾಗ ಅವಘಡ: ಟ್ರ್ಯಾಕ್ಟರ್​ ಟ್ರೈಲರ್​ನಿಂದ ಬಿದ್ದು ಇಬ್ಬರು ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.