ಹಾಸನ : ಜೀಪ್ ರ‍್ಯಾಲಿ ವೇಳೆ ಕಾಡಾನೆಯೊಂದು ವ್ಯಕ್ತಿಯೊಬ್ಬರ ಮೇಲೆ ದಾಳಿ ಮಾಡಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಕಾಡಂಚಿನ ಬೆಳ್ಳೂರು ಗ್ರಾಮದಲ್ಲಿ ನಡೆದಿದೆ.
ಕೇರಳ ಮೂಲದ ರ‍್ಯಾಲಿ ಪ್ರಿಯನ ಮೇಲೆ ಒಂಟಿ ಆನೆಯೊಂದು ಇದ್ದಕ್ಕಿದ್ದಂತೆ ದಾಳಿ ಮಾಡಿದೆ. ದಾಳಿಯಿಂದ ಅವನು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ, ಬೆನ್ನಟ್ಟಿ ದಾಳಿ ಮಾಡಿದೆ. ದಾಳಿಗೊಳಗಾದ ವ್ಯಕ್ತಿಯನ್ನು ಅಕ್ಬರ್ ಅಲಿ ಎಂದು ಗುರುತಿಸಲಾಗಿದೆ.
ಏಪ್ರಿಲ್ 12 ಮತ್ತು 13 ರಂದು ನಡೆದ ರ‍್ಯಾಲಿಯಲ್ಲಿ ಈ ಘಟನೆ ಸಂಭವಿಸಿದೆ. ಕಾಡಾನೆ ದಾಳಿಯ ಭಯಾನಕ ದೃಶ್ಯ ಸ್ಥಳೀಯ ನಿವಾಸಿಯೊಬ್ಬರ ಮೊಬೈಲ್ ಫೋನ್ನಲ್ಲಿ ಸೆರೆಯಾಗಿದೆ.
ನಂತರ ಜನರ ಕೂಗಾಟ ಮತ್ತು ಕಿರುಚಾಟದ ಶಬ್ಧಗಳಿಂದ ಹೆದರಿ ಕಾಡಾನೆ ಓಡಿದೆ. ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಸಕಲೇಶಪುರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ : 24 ಗಂಟೆಯಲ್ಲಿ ಇಬ್ಬರನ್ನು ತುಳಿದು ಸಾಯಿಸಿದ ಆನೆ: ಮುಗಿಲು ಮುಟ್ಟಿದ ಆಕ್ರಂದನ - ELEPHANT KILLED 2 PEOPLE