ಬೆಂಗಳೂರು: ವಿ ಆರ್ ವೆರಿ Sorry, ಅನಿರೀಕ್ಷಿತವಾಗಿ ಘಟನೆ ಆಗಿದೆ. ಗುರುವಾರ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದೇವೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ನಿನ್ನೆ ಈ ಕುರಿತು ಕಾವೇರಿ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲ ಜನರು ಕೆಲಸ ಬಿಟ್ಟು ಸಂಭ್ರಮಾಚರಣೆಗೆ ಸೇರಿದ್ರು. ನಮಗೆ ಜೀವ ಬಹಳ ಮುಖ್ಯ, ನಮಗೂ ಆ ಬಗ್ಗೆ ಅರಿವಿದೆ. ವಿ ಆರ್ ವೆರಿ Sorry, ಅನಿರೀಕ್ಷಿತವಾಗಿ ಘಟನೆ ಆಗಿದೆ. ಎಲ್ಲ ಸರ್ಕಾರಿ ಕಾರ್ಯಕ್ರಮಗಳನ್ನು ರದ್ದು ಮಾಡ್ತಿದ್ದೇವೆ. ಕ್ಯಾಬಿನೆಟ್ ಅಷ್ಟೇ ನಡೆಯುತ್ತದೆ. ಎಲ್ಲ ಸೆಲೆಬ್ರೆಷನ್ ರದ್ದು ಮಾಡ್ತಿದ್ದೇವೆ. ಮೌನಾಚರಣೆ ಮಾಡಲು ಎಲ್ಲರಿಗೂ ಸೂಚನೆ ನೀಡ್ತೇವೆ. ಸಿಎಂ ಜೊತೆಗೆ ಈಗಾಗಲೇ ಚರ್ಚೆ ಮಾಡಿ ತೀರ್ಮಾನ ಮಾಡಿದ್ದೇವೆ ಎಂದು ಡಿಸಿಎಂ ಸ್ಪಷ್ಟಪಡಿಸಿದರು.
ಎಲ್ಲರ ಮನಸಿಗೂ ನೋವಾಗಿದೆ: ವಿಶ್ವ ಪರಿಸರ ದಿನಾಚರಣೆಯ ಹಿನ್ನೆಲೆ ವಿಧಾನಸೌಧದಿಂದ ರನ್ ಕಾರ್ಯಕ್ರಮ ಇಟ್ಕೊಂಡಿದ್ವಿ. ಅದನ್ನು ಕೂಡ ನಾಳೆ ರದ್ದು ಮಾಡ್ತಾ ಇದ್ದೇನೆ. ಕಾರ್ಯಕ್ರಮ ರದ್ದುಗೊಳಿಸಿ ಮುಂದೂಡಿಕೆ ಮಾಡಿದ್ದೇನೆ. ಅರಮನೆ ಪ್ಯಾಲೇಸ್ ನಲ್ಲಿರುವ ಕಾರ್ಯಕ್ರಮವನ್ನು ಕ್ಯಾನ್ಸಲ್ ಮಾಡಿದ್ದೇವೆ. ಕ್ಯಾಬಿನೆಟ್ ಸಭೆ ಮಾತ್ರ ನಡೆಯುತ್ತದೆ. ಎಲ್ಲರಿಗೂ ಗೌರವ ಕೊಡುವ ದೃಷ್ಟಿಯಿಂದ ಮೌನಚರಣೆ ಮಾಡಬೇಕು. ಎಲ್ಲರ ಮನಸಿಗೂ ನೋವಾಗಿದೆ ಎಂದರು.
ಹೆಣದ ಮೇಲೆ ಬಿಜೆಪಿ ರಾಜಕೀಯ: ನಮಗೆ ಪೊಲೀಸರು ಗೈಡ್ ಮಾಡಿದ್ರು, ನಾವು ಮುನ್ನೆಚ್ಚರಿಕೆಯಾಗಿ ತೀರ್ಮಾನ ಮಾಡಿದ್ವಿ. ಯಾರು ಬರಬಾರದು ಅಂತಲೂ ಕೂಡ ಹೇಳಿದ್ವಿ. ನಾನು ಕೋರ್ಟ್ಗೆ ಹೋಗಿದ್ದೆ, ಜನರು ಬರೋದು ನೋಡಿ. ಯಾರಿಗೂ ಒಳಗೆ ಬರಲು ಅವಕಾಶ ನೀಡಿರಲಿಲ್ಲ. ಆಕಸ್ಮಿಕವಾಗಿ ಘಟನೆಯಾಗಿದೆ, ಇಷ್ಟು ಜನರು ಬರ್ತಾರೆ ಅಂತ ನಿರೀಕ್ಷೆ ಮಾಡಿರಲಿಲ್ಲ. ನಾವು ಎರಡು ಗಂಟೆ ಮೆಟ್ರೋ ಕೂಡ ಬಂದ್ ಮಾಡಿದ್ವಿ. ಫ್ಯಾಮಿಲಿ ಮೆಂಬರ್ಸ್ ಜೊತೆಗೆ ಜನರು ಬಂದಿದ್ದಾರೆ. ನಮ್ಮ ಶಾಸಕರು ಕೂಡ ಬಂದಿದ್ರು. ಬಿಜೆಪಿ ಹೆಣದ ಮೇಲೆ ರಾಜಕಾರಣ ಮಾಡ್ತಿದ್ದಾರೆ ಎಂದು ಡಿಕೆಶಿ ಕಿಡಿಕಾರಿದರು.
ಸಿ.ಟಿ. ರವಿ, ಬಿಜೆಪಿ ಏನು ಟ್ವೀಟ್ ಮಾಡಿದೆ. ರಾಜ್ಯದ ಜನರ ಭಾವನೆ ನಾವು ತಪ್ಪು ಅಂತ ಹೇಳೋಕೆ ಆಗತ್ತಾ?. ಮಕ್ಕಳು ವಯಸ್ಸಾದವರೆಲ್ಲರೂ ರಸ್ತೆಗೆ ಬಂದಿದ್ದಾರೆ. ಪರ್ಮಿಷನ್ ಕೊಡಲಿಲ್ಲ ಅಂದ್ರೆ ತಪ್ಪು ಅಂತಾರೆ. ಆರ್‌ಸಿಬಿ ಯವರು ಪ್ರೋಗ್ರಾಂ ರಿಲೀಸ್ ಮಾಡಿದ್ರು. ನಾನು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೋಗಿ ಅಲ್ಲಿಯವರಿಗೆ ಸೂಚನೆ ನೀಡಿದೆ. ತಕ್ಷಣ ಕಾರ್ಯಕ್ರಮ ಮುಗಿಸಲಾಯಿತು.ಇವೆಲ್ಲಾ ಅನಿರೀಕ್ಷಿತ ಘಟನೆ ಎಂದರು.
ಇದನ್ನು ಓದಿ:ಆರ್‌ಸಿಬಿ ವಿಜಯೋತ್ಸವ ಸಂದರ್ಭ ರಾಜ್ಯ ಸರ್ಕಾರದ ವಿವೇಚನೆಯಿಂದ ನಡೆದುಕೊಳ್ಳಬೇಕಿತ್ತು: ವಿಜಯೇಂದ್ರ
ಎಂವಿಸಿ ಕಾಯಿದೆಯಡಿ ಪರಿಹಾರ ನಿಗದಿ ಪಡಿಸುವಾಗ ಮೃತರ ವೇತನದೊಂದಿಗೆ ಇತರ ಭತ್ಯೆಗಳನ್ನು ಪರಿಗಣಿಸಬೇಕು : ಹೈಕೋರ್ಟ್