ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವ ವೇಳೆ ಕಾಲ್ತುಳಿತದಿಂದ ಮರಣ ಹೊಂದಿದವರಿಗೆ ಕನಿಷ್ಠ 50 ಲಕ್ಷ ಪರಿಹಾರವನ್ನು ನೀಡಬೇಕು ಮತ್ತು ಈಗಾಗಲೇ ಗಾಯಗೊಂಡು ಆಸ್ಪತ್ರೆಯಲ್ಲಿರುವ ಗಾಯಾಳುಗಳಿಗೆ ಸರ್ಕಾರದ ವೆಚ್ಚದಲ್ಲಿ ಚಿಕಿತ್ಸೆಯನ್ನು ನೀಡಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ಬೌರಿಂಗ್ ಮತ್ತು ವಿಕ್ಟೋರಿಯದಂತಹ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾಲುಮುರಿತ ಮತ್ತು ತಲೆಗೆ ಏಟು ತಗುಲಿ ಗಾಯಗೊಂಡಿರುವವರ ಯುವಕ ಯುವತೀಯರಿಗೆ ಹೆಚ್ಚು ಸೌಲಭ್ಯ ಮತ್ತು ನುರಿತ ಎಲುಬು, ಕೀಳು ತಜ್ಞರಿಂದ ಶಸ್ತ್ರ ಚಿಕಿತ್ಸೆ ನೀಡಲು ತಕ್ಷಣ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿನ್ನೆ ಸಂಭವಿಸಿದ ದುರಂತ ಘಟನೆಯಲ್ಲಿ ಗಾಯಗೊಂಡು ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಇಂದು ಭೇಟಿಯಾಗಿ, ಅವರ ಆರೋಗ್ಯ ವಿಚಾರಿಸಲಾಯಿತು.
— Shobha Karandlaje (@ShobhaBJP) June 5, 2025
ರಾಜ್ಯ ಸರ್ಕಾರದ ನಿರ್ಲಕ್ಷ್ಯವು ಅಮಾಯಕರ ಜೀವಗಳಿಗೆ ಅಪಾಯವನ್ನುಂಟು ಮಾಡಿರುವುದು ಕಳವಳಕಾರಿ ಸಂಗತಿ. ಗಾಯಾಳುಗಳು ಶೀಘ್ರವೇ… pic.twitter.com/uqtP1Xbh0s
ಬೌರಿಂಗ್ ಆಸ್ಪತ್ರೆಯಲ್ಲಿ ತರೀಕೆರೆಯ ಒಬ್ಬ ವಿದ್ಯಾರ್ಥಿ ಮತ್ತು ಕೆ.ಆರ್.ಪುರ, ಬೆಂಗಳೂರಿನ ವಿದ್ಯಾರ್ಥಿ ಕಾಲು ಮುರಿತಕ್ಕೆ ಒಳಗಾಗಿದ್ದಾರೆ. ಇವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯ ಇದೆ. ಇಂತಹ ಎಲ್ಲರನ್ನೂ ಗುರುತಿಸಿ ತಕ್ಷಣ ಹೆಚ್ಚಿನ ಚಿಕಿತ್ಸೆಯ ಕಡೆ ಸರ್ಕಾರ ಗಮನ ಹರಿಸಬೇಕು ಮತ್ತು ತಕ್ಷಣ ಖಾಸಗಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಿ ಅವರ ಶಸ್ತ್ರಚಿಕಿತ್ಸೆಯ ವೆಚ್ಚವನ್ನು ಭರಿಸಬೇಕಾಗಿ ಶೋಭಾ ಕರಂದ್ಲಾಜೆ ಅವರು ಆಗ್ರಹಿಸಿದ್ದಾರೆ.
ಇನ್ನು ಘಟನೆ ಸಂಬಂಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಬೇಕೆಂದು ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳಿಗೂ ಶೋಭಾ ಕರಂದ್ಲಾಜೆ ಕೂಡಾ ಕೋರಿದ್ದರು. ಈಗಾಗಲೇ ಹೈಕೋರ್ಟ್ ಈ ಬಗ್ಗೆ ವಿಚಾರಣೆ ನಡೆಸಿ, ಸರ್ಕಾರಕ್ಕೆ ನೋಟಿಸ್ ಕೂಡಾ ಕೊಟ್ಟಿದೆ.
ಈ ಸಂಬಂಧ ಪತ್ರ ಬರೆದಿರುವ ಅವರು, ಘಟನೆಗೆ ರಾಜ್ಯ ಸರ್ಕಾರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಆಡಳಿತಾತ್ಮಕ ವೈಫಲ್ಯ ಕಾರಣವಾಗಿದೆ. ಜನರ ನಿಯಂತ್ರಣ, ತುರ್ತು ವೈದ್ಯಕೀಯ ಸೇವೆಗಳು ಆಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸದ ಕಾರಣದಿಂದ ಘಟನೆಯಲ್ಲಿ 11 ಜೀವ ಕಳೆದುಕೊಂಡಿದ್ದು, 42 ಮಂದಿ ಗಾಯಗೊಂಡಂತಾಗಿದೆ. ಜನರನ್ನು ನಿಯಂತ್ರಣ ಮಾಡುವಲ್ಲಿ ಸರ್ಕಾರದ ಇಲಾಖೆಗಳ ಸಮನ್ವಯದ ಕೊರತೆಯಿಂದ ಘಟನೆಗೆ ಕಾರಣವಾಗಿದೆ. ಆದರೆ, ಘಟನೆಗೆ ಸರ್ಕಾರ ಜವಾಬ್ದಾರರಲ್ಲ ಎಂಬುದಾಗಿ ಹೇಳಿಕೆ ನೀಡಲಾಗುತ್ತಿದೆ. ಮುಚ್ಚಿಹಾಕುವ ಯತ್ನ ನಡೆಯುತ್ತಿದೆ.
11 dead. 45+ injured.
— Shobha Karandlaje (@ShobhaBJP) June 5, 2025
Yesterday’s stampede at Bengaluru’s Chinnaswamy Stadium was a preventable tragedy, marked by total administrative collapse: no crowd control, no medical readiness, no coordination.
The State has disowned responsibility, blaming KSCA. A govt-led probe lacks… pic.twitter.com/RFHwoum4M4
ಇದನ್ನೂ ಓದಿ: ದೊಡ್ಡಮಟ್ಟದ ಸಮಾರಂಭಗಳಿಗೆ ಹೊಸ ಎಸ್‌ಒಪಿ ರೂಪಿಸುತ್ತೇವೆ: ಗೃಹ ಸಚಿವ ಜಿ. ಪರಮೇಶ್ವರ್ - SOPS