ETV Bharat / state

ಡಿ.ಕೆ. ಶಿವಕುಮಾರ್​ ಪಾಲಿಗೆ ನಾನು ನಾಗರ ಹಾವು ಇದ್ದ ಹಾಗೆ: ಹೆಚ್​.ಡಿ. ಕುಮಾರಸ್ವಾಮಿ - H D Kumaraswamy

author img

By ETV Bharat Karnataka Team

Published : Aug 10, 2024, 5:01 PM IST

Updated : Aug 10, 2024, 8:21 PM IST

ನನ್ನನ್ನು, ಯಡಿಯೂರಪ್ಪ ಅಂದು ವಿಧಾನಸಭೆಯಲ್ಲಿ ನಾಗರ ಹಾವು ಅಂದರು. ಆದರೆ ನಾನು ಡಿಕೆಶಿ ಪಾಲಿಗೆ ನಾಗರ ಹಾವೇ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.

ಹೆಚ್​.ಡಿ. ಕುಮಾರಸ್ವಾಮಿ
ಹೆಚ್​.ಡಿ. ಕುಮಾರಸ್ವಾಮಿ (ETV Bharat)
ಡಿ.ಕೆ. ಶಿವಕುಮಾರ್​ ವಿರುದ್ಧ ಹೆಚ್​ ಡಿ ಕುಮಾರಸ್ವಾಮಿ ಗುಡುಗು (ETV Bharat)

ಮೈಸೂರು: ಲೂಟಿ ಮಾಡುವವರ ಪಾಲಿಗೆ ನಾನು ನಾಗರ ಹಾವೇ ಹಾಗೂ ಡಿ.ಕೆ.ಶಿವಕುಮಾರ್‌ ಪಾಲಿಗೂ ನಾನು ನಾಗರ ಹಾವೇ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು. ನಗರದ ಮಹಾರಾಜ ಕಾಲೇಜು ಮೈದಾನದಲ್ಲಿಂದು ನಡೆದ ಬಿಜೆಪಿ, ಜೆಡಿಎಸ್‌ ಮೈಸೂರು ಚಲೋ ಪಾದಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಜನಾಂದೋಲನ ಸಭೆಯಲ್ಲಿ ಮಾತನಾಡಿದ್ದ ಡಿ.ಕೆ ಶಿವಕುಮಾರ್ ಭಾಷಣವನ್ನು ವೇದಿಕೆಯ ಸ್ಕ್ರೀನ್​ ಮೇಲೆ ಪ್ರದರ್ಶಿಸಿ​ ವಾಗ್ದಾಳಿ ನಡೆಸಿದರು.

ಬಿ ಎಸ್​ ಯಡಿಯೂರಪ್ಪ ಹಾಗೂ ನನ್ನ ನಡುವೆ ಬಿರುಕು ಮೂಡಿಸಲು ಡಿಕೆಶಿ ಶ್ರಮ ಪಟ್ಟು ಕೆಲಸ ಮಾಡುತ್ತಿದ್ದಾರೆ. ನನ್ನನ್ನು, ಯಡಿಯೂರಪ್ಪ ಅಂದು ವಿಧಾನಸಭೆಯಲ್ಲಿ ನಾಗರ ಹಾವು ಅಂದರು. ಆದರೆ ನಾನು ಡಿಕೆಶಿ ಪಾಲಿಗೆ ನಾಗರ ಹಾವೇ. ಲೂಟಿ ಮಾಡುವ ಡಿ.ಕೆ. ಶಿವಕುಮಾರ್​ಗೆ ನಾನು ನಾಗರ ಹಾವು ಇದ್ದ ಹಾಗೆ ಎಂದು ತಿರುಗೇಟು ನೀಡಿದರು.

ಈ ಬಂಡೆ ಸಿದ್ದರಾಮಯ್ಯನವರ ಜೊತೆ ಇರುತ್ತದೆ ಎಂದು ನಿನ್ನೆ ಡಿ. ಕೆ. ಶಿವಕುಮಾರ್‌ ಹೇಳಿದ್ದಾರೆ. ಇನ್ನು ಮುಂದೆ ಸಿದ್ದರಾಮಯ್ಯನವರ ಕಥೆ ಮುಗಿಯಿತು. ನಾನು ಇವರನ್ನು ನಂಬಿ 2018 ರಲ್ಲಿ ಬಂಡೆಯನ್ನ ನನ್ನ ಮೈಮೇಲೆ ಎಳೆದುಕೊಂಡೆ. ಲೋಕಸಭೆಯಲ್ಲಿ ಕಾಂಗ್ರೆಸ್​ನವರು 9ನೇ ಸ್ಥಾನವನ್ನು ಹೇಗೆ ಗೆದ್ದಿದ್ದಾರೆ ಗೊತ್ತಿದೆ. ಅದಕ್ಕೆ ನಾನು 8 ಸ್ಥಾನ ಎಂದು ಹೇಳುತ್ತೇನೆ. ನನ್ನ ಕಂಡರೆ ಹೊಟ್ಟೆಉರಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಒಳ್ಳೆಯ ಆಡಳಿತ ನೀಡಿದರೆ ನಮಗೆ ಯಾಕೆ ಹೊಟ್ಟೆಉರಿ. ನನ್ನ ಮೇಲೆ ಒಂದು ಕಪ್ಪುಚುಕ್ಕೆ ಇಲ್ಲ ಎಂದು ಸಿಎಂ ಹೇಳಿದ್ದಾರೆ. ಸಿದ್ದರಾಮಯ್ಯ ಹಿಂದುಳಿದ ವರ್ಗದ ಮುಖ್ಯಮಂತ್ರಿ ಅಲ್ಲ, ಆರೂವರೆ ಕೋಟಿ ಜನರ ಮುಖ್ಯಮಂತ್ರಿ ಎಂದರು.

ನಿಮ್ಮ ಅನ್ಯಾಯಗಳನ್ನು, ಅಕ್ರಮಗಳನ್ನು ಪ್ರಶ್ನೆ ಮಾಡುವುದು ತಪ್ಪೇ?. ಮುಡಾ ವಿಚಾರದಲ್ಲಿ ಅಕ್ರಮವಾಗಿ ನಿಮ್ಮ ಪತ್ನಿ ಹೆಸರಿನಲ್ಲಿ 14 ಸೈಟ್‌ ಪಡೆದಿರುವುದು ಅಕ್ರಮವಾಗಿಯೇ. ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ, ಖಾಕಿ ಚಡ್ಡಿ ಹಾಕಿದ್ದಾರೆಂದು ನನ್ನ ಬಗ್ಗೆ ಹೇಳಿದ್ದಾರೆ. ಆದ್ರೆ, ಸಿದ್ದರಾಮಯ್ಯ ಚಡ್ಡಿಯೆಲ್ಲ ಕಪ್ಪು ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.

ಮುಖ್ಯಮಂತ್ರಿಗಳು ನಾನು ಯಾರಿಗೂ ಜಗ್ಗುವುದಿಲ್ಲ, ಬಗ್ಗುವುದಿಲ್ಲ ಎಂದಿದ್ದಾರೆ. ನಾವು ಸಹ ನಿಮ್ಮ ಯಾವುದೇ ಬೆದರಿಕೆಗಳಿಗೆ ಬಗ್ಗುವುದಿಲ್ಲ, ನಿಮ್ಮ ಸವಾಲುಗಳನ್ನು ಸ್ವೀಕರಿಸಿದ್ದೇವೆ. ನಾವು ಮುಡಾ ಹಗರಣದ ಹೋರಾಟವನ್ನು ಇಲ್ಲಿಗೆ ನಿಲ್ಲಿಸುವುದಿಲ್ಲ. ಹೋರಾಟ ಮುಂದುವರೆಸುತ್ತೇವೆ ಎಂದರು.

ಸಿದ್ಧಾರ್ಥ ಸಾವಿಗೆ ಕಾರಣ ಯಾರು?: ಎಸ್​.ಎಂ ಕೃಷ್ಣ ಅವರು, ಕೊತ್ವಾಲ್​ ಜೊತೆಗೆ ಜೀವನ ಮಾಡಿಕೊಂಡಿದ್ದ ನಿಮಗೆ ರಾಜಕೀಯದಲ್ಲಿ ಜನ್ಮ ಕೊಟ್ಟಿದ್ದರೂ, ಆ ಕುಟುಂಬದ ಶ್ರಮಜೀವಿ ಸಿದ್ಧಾರ್ಥ ಸಾವಿಗೆ ಕಾರಣ ಯಾರು? ಎಂದು ಡಿಕೆಶಿಯನ್ನು ಇದೇ ವೇಳೆ ಪ್ರಶ್ನಿಸಿದರು.

ಇದನ್ನೂ ಓದಿ: ಆರೋಪಗಳ ವಿರುದ್ಧ ರಾಜಕೀಯ ಹಾಗೂ ಕಾನೂನು ಹೋರಾಟಕ್ಕೆ ಸಿದ್ದ : ಮುಖ್ಯಮಂತ್ರಿ ಸಿದ್ದರಾಮಯ್ಯ - CM Vists Chamundeshwari Temple

Last Updated : Aug 10, 2024, 8:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.