ETV Bharat / state

ಯುಜಿ ನೀಟ್: ಅರ್ಜಿ ಸಲ್ಲಿಸಲು ಮತ್ತೊಂದು ಅವಕಾಶ ನೀಡಿದ KEA - UG NEET

author img

By ETV Bharat Karnataka Team

Published : Aug 7, 2024, 7:50 PM IST

ಯುಜಿ ನೀಟ್ ಪರೀಕ್ಷೆಗೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತೊಂದು ಅವಕಾಶ ಕಲ್ಪಿಸಿದೆ.

KARNATAKA EXAMINATION AUTHORITY  ANOTHER CHANCE STUDENT  BENGALURU
ಕೆಇಎ (ETV Bharat)

ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್​ಗಳ ಪ್ರವೇಶಕ್ಕೆ ಇದುವರೆಗೂ ಅರ್ಜಿ ಸಲ್ಲಿಸದ ಹಾಗೂ ಯುಜಿನೀಟ್-24ನಲ್ಲಿ ಅರ್ಹತೆ ಪಡೆದವರಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಬುಧವಾರ ತನ್ನ ವೆಬ್‌ಸೈಟ್​ನಲ್ಲಿ ಲಿಂಕ್ ಬಿಡುಗಡೆ ಮಾಡಿದೆ.

ರಾಜ್ಯ ಮತ್ತು ಹೊರ ರಾಜ್ಯದ ಅರ್ಹ ಅಭ್ಯರ್ಥಿಗಳು ಮಾತ್ರ ಆಗಸ್ಟ್ 9ರೊಳಗೆ ಆನ್‌ಲೈನ್​ನಲ್ಲಿ ಅರ್ಜಿ ಸಲ್ಲಿಸಬೇಕು. ಅದರ ನಂತರ ಬರುವವರಿಗೆ ಅವಕಾಶ ಇರುವುದಿಲ್ಲ. ಕೆಇಎ ವೆಬ್‌ ಪೋರ್ಟಲ್‌ನಲ್ಲಿ, ಯುಜಿ ನೀಟ್-24ಕ್ಕೆ ಹೊಸದಾಗಿ ನೋಂದಣಿ ಮಾಡುವ ಲಿಂಕ್ ಆಯ್ಕೆ ಮಾಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ನಿಗದಿತ ಶುಲ್ಕವನ್ನು ಪಾವತಿಸಬೇಕು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿವಿಧ ಕಂಡಿಕೆಗಳಡಿ ಕ್ಲೇಮ್ ಮಾಡಿದವರಿಗೆ ಆ.9ರವರೆಗೆ ದಾಖಲೆ ಪರಿಶೀಲನೆ: ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್​ಗಳ ಪ್ರವೇಶಕ್ಕೆ ಎಲ್ಲ ವಿಧದ (ಖಾಸಗಿ, ಎನ್ ಆರ್ ಐ, ಆಡಳಿತ ಮಂಡಳಿಗಳ ಸೀಟುಗಳೂ ಸೇರಿದಂತೆ) ಸೀಟುಗಳನ್ನು ಕೆಇಎ‌ ಮೂಲಕವೇ ಹಂಚಿಕೆ ಮಾಡಲಾಗುತ್ತದೆ. ಕೊನೆ ಹಂತದಲ್ಲಿ ಬಾಕಿ ಉಳಿಯುವ ಸೀಟುಗಳನ್ನು ಕೂಡ ಕೆಇಎ ಮೂಲಕವೇ ಮಾಡಲಾಗುತ್ತದೆ. ಈ ಸಂಬಂಧ ರಾಷ್ಟೀಯ ವೈದ್ಯಕೀಯ ಮಂಡಳಿಯ (ಎನ್​ಎಂಸಿ) ಸ್ಪಷ್ಟ ನಿರ್ದೇಶನವಿದೆ.

ಅರ್ಹತಾ ಕಂಡಿಕೆಗಳಾದ ಬಿ, ಸಿ, ಡಿ, ಐ, ಜೆ, ಕೆ, ಎಲ್, ಎಂ, ಎನ್- ಕ್ಲೇಮ್ ಮಾಡಿರುವ ಹಾಗೂ ನೀಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದವರು ನಿಗದಿತ ದಿನಾಂಕಗಳಂದು ದಾಖಲೆಗಳ ಪರಿಶೀಲನೆಗೆ ಹಾಜರಾಗದೇ ಇದ್ದರೆ ಅಂತಹವರು ಆಗಸ್ಟ್ 9ರವರೆಗೆ ಕೆಇಎ ಕಚೇರಿಗೆ ಖುದ್ದು ಹಾಜರಾಗಿ ದಾಖಲೆಗಳ ಪರಿಶೀಲನೆ ಮಾಡಿಸಿಕೊಳ್ಳಬೇಕು. ದಾಖಲೆಗಳ ಪರಿಶೀಲನೆ ಮಾಡಿಸಿಕೊಳ್ಳದೇ ಇದ್ದಲ್ಲಿ ಅಂತಹವರು ವೈದ್ಯಕೀಯ ಕೋರ್ಸ್​ಗಳ ಪ್ರವೇಶಕ್ಕೆ ಅರ್ಹರಾಗುವುದಿಲ್ಲ.

ಕಂಡಿಕೆಗಳಲ್ಲಿ ದಾಖಲೆಗಳ ಪರಿಶೀಲನೆ ಪೂರ್ಣಗೊಳಿಸಿರುವ ಅಭ್ಯರ್ಥಿಗಳಿಗೆ ಆಯಾ ದಿನವೇ ಪರಿಶೀಲನಾ ಪತ್ರ (ವೆರಿಫಿಕೇಷನ್ ಸ್ಲಿಪ್) ನೀಡಿದ್ದು, ಅದನ್ನೇ ಯುಜಿ ನೀಟ್ ಪ್ರವೇಶಕ್ಕೂ ಬಳಸಬಹುದಾಗಿದೆ. ಯುಜಿ ಸಿಇಟಿ ಅರ್ಜಿಗೆ ಯುಜಿ ನೀಟ್ ರೋಲ್ ಸಂಖ್ಯೆಯನ್ನು ಲಿಂಕ್ ಮಾಡಬೇಕು ಮತ್ತು ಅರ್ಜಿ ಪ್ರತಿಯನ್ನು ಮುದ್ರಣ ಮಾಡಿಕೊಳ್ಳಬೇಕು. ಅಂತಹವರು ಯುಜಿ ನೀಟ್ ವೆರಿಫಿಕೇಷನ್ ಸ್ಲಿಪ್ ಡೌನ್​ಲೋಡ್ ಮಾಡಿಕೊಳ್ಳುವ ಅಗತ್ಯ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಯುಜಿ ಸಿಇಟಿ ವೆರಿಫಿಕೇಷನ್ ಸ್ಲಿಪ್​ನಲ್ಲಿ ಮುದ್ರಿತವಾಗಿರುವ ಸೀಕ್ರೆಟ್ ಕೀ ಮತ್ತು ಅರ್ಜಿ ಸಂಖ್ಯೆಯನ್ನೇ ನಮೂದಿಸಿ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್​ಗಳಿಗೆ ಇಚ್ಛೆಗಳನ್ನು (ಆಪ್ಷನ್) ದಾಖಲಿಸಬಹುದು. ಇದಕ್ಕೆ ಸದ್ಯದಲ್ಲೇ ಪೋರ್ಟಲ್ ಅನ್ನು ತೆರೆಯಲಾಗುವುದು. ಹೆಚ್ಚಿನ ವಿವರಗಳಿಗೆ ಕೆಇಎ ವೆಬ್ ಸೈಟ್​ಗೆ ಭೇಟಿ ನೀಡಬೇಕು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಸ್ಮಾರ್ಟ್‌ ಸಿಟಿ ಯೋಜನೆ ಕಾಮಗಾರಿಗಳ ಬಗ್ಗೆ ಆಕ್ಷೇಪಣೆ: ಹು-ಧಾ ಪಾಲಿಕೆ ಆಯುಕ್ತರು ಹೇಳಿದ್ದೇನು? - Hubballi Smart City Projects

ETV Bharat Logo

Copyright © 2024 Ushodaya Enterprises Pvt. Ltd., All Rights Reserved.