ETV Bharat / state

ಪುರುಷರ ವೇಷ ಧರಿಸಿ ಆಟೋ ಚಲಾಯಿಸುತ್ತಾ ಮನೆಗಳ್ಳತನ: ಇಬ್ಬರು ಮಹಿಳೆಯರ ಬಂಧನ - TWO HOUSE BURGLARS ARRESTED

ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಮಹಿಳೆಯರನ್ನು ಬೆಂಗಳೂರಿನ ಬೊಮ್ಮನಹಳ್ಳಿ‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

TWO WOMEN ARRESTED
ಬಂಧಿತರು (ETV Bharat)
author img

By ETV Bharat Karnataka Team

Published : April 29, 2025 at 4:46 PM IST

1 Min Read

ಬೆಂಗಳೂರು: ಆಟೋ ಚಲಾಯಿಸಿಕೊಂಡು ಬಂದು ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಇಬ್ಬರು ಮಹಿಳೆಯರನ್ನು ಬೊಮ್ಮನಹಳ್ಳಿ‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಿಲೋಫರ್ ಹಾಗೂ ಶಬ್ರೀನ್ ತಾಜ್ ಬಂಧಿತ ಆರೋಪಿಗಳು. ಬಂಧಿತರಿಂದ 130 ಗ್ರಾಂ ಚಿನ್ನಾಭರಣ ಹಾಗೂ 1 ಆಟೋ ರಿಕ್ಷಾವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪುರುಷ ವೇಷ ಧರಿಸಿ ಆಟೋ ಚಲಾಯಿಸುತ್ತಿದ್ದ ನಿಲೋಫರ್, ಮನೆ ಅಂಗಡಿಗಳಲ್ಲಿ ಚಿನ್ನಾಭರಣ, ನಗದು ಕಳ್ಳತನ ಮಾಡುತ್ತಿದ್ದಳು. ಅಂಗಡಿಗೆ ಹೊಂದಿಕೊಂಡಂತಿರುವ ಮನೆಯೊಂದರಲ್ಲಿ ಕೈಚಳಕ ತೋರಿದ್ದ ನಿಲೋಫರ್‌ಳನ್ನು ಕಳೆದ ವರ್ಷ ಆಗಸ್ಟ್‌ನಲ್ಲಿ ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು‌.

ಜೈಲಿನಿಂದ ಹೊರಬಂದ ಬಳಿಕ ಶಬ್ರೀನ್ ತಾಜ್‌ಳೊಂದಿಗೆ ಸೇರಿದ್ದ ನಿಲೋಫರ್, ಮತ್ತದೇ ಕಳ್ಳತನದ ಚಾಳಿಯನ್ನ ಮುಂದುವರೆಸಿದ್ದಳು. ಮಾ.17ರಂದು ಇಬ್ಬರೂ ಸೇರಿ ಹಾಡಹಗಲೆ ಬೊಮ್ಮನಹಳ್ಳಿ ವ್ಯಾಪ್ತಿಯ ಮನೆಯೊಂದರ ಮುಂಬಾಗಿಲಿನ ಬೀಗವನ್ನು ಮುರಿದಿದ್ದ ಆರೋಪಿಗಳು, 130 ಗ್ರಾಂ ಚಿನ್ನಾಭರಣ ಹಾಗೂ 3 ಲಕ್ಷ ನಗದು ದೋಚಿ ಪರಾರಿಯಾಗಿದ್ದರು.

ಮನೆ ಮಾಲೀಕ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಬೊಮ್ಮನಹಳ್ಳಿ ಠಾಣೆ ಪೊಲೀಸರು, ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಮೈಕೋ ಲೇಔಟ್ ಠಾಣೆ ವ್ಯಾಪ್ತಿಯಲ್ಲಿಯೂ ಮನೆಳ್ಳತನ ಮಾಡಿರುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ಬಂಧಿತರು ಕದ್ದ ಚಿನ್ನಾಭರಣಗಳನ್ನ ಅಡವಿಟ್ಟಿದ್ದ ಡಿ.ಜೆ.ಹಳ್ಳಿ, ಟ್ಯಾನರಿ ರಸ್ತೆಯಲ್ಲಿರುವ ಜ್ಯೂವೆಲ್ಲರಿ ಅಂಗಡಿಗಳಿಂದ 130 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

ಇದನ್ನೂ ಓದಿ: ನೆಲಮಂಗಲ: ವ್ಯಕ್ತಿಯನ್ನು ಅಪಹರಿಸಿ ಕೊಲೆಗೈದು ಶವ ಬೇರೆಡೆ ಬಿಸಾಡಿ ಹೋದ ಹಂತಕರು

ಇದನ್ನೂ ಓದಿ: ಚಿಕ್ಕಬಳ್ಳಾಪುರ: ₹3 ಕೋಟಿ ಮೌಲ್ಯದ 5,140 ಮೊಬೈಲ್​ ಕಳವು ಪ್ರಕರಣ, 7 ಆರೋಪಿಗಳ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.