ETV Bharat / state

TCS ವರ್ಲ್ಡ್ 10K ರಾಯಭಾರಿ ದಲೀಹಾ ಮುಹಮ್ಮದ್ ಬೆಂಗಳೂರಿಗೆ ಆಗಮನ - DALILAH MUHAMMAD

TCS ವರ್ಲ್ಡ್ 10K ರಾಯಭಾರಿ ದಲೀಹಾ ಮುಹಮ್ಮದ್ ಬೆಂಗಳೂರಿಗೆ ಆಗಮಿಸಿದ್ದಾರೆ.

Dalilah Muhammad
ದಲೀಹಾ ಮುಹಮ್ಮದ್ (ETV Bharat)
author img

By ETV Bharat Karnataka Team

Published : April 24, 2025 at 8:53 PM IST

1 Min Read

ಬೆಂಗಳೂರು: 17ನೇ ಆವೃತ್ತಿಯ TCS ವರ್ಲ್ಡ್ 10K ಮ್ಯಾರಥಾನ್‌ ರಾಯಭಾರಿಯಾಗಿರುವ ಹಾಗೂ ಎರಡು ಬಾರಿ ಒಲಿಂಪಿಕ್ಸ್‌ ಚಾಂಪಿಯನ್ ದಲೀಹಾ ಮುಹಮ್ಮದ್ ಅವರು ಬೆಂಗಳೂರಿಗೆ ಆಗಮಿಸಿದ್ದಾರೆ.‌

ಏಪ್ರಿಲ್ 27 (ಭಾನುವಾರ)ರಂದು ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್‌ನ ಗೋಲ್ಡ್ ಲೇಬಲ್ ರೇಸ್ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡ ಅವರು, ಇದು ಭಾರತಕ್ಕೆ ನನ್ನ ಮೊದಲ ಭೇಟಿ. ಓಟವನ್ನು ಆಚರಿಸುವ ಮತ್ತು ಅನೇಕ ಜನರನ್ನು ಒಟ್ಟುಗೂಡಿಸುವ ಈವೆಂಟ್‌ಗಾಗಿ ನಾನು ಉತ್ಸುಕಳಾಗಿದ್ದೇನೆ. ಓಟ ನನಗೆ ತುಂಬಾ ನೀಡಿದೆ. ಬೆಂಗಳೂರಿನಲ್ಲಿಯೂ ಅದೇ ಅನುಭವವನ್ನು ಎದುರು ನೋಡುತ್ತಿದ್ದೇನೆ ಎಂದು ಹೇಳಿದರು.

35 ವರ್ಷದ ಯುಎಸ್ಎನ ಅಥ್ಲೀಟ್ ದಲೀಹಾ ಇತ್ತೀಚೆಗೆ ನಡೆದ ಬೋಟ್ಸ್ವಾನಾ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು.

Dalilah Muhammad
ದಲೀಹಾ ಮುಹಮ್ಮದ್ (ETV Bharat)

ತಮ್ಮ ವೃತ್ತಿಜೀವನದ ಬಗ್ಗೆ ಮಾತನಾಡಿದ ಅವರು, 2024ರ ಪ್ಯಾರಿಸ್ ಒಲಿಂಪಿಕ್ಸ್ ನಂತರ ತಾವು ನಿವೃತ್ತಿ ಹೊಂದಲು ಆರಂಭದಲ್ಲಿ ಯೋಜಿಸಿದ್ದೆ. ಆದಾಗ್ಯೂ, ದೈಹಿಕ ಮತ್ತು ಮಾನಸಿಕವಾಗಿ ಚೇತರಿಸಿಕೊಳ್ಳಲು ಅಗತ್ಯವಾದ ವಿರಾಮವನ್ನು ತೆಗೆದುಕೊಂಡ ನಂತರ, ತಮ್ಮ ವಿದಾಯವನ್ನು 2025ಕ್ಕೆ ಮುಂದೂಡಲು ನಿರ್ಧರಿಸಿದೆ. ನನ್ನ ದೇಹಕ್ಕೆ ನಿಜವಾಗಿಯೂ ವಿರಾಮ ಬೇಕಿತ್ತು ಎಂದು ಹೇಳಿದರು.

TCS ವರ್ಲ್ಡ್ 10K ಕುರಿತು ಮಾತನಾಡುತ್ತಾ, "ಯಾವಾಗಲೂ ಒಟ್ಟಿಗೆ ಓಡುವಾಗ ತುಂಬಾ ಖುಷಿಯಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಓಟದಲ್ಲಿ ನನ್ನ ನೆಚ್ಚಿನ ಮತ್ತು ಅತ್ಯಂತ ಆನಂದದಾಯಕ ಅನುಭವವೆಂದರೆ ಒಂದೇ ಉದ್ದೇಶದಿಂದ ಜನರೊಂದಿಗೆ ಓಡುವುದು'' ಎಂದರು.

ಮ್ಯಾರಥಾನ್ ದಿನಾಂಕ: 27 ಏಪ್ರಿಲ್ 2025, ಬೆಳಿಗ್ಗೆ 5:15
ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್ 1 ಮತ್ತು ಸೋನಿ ಸ್ಪೋರ್ಸ್ 1 ಹೆಚ್‌ಡಿ.

ಇದನ್ನೂ ಓದಿ: TCS ವರ್ಲ್ಡ್ 10K ಮ್ಯಾರಥಾನ್; ವೈಯಕ್ತಿಕ ಸಾಧನೆಯ ಗುರಿಯೊಂದಿಗೆ ಅಖಾಡದಲ್ಲಿದ್ದಾರೆ ಒಂಟಿ ಕಾಲಿನ ಸಾಧಕ ಉದಯ್ ಕುಮಾರ್ - TCS 10K WORLD MARATHON

ETV Bharat Logo

Copyright © 2025 Ushodaya Enterprises Pvt. Ltd., All Rights Reserved.