ಚಾಮರಾಜನಗರ: ಒಂದೇ ಸ್ಥಾನಕ್ಕೆ ಇಬ್ಬರು ಅಧಿಕಾರಿಗಳು ಪೈಪೋಟಿ ನಡೆಸಿ ಕಚೇರಿಯಲ್ಲಿ ಕುಳಿತ ಘಟನೆ ಗುಂಡ್ಲುಪೇಟೆ ಪುರಸಭೆಯಲ್ಲಿ ಇಂದು ಸಂಜೆ ನಡೆದಿದೆ.
ಗುಂಡ್ಲುಪೇಟೆ ಪುರಸಭೆಗೆ ಈ ಹಿಂದೆ ಮುಖ್ಯಾಧಿಕಾರಿಯಾಗಿದ್ದ ವಸಂತ ಕುಮಾರಿ ಅವರನ್ನು ಸ್ಥಳ ತೋರದೆ ವರ್ಗಾವಣೆ ಮಾಡಲಾಗಿತ್ತು. ಇವರ ಸ್ಥಾನಕ್ಕೆ ಎಸ್.ಸರವಣ ವರ್ಗಾವಣೆಗೊಂಡು ಕಳೆದ 10 ದಿನದ ಹಿಂದೆ ಅಧಿಕಾರ ವಹಿಸಿಕೊಂಡಿದ್ದರು.
ಗ್ರೇಡ್-1 ಹುದ್ದೆ ಅದಾಗಿದ್ದು, ಸರವಣ ಗ್ರೇಡ್-2 ಅಧಿಕಾರಿಯಾಗಿದ್ದಾರೆ. ತನಗಿನ್ನೂ 4 ತಿಂಗಳು ಕರ್ತವ್ಯ ಬಾಕಿ ಇದ್ದು, ವರ್ಗಾವಣೆ ರದ್ದುಗೊಳಿಸುವಂತೆ ಕೆಎಟಿ ಮೆಟ್ಟಿಲೇರಿದ್ದ ವಸಂತ ಕುಮಾರಿ ವರ್ಗಾವಣೆ ರದ್ದು ಮಾಡಿಸಿದ್ದರು.
![Gundlupete](https://etvbharatimages.akamaized.net/etvbharat/prod-images/13-12-2024/kn-cnr-01-officer-av-ka10038_13122024184535_1312f_1734095735_589.jpg)
ಅದರಂತೆ, ಆದೇಶ ಪತ್ರ ಹಿಡಿದು ಬಂದ ವಸಂತ ಕುಮಾರಿ ಅವರಿಗೆ ಸರವಣ ಅಧಿಕಾರ ಹಸ್ತಾಂತರ ಮಾಡದ ಹಿನ್ನೆಲೆಯಲ್ಲಿ ಮುಖ್ಯಾಧಿಕಾರಿ ಕಚೇರಿಯಲ್ಲಿ ಇಬ್ಬರು ಅಧಿಕಾರಿಗಳು ಕರ್ತವ್ಯ ನಿರ್ವಹಿಸಿದ್ದಾರೆ.
ಇದನ್ನೂ ಓದಿ : ಕೊಳ್ಳೇಗಾಲ ನಗರಸಭೆ ಸಿಬ್ಬಂದಿ ಎಡವಟ್ಟು: ಮರಣ ಪ್ರಮಾಣ ಪತ್ರದಲ್ಲಿ ತಾಯಿ ಬದಲು ಮಗನ ಹೆಸರು! - DEATH CERTIFICATE