ಬೆಂಗಳೂರು: ರಾಜಧಾನಿಯಲ್ಲಿ ಭಾನುವಾರ ರಾತ್ರಿ ಸುರಿದ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ. ರಸ್ತೆಗಳ ಇಕ್ಕೆಲಗಳಲ್ಲಿ ನೀರು ತುಂಬಿದ್ದರಿಂದ ವಾಹನ ಸವಾರರು ಹೈರಾಣಾದರೆ, ಮನೆಗಳಿಗೆ ನುಗ್ಗಿರುವ ನೀರು ಹೊರಹಾಕಲು ನಾಗರಿಕರು ವಿವಿಧ ಕಸರತ್ತುಗಳನ್ನು ನಡೆಸಿದ್ದಾರೆ. ಈ ಮಧ್ಯೆ ಮಳೆಯಿಂದಾಗಿ ಗೋಡೆ ಕುಸಿದು ಮಹಿಳೆ ಸಾವನ್ನಪ್ಪಿದ್ದರು. ಇದೀಗ ಮತ್ತಿಬ್ಬರು ಸಾವನ್ನಪ್ಪಿದ್ದು, ಮಳೆ ಸಂಬಂಧಿ ಘಟನೆಗಳಲ್ಲಿ ಮೂವರು ಪ್ರಾಣ ಕಳೆದುಕೊಂಡಂತಾಗಿದೆ.
ಅಪಾರ್ಟ್ ಮೆಂಟ್ ನೆಲಮಹಡಿಯಲ್ಲಿ ತುಂಬಿದ್ದ ನೀರು ತೆರವುಗೊಳಿಸಲು ಮುಂದಾದಾಗ ವಿದ್ಯುತ್ ಪ್ರವಹಿಸಿ ಇಬ್ಬರು ಸಾವನ್ನಪ್ಪಿದ್ದಾರೆ. ಮೈಕೋ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಸಂಜೆ ಘಟನೆ ನಡೆಯಿತು. ಮನಮೋಹನ್ ಕಾಮತ್( 63) ಹಾಗೂ ದಿನೇಶ್ (9) ಸಾವನ್ನಪ್ಪಿದವರೆಂದು ಗುರುತಿಸಲಾಗಿದೆ.
#WATCH | Karnataka: Cars partially submerged amid heavily waterlogged roads due to incessant rains in Bengaluru.
— ANI (@ANI) May 19, 2025
(Visuals from Sai Layout area) pic.twitter.com/EusH71jmvZ
ಬಿಟಿಎಂ ಲೇಔಟ್ ಎರಡನೇ ಹಂತದ ಎನ್.ಎಸ್.ಪಾಳ್ಯದ ಮಧುಬನ ಅಪಾರ್ಟ್ ಮೆಂಟ್ ವೊಂದರಲ್ಲಿ ದುರ್ಘಟನೆ ನಡೆದಿದೆ. ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸೆಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಅಪಾರ್ಟ್ ಮೆಂಟ್ ಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
#WATCH | Bengaluru, Karnataka: Several parts of the city witness waterlogging after heavy rains.
— ANI (@ANI) May 19, 2025
(Visuals from Silk Board Metro Station) pic.twitter.com/ji5gjGygCr
ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಅಪಾರ್ಟ್ ಮೆಂಟ್ ನೆಲಮಹಡಿ ಜಲಾವೃತವಾಗಿತ್ತು. ಸಂಪೂರ್ಣವಾಗಿ ನೀರು ಆವರಿಸಿಕೊಂಡಿದ್ದರಿಂದ ಮೋಟಾರ್ ಮೂಲಕ ತೆರವುಗೊಳಿಸಲು ಮನಮೋಹನ್ ಅವರು ಮುಂದಾದಾಗ ವಿದ್ಯುತ್ ಹರಿದಿದೆ. ಇದೇ ವೇಳೆ, ಬಾಲಕ ದಿನೇಶ್ ಗೂ ವಿದ್ಯುತ್ ಪ್ರವಹಿಸಿದ್ದರಿಂದ ಇಬ್ಬರೂ ಸಾವನ್ನಪ್ಪಿದ್ದಾರೆ.
VIDEO | Karnataka: Heavy rains caused severe waterlogging in residential areas in Bengaluru.
— Press Trust of India (@PTI_News) May 19, 2025
(Source: Third Party)#Bengaluru #Rains pic.twitter.com/IpmwRDclMb
ಮೈಕೊ ಲೇಔಟ್ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.