ETV Bharat / state

ರಾಯಚೂರು: ಬೈಕ್​ಗೆ ಕಾರು ಡಿಕ್ಕಿ - ಇಬ್ಬರು ಸವಾರರು ಸಾವು - BIKE CAR ACCIDENT

ದ್ವಿಚಕ್ರ ವಾಹನ ಹಾಗೂ ಕಾರಿನ ನಡುವೆ ಡಿಕ್ಕಿಯಾಗಿ ಇಬ್ಬರು ಮೃತಪಟ್ಟ ಘಟನೆ ರಾಯಚೂರಿನ ಯರಗೇರಾದಲ್ಲಿ ನಡೆದಿದೆ.

two-killed-in-bike-car-accident-in-raichur
ಅಪಘಾತ ನಡೆದ ಸ್ಥಳ (ETV Bharat)
author img

By ETV Bharat Karnataka Team

Published : June 8, 2025 at 2:59 PM IST

1 Min Read

ರಾಯಚೂರು: ದ್ವಿಚಕ್ರ ವಾಹನ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸವಾರರು ಮೃತಪಟ್ಟಿದ್ದಾರೆ. ರಾಯಚೂರಿನ ಯರಗೇರಾ ಬಳಿ ಘಟನೆ ಸಂಭವಿಸಿದೆ.

ಯರಗೇರಾದ ಮಂತ್ರಾಲಯ - ರಾಯಚೂರು ಸಂಪರ್ಕ ಕಲ್ಪಿಸುವ ರಸ್ತೆಯ ರಾಯಚೂರು ವಿಶ್ವವಿದ್ಯಾಲಯ ಬಳಿ ಈ ಅಪಘಾತ ನಡೆದಿದೆ. ಕರೆಬೂದೂರು ಗ್ರಾಮದ ಉರುಕುಂದ ಈರಣ್ಣ (42) ಹಾಗೂ ಲಕ್ಷ್ಮಣ ತಿಮ್ಮಪ್ಪ ಮೃತಪಟ್ಟವರು. ಉರುಕುಂದ ಅವರು ಅಪಘಾತವಾದ ಕೆಲಹೊತ್ತಲ್ಲೇ ಮೃತಪಟ್ಟರೆ, ಲಕ್ಷ್ಮಣ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅಸುನೀಗಿದ್ದಾರೆ. ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ಕೆಲಸದ ನಿಮಿತ್ತ ಉರುಕುಂದ ಹಾಗೂ ಸ್ನೇಹಿತ ಜೊತೆಗೂಡಿ ರಾಯಚೂರು ನಗರಕ್ಕೆ ಆಗಮಿಸಿದ್ದರು. ಬಳಿಕ ವಾಪಸ್ ತಮ್ಮ ಊರಿಗೆ ತೆರಳುವಾಗ ಬೈಕ್​ಗೆ ಕಾರು ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಇಬ್ಬರು ಸವಾರರು ರಸ್ತೆಯಲ್ಲಿ ಬಿದ್ದು, ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಆಸ್ಪತ್ರೆಗೆ ತಲುಪುವ ಮುನ್ನವೇ ಉರುಕುಂದ ಕೊನೆಯುಸಿರೆಳೆದಿದ್ದಾರೆ. ಘಟನೆ ಸಂಬಂಧ ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬಸ್​ನಲ್ಲಿ ಪ್ರಯಾಣಿಸುವ ಮಹಿಳೆಯರೇ ಟಾರ್ಗೆಟ್​: ಹಾಸನದಲ್ಲಿ ನಾಲ್ವರು ಖತರ್ನಾಕ್ ಕಳ್ಳಿಯರ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.