ಬೆಂಗಳೂರು - ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕ್ ನಲ್ಲಿ ಅಡಗಿದ್ದ ಭಯೋತ್ಪಾದಕರ ಶಿಬಿರಗಳ ಮೇಲೆ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿದ್ದು ಗೊತ್ತೇ ಇದೆ. ಈ ಕಾರ್ಯಾಚರಣೆ ವೇಳೆ ಪಾಕಿಸ್ತಾನಕ್ಕೆ ಬೆಂಬಲ ನೀಡಿ ಯುದ್ಧ ಸಾಮಗ್ರಿಗಳನ್ನು ಒದಗಿಸಿದ ಟರ್ಕಿ ಮತ್ತು ಅಜರ್ ಬೈಜಾನ್ ದೇಶಗಳ ಜೊತೆಗಿನ ಟೆಕ್ಸ್ ಟೈಲ್ ವಲಯಕ್ಕೆ ಸಂಬಂದಿಸಿದ ಎಲ್ಲಾ ತರಹದ ರಫ್ತು ಮತ್ತು ಆಮದು ವಹಿವಾಟನ್ನು ಬೆಂಗಳೂರು ಹೋಲ್ ಸೇಲ್ ಬಟ್ಟೆ ವ್ಯಾಪಾರಿಗಳ ಸಂಘ ಸ್ಥಗಿತಗೊಳಿಸಿದೆ.
ಹೋಲ್ ಸೇಲ್ ಬಟ್ಟೆ ವ್ಯಾಪಾರಿಗಳು ಟರ್ಕಿ ಯಿಂದ ಸೂಟಿಂಗ್ ಅಂಡ್ ಶರ್ಟಿಂಗ್ಗಳು, ಗಾರ್ಮೆಂಟ್ ಗಳು ಸೇರಿದಂತೆ ಅಪಾರ ಪ್ರಮಾಣದಲ್ಲಿ ಬಟ್ಟೆಗಳನ್ನು ಆಮದು ಮಾಡಿಕೊಂಡು ಇಲ್ಲಿಂದ ಬಟ್ಟೆಗಳನ್ನು ರಫ್ತು ಸಹ ಮಾಡುತ್ತಿದ್ದರು. ಟರ್ಕಿ ದೆಶವು ಆಪರೇಷನ್ ಸಿಂಧೂರ ವೇಳೆ ಬಹಿರಂಗವಾಗಿ ಪಾಕ್ ಪರ ತನ್ನ ಬೆಂಬಲ ವ್ಯಕ್ತಪಡಿಸಿದ್ದರಿಂದ ಬಟ್ಟೆ ವ್ಯಾಪಾರಿಗಳು ತೀವ್ರ ಅಸಮಾದಾನ ವ್ಯಕ್ತಪಡಿಸಿದ್ದು, ಭಯೋತ್ಪದನೆ ಮತ್ತು ಭಯೋತ್ಪಾದನೆ ಪೋಷಿಸುವ ಪಾಕ್ ಜೊತೆ '' ಟಾಕ್ ಮತ್ತು ಟ್ರೇಡ್ ಒಟ್ಟಿಗೆ ನಡೆಯುವುದಿಲ್ಲ ಎನ್ನುವ ಪ್ರಧಾನಿ ಮೋದಿ ನಿರ್ಧಾರವನ್ನು ಬೆಂಬಲಿಸಿ ವಹಿವಾಟನ್ನು ಬಂದ್ ಮಾಡಿದ್ದಾರೆ.
ಟರ್ಕಿ ಮತ್ತು ಅಜರ್ ಬೈಜಾನ್ ದೇಶಗಳ ಜೊತೆಗಿನ ವ್ಯಾಪಾರ ವಹಿವಾಟನ್ನು ಸ್ಥಗಿಗೊಳಿಸುವ ನಿರ್ಧಾರ ತಗೆದುಕೊಂಡ ಬಗ್ಗೆ '' ಈ ಟಿವಿ ಬಾರತ '' ಕ್ಕೆ ಮಾಹಿತಿ ನೀಡಿರುವ ಬೆಂಗಳೂರು ಸಗಟು ಬಟ್ಟೆ ವ್ಯಾಪಾರಿಗಳ ಸಂಘದ ಅದ್ಯಕ್ಷ ಪ್ರಕಾಶ್ ಪಿರ್ಗಲ್ ಅವರು ಈ ಕ್ಷಣದಿಂದಲೇ ವಹಿವಾಟು ಕಡಿತಗೊಳಿಸಲಾಗಿದೆ. ಈಗಾಗಲೇ ಬಟ್ಟೆ ಉತ್ಪನ್ನಗಳನ್ನು ಆಮದು ಮಡಿಕೊಳ್ಳಲು ನೀಡಿರುವ ಆರ್ಡರ್ ಗಳನ್ನು ಸಹ ರದ್ದು ಮಾಡಲಾಗಿದೆ ಎಂದು ತಿಳಿಸಿದರು.
ಸಂಘದ ಈ ತೀರ್ಮಾನದಿಂದ ಕರ್ನಾಟಕದಾದ್ಯಂತ ಟರ್ಕಿ ಮತ್ತು ಅಜರ್ ಬೈಜಾನ್ ದೇಶಗಳ ಸಗಟು ಬಟ್ಟೆ ವ್ಯಾಪಾರಿಗಳು ಟೆಕ್ಸ್ ಟೈಲ್ ವಲಯದಿಂದ ನಡೆಸುತ್ತಿದ್ದ ವ್ಯಾಪಾರ ವಹಿವಾಟು ರದ್ದು ಆದಂತಾಗಿದೆ. ಪಾಕ್ ಬೆಂಬಲಕ್ಕೆ ನಿಂತಿರುವ ಆ ಎರಡೂ ದೇಶಗಳಿಗೆ ಟೆಕ್ಸ್ ಟೈಲ್ ವಲಯದಲ್ಲಿ ತೀವ್ರ ಹಿನ್ನಡೆಯಾಗಲಿದೆ ಎಂದು ಪ್ರಕಾಶ್ ಪಿರ್ಗಲ್ ಅವರು ಹೇಳಿದರು. ಟರ್ಕಿ ಮತ್ತು ಅಜರ್ ಬೈಜಾನ್ ಜೊತೆಗಿನ ಆಮದು ರಫ್ತನ್ನು ಪರ್ಯಾಯವಾಗಿ ಯಾವ ದೇಶದ ಜೊತೆ ನಡೆಸಲಾಗುತ್ತದೆ ಎಂದು ಕೇಳಲಾದ ಪ್ರಶ್ನೆಗೆ ಸದ್ಯಕ್ಕೆ ಆ ಬಗ್ಗೆ ಇನ್ನೂ ಯಾವ ತೀರ್ಮಾನ ತಗೆದುಕೊಂಡಿಲ್ಲವೆಂದು ತಿಳಿಸಿದರು.
ಮೂರು ಸಾವಿರ ಸದಸ್ಯರನ್ನು ಹೊಂದಿರುವ ಸಂಘ: ಬೆಂಗಳೂರು ಹೋಲ್ ಸೇಲ್ ಬಟ್ಟೆ ವ್ಯಾಪಾರಿಗಳ ಸಂಘವು ಮೂರು ಸಾವಿರ ಸದಸ್ಯರನ್ನು ಹೊಂದಿದ್ದು ಸಂಘದ ಈ ನಿರ್ಧಾರದಿಂದ ಟರ್ಕಿ ದೇಶಕ್ಕೆ ಅಪಾರ ಪ್ರಮಾಣದ , ಕೋಟ್ಯಂತರ ರೂಪಾಯಿಗಳ ನಷ್ಟವುಂಟಾಗುತ್ತದೆ ಎಂದು ತಿಳಿಸಿದರು. ಟರ್ಕಿಯಲ್ಲಿ ಭೂಕಂಪ ಸಂಭವಿಸಿದಾಗ ಬೆಂಗಳೂರಿನಿಂದ ಮತ್ತು ದೇಶದಿಂದ ಸಾಕಷ್ಟು ಪ್ರಮಾಣದಲ್ಲಿ ಮೆಡಿಸನ್, ಆಹಾರ, ಬಟ್ಟೆ ಗಳನ್ನು ಕಳುಹಿಸಿ ನೆರವು ನೀಡಲಾಗಿತ್ತು. ಆಪತ್ ಕಾಲದಲ್ಲಿ ಮಾಡಿದ ಈ ಸಹಾಯವನ್ನೂ ಗಮನಿಸದೇ ಟರ್ಕಿ ದೇಶವು ಪಾಕ್ ಪರ ಬೆಂಬಲ ನೀಡಿದ್ದಕ್ಕೆ ತಮಗೆ ಖೇದ ವುಂಟಾಗಿದೆ. ಕಷ್ಟಕಾಲದಲ್ಲಿ ಟರ್ಕಿಗೆ ಧವಸ ಧಾನ್ಯಗಳು,ಮೆಡಿಸನ್ ಸಹಾಯ ಮಾಡಿದ್ದಕ್ಕೆ ಪಶ್ಚಾತ್ತಾಪ ಉಂಟಾಗುತ್ತಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಭಾವನೆ ಮತ್ತು ವ್ಯಾಪಾರಿ ಸಮುದಾಯದ ಹಿತಾಸಕ್ತಿಯ ಬದ್ಧತೆಗೆ ಅನುಗುಣವಾಗಿ ಸಂಘದ ಸದಸ್ಯರ ಜೊತೆ ಚರ್ಚೆ ಮಾಡಿದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಟರ್ಕಿ ಮತ್ತು ಅಜರ್ ಬೈಜಾನ್ ನಿಂದ ಬಟ್ಟೆ ಆಮದು ಮತ್ತು ರಫ್ತನ್ನು ನಿಲ್ಲಿಸಲು, ಮಧ್ಯವರ್ತಿಗಳು ಅಥವಾ ಮೂರನೇ ವ್ಯಕ್ತಿಯ ದೇಶಗಳ ಮೂಲಕ ಪರೋಕ್ಷವಾಗಿ ವ್ಯಾಪಾರದಲ್ಲಿ ತೊಡಗಿಸಿಕೊಳ್ಳುವುದನ್ನು ತಡೆಯಲು ಹೋಲ್ ಸೇಲ್ ಬಟ್ಟೆ ವ್ಯಾಪಾರಿಗಳ ಸಂಘದ ಎಲ್ಲಾ ಸದಸ್ಯರು ಸಮ್ಮತಿ ನೀಡಿದ್ದಾರೆ. ಎಂದು ಸಂಘದ ಅದ್ಯಕ್ಷ ಪ್ರಕಾಶ್ ಪಿರ್ಗಲ್ ಅವರು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: ಪ್ರಧಾನಿ ಮೋದಿಗಾಗಿ ಸುಳ್ಯದಲ್ಲಿ ಕೊರಗಜ್ಜನಿಗೆ ಹರಕೆ ತೀರಿಸಿದ ಬಿ.ವೈ ವಿಜಯೇಂದ್ರ