ETV Bharat / state

ತುಮಕೂರು: ಮಗಳನ್ನು ಹುಡುಕಿಕೊಡುವಂತೆ ಠಾಣೆ ಮುಂದೆ ಪೋಷಕರಿಂದ ಅರೆಬೆತ್ತಲೆ ಪ್ರತಿಭಟನೆ - PARENTS PROTEST

ಯುವತಿ ಮನೆಗೆ ಬಂದು ಪೋಷಕರನ್ನು ಕೂಡಿಹಾಕಿ ಅಪಹರಣ ಆರೋಪ ಮಾಡಲಾಗಿತ್ತು ಎಂದು ಪೋಷಕರು ಆರೋಪಿಸಿದ್ದರು

Thipatur Police Station
ತಿಪಟೂರು ನಗರ ಪೊಲೀಸ್ ಠಾಣೆ (ETV Bharat)
author img

By ETV Bharat Karnataka Team

Published : April 18, 2025 at 7:13 AM IST

Updated : April 18, 2025 at 10:40 AM IST

1 Min Read

ತುಮಕೂರು: ಹಾಡಹಗಲೇ ಮಗಳ ಅಪಹರಣವಾಗಿದ್ದು ಹುಡುಕಿಕೊಡುವಂತೆ ಪೊಲೀಸರ ಬಳಿ ಬಂದರೂ ನ್ಯಾಯ ಸಿಗಲಿಲ್ಲ ಎಂದು ಆರೋಪಿಸಿ ಮಗಳನ್ನು ಹುಡುಕಿಕೊಡುವಂತೆ ಪೊಲೀಸ್ ಠಾಣೆ ಎದುರೇ ಪೋಷಕರು ಅರೆಬೆತ್ತಲೆ ಪ್ರತಿಭಟನೆ ನಡೆಸಿದ ಘಟನೆ ತುಮಕೂರು ಜಿಲ್ಲೆ ತಿಪಟೂರು ನಗರ ಪೊಲೀಸ್ ಠಾಣೆ ಎದುರು ನಡೆದಿದೆ.

ತಿಪಟೂರು ನಗರದ ಕಂಚಾಘಟ್ಟ ನಿವಾಸಿ ರಂಗಸ್ವಾಮಿ ಎಂಬುವವರ ಕುಟುಂಬದಿಂದ ಈ ಪ್ರತಿಭಟನೆ ನಡೆದಿದೆ.

ಹಿರೆಬಿದರೆ ಗ್ರಾಮದ ಯುವಕನೊಬ್ಬ ಮಗಳನ್ನು ಪ್ರೀತಿಸುತ್ತಿದ್ದ, ಯುವಕನ ತಾಯಿ ಆಟೋದಲ್ಲಿ ಬಂದು ತಮ್ಮ ಮಗಳನ್ನು ಕರೆದೊಯ್ದಿದ್ದಾರೆ ಎಂದು ಪೋಷಕರು ಆರೋಪಿಸಿದ್ದರು. ದೂರು ನೀಡಲು ಬಂದವರಿಗೆ ಸ್ಪಂದಿಸಲಿಲ್ಲ ಎಂಬ ಕಾರಣದಿಂದ ಪೋಷಕರು ಠಾಣೆ ಎದುರು ಪ್ರತಿಭಟನೆ ನಡೆಸಿದರು.

ಪೊಲೀಸರ ಸಂಧಾನ - ಪ್ರಕರಣ ಸುಖಾಂತ್ಯ: ನಂತರ ಅವರನ್ನು ಸಮಾಧಾನ ಪಡಿಸಿದ ಪೊಲೀಸರು ಪ್ರತಿಭಟನೆ ಮುಂದುವರೆಸದಂತೆ ತಡೆದರು. ರಾತ್ರಿ ಪ್ರಿಯಕರನೊಂದಿಗೆ ಠಾಣೆಗೆ ಬಂದ ಯುವತಿ, ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯಾಗುವುದಾಗಿ ಒಪ್ಪಿಕೊಂಡಿದ್ದಾರೆ. ಮಗಳ ಪ್ರೀತಿಗೆ ಪೋಷಕರು ಒಪ್ಪಿದ್ದು, ಎರಡು ಮನೆಯವರಿಂದ ಮದುವೆಗೆ ಒಪ್ಪಿಗೆ ದೊರೆತ ನಂತರ ಪ್ರಕರಣ ಸುಖಾಂತ್ಯ ಕಂಡಿದೆ.

ಇದನ್ನೂ ಓದಿ: India weds London; ವೃತ್ತಿ ಬೆಸೆದ ಬಾಂಧವ್ಯ: ಲಂಡನ್ ಯುವತಿ ವರಿಸಿದ ಗಂಗಾವತಿ ಹುಡುಗ; ಹೀಗಿದೆ ಇವರ ಹಿನ್ನೆಲೆ!

Last Updated : April 18, 2025 at 10:40 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.