ತುಮಕೂರು: ಪೋಕ್ಸೋ ಪ್ರಕರಣದ ಅಪರಾಧಿಗೆ ತುಮಕೂರಿನ ಎಸ್.ಟಿ.ಎಸ್.ಸಿ -1 ನ್ಯಾಯಾಲಯದ ನ್ಯಾಯಾಧೀಶರು 20 ವರ್ಷ ಜೈಲು ಶಿಕ್ಷೆ ಮತ್ತು 1,50,000 ರೂ. ದಂಡ ವಿಧಿಸಿ ಇಂದು ತೀರ್ಪು ನೀಡಿದ್ದಾರೆ.
2022ರ ಏಪ್ರಿಲ್ 3ರಂದು ನೊಂದ ಬಾಲಕಿಯ ತಾಯಿ ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಿದ್ದರು. ಪೊಲೀಸ್ ಇನ್ಸ್ಪೆಕ್ಟರ್ ನವೀನ್ ಕುಮಾರ್ ಎಂ.ಬಿ. ಹಾಗೂ ಮಹಿಳಾ ಪೊಲೀಸ್ ಠಾಣೆ ಸಿಬ್ಬಂದಿ ಪ್ರಕರಣದ ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿದ್ದರು. ಬಳಿಕ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪ ಸಾಬೀತಾದ ನಂತರ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ.
ವಿಶೇಷ ಸರ್ಕಾರಿ ಅಭಿಯೋಜಕರಾಗಿ ಆಶಾ ಕೆ.ಎಸ್. ವಾದ ಮಂಡಿಸಿದ್ದರು.
ಇದನ್ನೂ ಓದಿ: ಕೊಲೆ ಯತ್ನ, ಸಾರ್ವಜನಿಕ ಆಸ್ತಿ ನಾಶ ಪ್ರಕರಣ: ಮಹಾನಗರ ಪಾಲಿಕೆ ಸದಸ್ಯೆ ಸೇರಿ 11 ಮಂದಿಗೆ ಜೈಲು ಶಿಕ್ಷೆ