ETV Bharat / state

ಪುಟ್ಟೇನಹಳ್ಳಿ ಠಾಣೆಯಲ್ಲಿ ದಾಖಲಾಗಿದ್ದ ಚೀಟಿ ಅವ್ಯವಹಾರ ಪ್ರಕರಣ: ಸಿಐಡಿಗೆ ವರ್ಗಾವಣೆ ಮಾಡುವಂತೆ ಪೊಲೀಸ್ ಆಯುಕ್ತರಿಗೆ ಪತ್ರ - LETTER TO POLICE COMMISSIONER

ಆರೋಪಿಗಳು ನೂರಾರು ಮಂದಿಗೆ ಬರೋಬರಿ 10 ಕೋಟಿ ರೂ.ಗೂ ಅಧಿಕ ಹಣ ವಂಚಿಸಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹೀಗಾಗಿ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡುವಂತೆ ಕೋರಲಾಗಿದೆ ಎಂದು ಮೂಲಗಳು ತಿಳಿಸಿವೆ

Ticket fraud case registered at Puttenahalli police station
ಸಾಂದರ್ಭಿಕ ಪತ್ರ (ETV Bharat)
author img

By ETV Bharat Karnataka Team

Published : June 23, 2025 at 11:38 PM IST

1 Min Read

ಬೆಂಗಳೂರು: ಪುಟ್ಟೇನಹಳ್ಳಿ ಠಾಣೆಯಲ್ಲಿ ದಾಖಲಾಗಿದ್ದ ಚೀಟಿ ಹೆಸರಿನಲ್ಲಿ ಕೋಟ್ಯಂತರ ರೂ. ವಂಚಿಸಿದ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡುವಂತೆ ದಕ್ಷಿಣ ವಿಭಾಗದ ಡಿಸಿಪಿ ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ವಂಚನೆ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳಾದ ಜೆ.ಪಿ.ನಗರದ 6ನೇ ಹಂತದಲ್ಲಿರುವ ಸುಧಾ, ಆಕೆಯ ಪತಿ ಸಿದ್ದಾಚಾರಿ, ಯಶವಂತ ಮತ್ತು ವರ್ಷಿಣಿ ಎಂಬವರು ಪರಾರಿಯಾಗಿದ್ದಾರೆ. ಆರೋಪಿಗಳು ನೂರಾರು ಮಂದಿಗೆ ಬರೋಬರಿ 10 ಕೋಟಿ ರೂ.ಗೂ ಅಧಿಕ ಹಣ ವಂಚಿಸಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹೀಗಾಗಿ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡುವಂತೆ ಕೋರಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸದ್ಯ ವಂಚನೆ ಸಂಬಂಧ ಜೆ.ಪಿ.ನಗರದ ಪುಷ್ಪಲತಾ ಎಂಬವರು ನೀಡಿದ ದೂರಿನ ಮೇರೆಗೆ ನಾಲ್ವರು ಆರೋಪಿಗಳ ವಿರುದ್ಧ ಪುಟ್ಟೇನಹಳ್ಳಿ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ.

ಆರೋಪಿ ಸುಧಾ, ತನ್ನ ಪತಿ ಹಾಗೂ ಮಕ್ಕಳ ಜೊತೆ ಸೇರಿ ಸುಮಾರು 20 ವರ್ಷಗಳಿಂದ ಚೀಟಿ ವ್ಯವಹಾರ ಮಾಡುತ್ತಿದ್ದಾರೆ. ಹೀಗಾಗಿ ಸುಧಾ ಬಳಿ 5 ಲಕ್ಷ ರೂ. ಮೌಲ್ಯದ 2 ಚೀಟಿ ಹಾಕಿದ್ದು, 25 ಸಾವಿರ ರೂ. ಕಟ್ಟುತ್ತಿದ್ದೆ. ಈ ಚೀಟಿಗಳಲ್ಲಿ 40 ಮಂದಿ ಇದ್ದಾರೆ. ಹೀಗೆ 20 ತಿಂಗಳ ಚೀಟಿ ಹಣವನ್ನು ಪಾವತಿ ಮಾಡಿದ್ದೇನೆ. ಈ ಮಧ್ಯೆ ಚೀಟಿ ಎತ್ತಿಕೊಡುವಂತೆ ಕೇಳಿದಾಗ, ಸುಧಾ ಇದೇ ಮೊದಲ ಬಾರಿಗೆ ಚೀಟಿ ಹಾಕಿದ್ದಿರಿಂದ ಕೊನೆಯಲ್ಲಿ ಚೀಟಿ ಎತ್ತಿಕೊಳ್ಳಿ ಎಂದರು. ಹೀಗಾಗಿ ಚೀಟಿ ಎತ್ತಿಕೊಂಡಿರಲಿಲ್ಲ. ಈ ನಡುವೆ ಸುಧಾ ತನ್ನ ಇಡೀ ಕುಟುಂಬದ ಜತೆ ಜೂ. 3 ರಂದು ರಾತ್ರಿ ಮನೆ ಬಿಟ್ಟು ಪರಾರಿಯಾಗಿದ್ದಾರೆ. ಹೀಗಾಗಿ ತನ್ನ 10 ಲಕ್ಷ ರೂ. ಚೀಟಿ ಹಣವನ್ನು ಪಡೆದು ಪರಾರಿಯಾಗಿರುವ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಪುಷ್ಪಲತಾ ದೂರಿನಲ್ಲಿ ಕೋರಿದ್ದಾರೆ.

10 ಕೋಟಿ ರೂ.ಗೂ ಅಧಿಕ ವಂಚನೆ ಆರೋಪ; ಈ ನಡುವೆ ದಿನೇ ದಿನೇ ಆರೋಪಿಗಳ ವಿರುದ್ಧ ದೂರು ನೀಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಪ್ರತಿಯೊಬ್ಬ ದೂರುದಾರನಿಂದ ಹಣ ಪಾವತಿಸಿರುವ ಬಗ್ಗೆ ದಾಖಲೆ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ. ಪ್ರಾಥಮಿಕವಾಗಿ ಆರೋಪಿಗಳು ಬರೋಬರಿ 10 ಕೋಟಿ ರೂ. ವಂಚಿಸಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದನ್ನು ಓದಿ: ಬೆಂಗಳೂರಲ್ಲಿ ಮಹಿಳೆಯನ್ನ ಎಳದಾಡಿ ಅಸಭ್ಯವಾಗಿ ನಡೆದುಕೊಂಡ ಪ್ರಕರಣ: ಪರ -ವಿರೋಧ ಪ್ರಕರಣ ದಾಖಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.