ETV Bharat / state

ರಷ್ಯಾದಲ್ಲಿ ಸಿಲುಕಿದ್ದ ಕಲಬುರಗಿಯ ಮೂವರು ಯುವಕರು ತಾಯ್ನಾಡಿಗೆ ವಾಪಸ್ - Youths Returned From Russia

ನಕಲಿ ಜಾಬ್​ ಏಜೆನ್ಸಿಯನ್ನು ನಂಬಿ ಲಕ್ಷಾಂತರ ಹಣ ನೀಡಿ ರಷ್ಯಾಕ್ಕೆ ತೆರಳಿದ್ದ ಕಲಬುರಗಿಯ ಮೂವರು ಯುವಕರನ್ನು ಯುದ್ಧಕ್ಕಾಗಿ ಬಳಸಿಕೊಳ್ಳಲಾಗಿತ್ತು. ಇವರನ್ನು ಮರಳಿ ಕರೆತರಲು ಮಲ್ಲಿಕಾರ್ಜುನ ಖರ್ಗೆ ಕೂಡಾ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಪ್ರಧಾನಿ ಮೋದಿ ರಷ್ಯಾ ಭೇಟಿಯ ನಂತರ ಈ ಯುವಕರನ್ನು ಅಲ್ಲಿನ ಸರ್ಕಾರ ಬಿಡುಗಡೆಗೊಳಿಸಿ ಭಾರತಕ್ಕೆ ಕಳುಹಿಸಿದೆ.

author img

By ETV Bharat Karnataka Team

Published : Sep 16, 2024, 8:10 AM IST

ರಷ್ಯಾದಲ್ಲಿ ಸಿಲುಕಿಕೊಂಡಿದ್ದ ಕಲಬುರಗಿಯ ಮೂವರು ಯುವಕರು ತಾಯ್ನಾಡಿಗೆ ವಾಪಸ್
ರಷ್ಯಾದಿಂದ ಕಲಬುರಗಿಗೆ ವಾಪಸ್ ಆದ ಯುವಕರು (ETV Bharat)

ಕಲಬುರಗಿ: ರಷ್ಯಾದಲ್ಲಿ ಸಿಲುಕಿಕೊಂಡಿದ್ದ ಕಲಬುರಗಿಯ ಮೂವರು ಯುವಕರು ತಾಯ್ನಾಡಿಗೆ ವಾಪಸ್ ಆಗಿದ್ದಾರೆ. ಇವರೂ ಸೇರಿದಂತೆ ಒಟ್ಟು 6 ಮಂದಿ ಭಾರತೀಯರು ಸುರಕ್ಷಿತವಾಗಿ ಮರಳಿ ಬಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾಕ್ಕೆ ಭೇಟಿ ನೀಡಿದ ಕೆಲವೇ ದಿನದಲ್ಲಿ ಈ ಬೆಳವಣಿಗೆ ನಡೆದಿದೆ.

ಕಲಬುರಗಿಯ ನೂರಾನಿ ಮೊಹಲ್ಲಾ ನಿವಾಸಿ ಸೈಯದ್ ಇಲಿಯಾಸ್ ಹುಸೇನಿ, ಇಸ್ಲಾಮಬಾದ್ ಕಾಲೊನಿ ನಿವಾಸಿ ಮಹ್ಮದ್ ಸಮೀರ, ಮಿಜಗುರಿ ಪ್ರದೇಶದ ಮಹ್ಮದ್ ನಯೂಮ್ ವಾಪಸ್ ಆದವರು.

ರಷ್ಯಾಗೆ ಉದ್ಯೋಗ ಅರಸಿ 2023ರ ಡಿಸೆಂಬರ್​ ತಿಂಗಳಲ್ಲಿ ಕಲಬುರಗಿಯ ಈ ಯುವಕರು ತೆರಳಿದ್ದರು. ಮುಂಬೈ ಮೂಲದ ಬಾಬಾ ಜಾಬ್ ಸೆಕ್ಯೂರಿಟಿ ಏಜೆನ್ಸಿ ಯುವಕರಿಂದ ಲಕ್ಷಾಂತರ ರೂಪಾಯಿ ಪಡೆದು, ರಷ್ಯಾದಲ್ಲಿ ಸೆಕ್ಯೂರಿಟಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿತ್ತು. ಅದರಂತೆ, ಯುವಕರು ರಷ್ಯಾಕ್ಕೆ ತೆರಳಿದ್ದರು.

ಸೇನೆಯಲ್ಲಿ ಬಂಕರ್‌ ಅಗೆಯುವ ಕೆಲಸ: ಆದರೆ ಅಲ್ಲಿ ಉಕ್ರೇನ್ ಮತ್ತು ರಷ್ಯಾ ಮಧ್ಯೆ ಯುದ್ಧ ಶುರುವಾದ ಬಳಿಕ ರಷ್ಯಾ ಸೇನೆ ಈ ಯುವಕರನ್ನು ಯುದ್ದದಲ್ಲಿ ಬಳಸಿಕೊಳ್ಳಲು ಸೂಚಿಸಿತ್ತು. ಬಂಕರ್‌ಗಳನ್ನು ಅಗೆಯುವ ಕೆಲಸಕ್ಕೆ ಇವರನ್ನು ನಿಯೋಜಿಸಿತ್ತು. ಇದರಿಂದ ಬೇಸತ್ತ ಯುವಕರು ರಷ್ಯಾದಲ್ಲಿ ತಮಗೆ ನೀಡಿರುವ ಕೆಲಸದ ಕುರಿತು ವಿಡಿಯೋ ಮಾಡಿ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು‌. ಇದನ್ನು ಗಮನಿಸಿ ಯುವಕರನ್ನು ಮರಳಿ ತರುವಂತೆ ಕೇಂದ್ರ ಸರಕಾರಕ್ಕೆ ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡಾ ಪತ್ರ ಬರೆದು ಒತ್ತಾಯಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾಕ್ಕೆ ಭೇಟಿ ನೀಡಿ ವಾಪಸ್ ಆದ ಕೆಲವೇ ದಿನಗಳಲ್ಲಿ ಮೂವರು ಭಾರತಕ್ಕೆ ಮರಳಿದ್ದಾರೆ. ಯುದ್ಧಭೂಮಿಯಿಂದ ಮರಳಿದ ಅಬ್ದುಲ್​​ ನಯಿಮ್​, ಅಲ್ಲಿನ ಪರಿಸ್ಥಿತಿಯನ್ನು ಮಾಧ್ಯಮಗಳ ಮುಂದೆ ವಿವರಿಸಿದರು.

"ಪ್ರತಿಕ್ಷಣವೂ ಸಾವನ್ನು ಬೆನ್ನಿಗೆ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದೆವು. ಯಾವ ಕ್ಷಣದಲ್ಲಾದರೂ ಬಾಂಬ್​ ಬೀಳಬಹುದು ಎನ್ನುವ ಭಯದಲ್ಲಿದ್ದೆವು. ನಮ್ಮ ಜೊತೆಗಿದ್ದ ಗುಜರಾತ್‌ನ​ ಯುವಕ ಬಾಂಬ್​ ದಾಳಿಯಲ್ಲಿ ಸಾವನ್ನಪ್ಪಿದ್ದಾನೆಂದು ಹೇಳಿದ್ದಾರೆ. ಹೀಗಾಗಿ ನಮ್ಮನ್ನು ರಕ್ಷಿಸಿ ಎಂದು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಕಲಬುರಗಿ ಜಿಲ್ಲಾಡಳಿತದ ಮೊರೆ ಹೋಗಿದ್ದೆವು. ಅದರಂತೆ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷರ ಜೊತೆ ಮಾತನಾಡಿದ ಹಿನ್ನೆಲೆಯಲ್ಲಿ ನಾವೆಲ್ಲರೂ ಸುರಕ್ಷಿತವಾಗಿ ವಾಪಸ್ ಬಂದೆವು" ಎಂದು ತಿಳಿಸಿದರು.

ಯುವಕರು ನಕಲಿ ಜಾಬ್​ ಏಜೆನ್ಸಿಗಳಿಗೆ ಬಲಿಯಾಗಬೇಡಿ-ಡಿಸಿ: ಈ ಬಗ್ಗೆ ಪ್ರತಿಕ್ರಿಯಿಸಿರುವ ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್​, "ನಕಲಿ ಜಾಬ್​ ಏಜೆನ್ಸಿಗಳು ಯುವಕರನ್ನು ಮರಳು ಮಾಡಿ ಹೆಚ್ಚಾಗಿ ಮೋಸ ಮಾಡುತ್ತಿವೆ. ಯುವಕರು ಆಲೋಚಿಸದೆ ಈ ಏಜೆನ್ಸಿಗಳಿಗೆ ಬಲಿ ಆಗಬಾರದು" ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧ ಕೊನೆಗೊಳಿಸಲು ಶಾಂತಿದೂತನಾಗಲಿದೆಯಾ ಭಾರತ? ವಿಶ್ಲೇಷಣೆ - Russia Ukraine Peace Talks

ETV Bharat Logo

Copyright © 2024 Ushodaya Enterprises Pvt. Ltd., All Rights Reserved.