ETV Bharat / state

ಚಾಮರಾಜನಗರ: ಮಗಳ ಮದುವೆಗೆ ಕೂಡಿಟ್ಟ 20 ಲಕ್ಷ ರೂಪಾಯಿ, ಚಿನ್ನ ಕಳವು - Chamarajanagar House Theft

ಯಾರೂ ಇಲ್ಲದ ವೇಳೆ ಮನೆಗೆ ಕನ್ನ ಹಾಕಿದ ಕಳ್ಳರು, ಮಗಳ ಮದುವೆಗೆಂದು ಕೂಡಿಟ್ಟ ಹಣ ಹಾಗೂ ಚಿನ್ನಾಭರಣ ದೋಚಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

author img

By ETV Bharat Karnataka Team

Published : Sep 10, 2024, 11:28 AM IST

Updated : Sep 10, 2024, 12:49 PM IST

HOUSE THEFT IN CHAMARAJANAGAR
ಚಾಮರಾಜನಗರದಲ್ಲಿ ಮನೆಗಳ್ಳತನ ಪ್ರಕರಣ (ETV Bharat)

ಚಾಮರಾಜನಗರ: ಮನೆ ಬಾಗಿಲು ಮುರಿದು ಮದುವೆಗೆ ಕೂಡಿಟ್ಟಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಕಳ್ಳರು ಕದ್ದೊಯ್ದ ಘಟನೆ ಹನೂರು ಪಟ್ಟಣದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

ಹನೂರು ಪಟ್ಟಣದ 11ನೇ ವಾರ್ಡ್​ನ ನಿವಾಸಿ ಚಿನ್ನದೊರೆ ಎಂಬವರು ತಮ್ಮ ಮಗಳ ಮದುವೆ ಖರ್ಚಿಗಾಗಿ ಮನೆಯಲ್ಲಿ 20 ಲಕ್ಷ ನಗದು ಹಾಗೂ 500 ಗ್ರಾಂ ಚಿನ್ನ ಕೂಡಿಟ್ಟಿದ್ದರು. ಕಾರ್ಯನಿಮಿತ್ತ ತಮಿಳುನಾಡಿಗೆ ಹೋಗಿ ಸೋಮವಾರ ತಡರಾತ್ರಿ ವಾಪಸ್ ಮನೆಗೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.

ಚಾಮರಾಜನಗರದ ಬೆರಳಚ್ಚು ತಜ್ಞರು ಸ್ಥಳಕ್ಕೆ ಆಗಮಿಸಿ ತಪಾಸಣೆ ನಡೆಸಿದ್ದಾರೆ. ಹನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ಅಂಗಡಿಯ ಕ್ಯಾಶ್ ಟೇಬಲ್ ಮುರಿದು 5 ಲಕ್ಷ ರೂಪಾಯಿ ಕಳ್ಳತನ - Chikkaballapur Shop Theft

Last Updated : Sep 10, 2024, 12:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.