ETV Bharat / state

ಚಿಕ್ಕಬಳ್ಳಾಪುರ: ಕಸ ಸಂಗ್ರಹಿಸುವ ಮಹಿಳೆಗೆ ಒಲಿಯಿತು ನಗರಸಭೆ ಉಪಾಧ್ಯಕ್ಷೆ ಸ್ಥಾನ - Garbage collector woman now VP

ಜೀವನ ನಡೆಸಲು ಮನೆಮನೆಗೆ ತೆರಳಿ ಕಸ ಸಂಗ್ರಹಿಸುವ ಕೆಲಸ ಮಾಡುತ್ತಿದ್ದ ಮಹಿಳೆಯೋರ್ವರು ಈಗ ನಗರಸಭೆಯ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.

author img

By ETV Bharat Karnataka Team

Published : Sep 14, 2024, 7:06 AM IST

ನಗರಸಭಾ ಉಪಾಧ್ಯಕ್ಷೆ ಶಾಂತಿನಗರ ರಾಣಿಯಮ್ಮ
ನಗರಸಭಾ ಉಪಾಧ್ಯಕ್ಷೆ ಶಾಂತಿನಗರ ರಾಣಿಯಮ್ಮ (ETV Bharat)
ಸಂಭ್ರಮಾಚರಣೆ. (ETV Bharat)

ಚಿಕ್ಕಬಳ್ಳಾಪುರ: ಚಿಂತಾಮಣಿ ನಗರದ ವಿವಿಧೆಡೆ ಮನೆ ಬಾಗಿಲಿಗೆ ಭೇಟಿ ನೀಡಿ ಕಸ ಸಂಗ್ರಹಿಸುವ ಕಾಯಕವನ್ನು ನಿರ್ವಹಿಸುತ್ತಿರುವ ಶಾಂತಿನಗರದ ರಾಣಿಯಮ್ಮ ಅವರು ಸಚಿವ ಡಾ ಎಂ. ಸಿ. ಸುಧಾಕರ್​ ಬೆಂಬಲಿತರಾಗಿ ನಗರಸಭಾ ಸದಸ್ಯರಾಗಿ ಆಯ್ಕೆಗೊಂಡು ಈಗ ಉಪಾಧ್ಯಕ್ಷರ ಸ್ಥಾನ ಅಲಂಕರಿಸಿದ್ದಾರೆ.

ನಗರಸಭೆಯ ಉಪಾಧ್ಯಕ್ಷೆ ಹುದ್ದೆ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದು, ಸಚಿವ ಸುಧಾಕರ್​​ ಬಣದಲ್ಲಿ ಈ ಹಿಂದೆ ಅಧ್ಯಕ್ಷರಾಗಿದ್ದ ರೇಖಾ ಉಮೇಶ್​ ಹಾಗೂ ರಾಣಿಯಮ್ಮರಿಗೆ ಮಾತ್ರ ಅವಕಾಶವಿತ್ತು. ಈ ಹಿನ್ನೆಲೆಯಲ್ಲಿ ರಾಣಿಯಮ್ಮರಿಗೆ ಉಪಾಧ್ಯಕ್ಷೆ ಸ್ಥಾನ ಒಲಿದುಬಂದಿದೆ.

ಈ ಬಗ್ಗೆ ಮಾತನಾಡಿರುವ ರಾಣಿಯಮ್ಮ, ನಾನು ಮನೆ ಬಾಗಿಲಿಗೆ ಭೇಟಿ ನೀಡಿ ಕಸ ಸಂಗ್ರಹಿಸುವ ವೃತ್ತಿಯಲ್ಲಿ ಇದ್ದೆ. ಕಳೆದ ನಗರಸಭಾ ಚುನಾವಣೆಯಲ್ಲಿ ಸಚಿವರಾದ ಡಾ. ಎಂ. ಸಿ. ಸುಧಾಕರ್​​ ಚುನಾವಣೆಯಲ್ಲಿ ಅವಕಾಶ ಮಾಡಿಕೊಟ್ಟರು. ನನ್ನ ವಾರ್ಡಿನ ಜನತೆ ನನ್ನ ಕೈಹಿಡಿದು ಚುನಾವಣೆಯಲ್ಲಿ ಗೆಲ್ಲಿಸಿದ್ದರ ಫಲವಾಗಿ ನಾನು ಇಂದು ಉಪಾಧ್ಯಕ್ಷೆಯಾಗಿದ್ದೇನೆ. ನನ್ನಂತಹವರನ್ನು ಈ ಹುದ್ದೆಗೆ ಆಯ್ಕೆ ಮಾಡಿದ ಸಚಿವರು ಹಾಗೂ ನನ್ನನ್ನು ಆಯ್ಕೆ ಮಾಡಿದ್ದ ವಾರ್ಡಿನ ಜನತೆಗೆ ಸದಾ ಚಿರಋಣಿಯಾಗಿರುತ್ತೇನೆ. ಹಾಗೇ ನಗರದಲ್ಲಿ ಸ್ವಚ್ಛತೆ ಮತ್ತು ನೀರಿನ ಸಮಸ್ಯೆಗೆ ಹೆಚ್ಚಿನ ಗಮನವನ್ನು ಕೊಟ್ಟು ಜನರ ಸಮಸ್ಯೆಗಳನ್ನು ಬಗೆಹರಿಸಿ ಸಚಿವ ಎಂಸಿ ಸುಧಾಕರ್​​ ಅವರಿಗೆ ಒಳ್ಳೆಯ ಹೆಸರು ತರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ನಗರದಂತೆ ಮೈಸೂರಿಗೂ ರೈಲ್ವೆ ಸೌಲಭ್ಯ ಸಿಗಲಿದೆ: ಕೇಂದ್ರ ಸಚಿವ ವಿ.ಸೋಮಣ್ಣ - railway facility to Mysuru

ETV Bharat Logo

Copyright © 2024 Ushodaya Enterprises Pvt. Ltd., All Rights Reserved.