ಚಾಮರಾಜನಗರ : ಕಟಾವು ಮಾಡಿ ಮನೆ ಮುಂದೆ ರಾಶಿ ಮಾಡಿದ್ದ ಮೆಕ್ಕೆಜೋಳವನ್ನು ಒಂಟಿ ಸಲಗ ಬಂದು ತಿಂದಿರುವ ಘಟನೆ ಜಿಲ್ಲೆಯ ಗಡಿಭಾಗದ ತಮಿಳುನಾಡಿನ ಕೃಷ್ಣಾಪುರದಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿದೆ.
ಕೃಷ್ಣಾಪುರದ ತೋಟದ ಮನೆಯಲ್ಲಿ ವಾಸವಿರುವ ಗುರುಸ್ವಾಮಿ ಎಂಬ ರೈತ ತಾವು ಬೆಳೆದ ಮೆಕ್ಕೆಜೋಳವನ್ನು ಕಟಾವು ಮಾಡಿ ಕಾಳುಗಳನ್ನು ಬೇರ್ಪಡಿಸಿ ಇಟ್ಟಿದ್ದರು.
ಆಹಾರ ಅರಸಿ ಬಂದ ಕಾಡಾನೆಯೊಂದು ಮನೆ ಮುಂದೆ ಟಾರ್ಪಲ್ ಹೊದಿಸಿ ಇಟ್ಟಿದ್ದ ಮೆಕ್ಕೆಜೋಳವನ್ನು ಕಂಡು ಮೆಲ್ಲುತ್ತಾ ನಿಂತಿತ್ತು. ಇದನ್ನು ಕಂಡ ಮನೆ ಮಂದಿ ಹೋಗು, ಹೋಗು ಎಂದು ಕಿರುಚಾಡಿದ್ದಾರೆ. ಮಹಿಳೆಯೊಬ್ಬರು ಹೋಗು ಸ್ವಾಮಿ, ಸಾಕು ಹೋಗು, ತಿಂದಿದ್ದು ಸಾಕು ಹೋಗು ಎಂದು ಪರಿಪರಿಯಾಗಿ ಕೇಳಿಕೊಂಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ರೈತನಿಗೆ ವರುಷ. ಆದರೆ, ಆನೆಗೆ ನಿಮಿಷ ಎಂಬಂತೆ ಈ ಘಟನೆ ನಡೆದಿದೆ. ರೈತರಿಗೆ ನಷ್ಟ ಉಂಟಾಗಿದೆ. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ : ಹಾಸನ : ಜೀಪ್ ರ‍್ಯಾಲಿಯ ವೇಳೆ ಕಾಡಾನೆಯಿಂದ ದಾಳಿ - ಭಯಾನಕ ವಿಡಿಯೋ ವೈರಲ್ - WILD ELEPHANT DEADLY ATTACK