ETV Bharat / state

ಬೆಳಗಾವಿ-ಬೆಂಗಳೂರು, ಬೆಂಗಳೂರು-ಎರ್ನಾಕುಲಂ ನಡುವೆ ಬೇಸಿಗೆ ವಿಶೇಷ ರೈಲುಗಳ ಸಂಚಾರ - SUMMER SPECIAL TRAINS

ಬೇಸಿಗೆ ರಜೆಯಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ನೈಋತ್ಯ ರೈಲ್ವೆ ಬೆಳಗಾವಿ-ಬೆಂಗಳೂರು, ಬೆಂಗಳೂರು-ಎರ್ನಾಕುಲಂ ನಡುವೆ ಬೇಸಿಗೆ ವಿಶೇಷ ರೈಲುಗಳನ್ನು ಓಡಿಸುತ್ತಿದೆ.

Special-trains
ನೈಋತ್ಯ ರೈಲ್ವೆ (ETV Bharat)
author img

By ETV Bharat Karnataka Team

Published : April 11, 2025 at 3:59 PM IST

2 Min Read

ಹುಬ್ಬಳ್ಳಿ: ಬೇಸಿಗೆ ರಜೆಯಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನೈಋತ್ಯ ರೈಲ್ವೆಯು ಬೆಳಗಾವಿ-ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್ಎಂವಿಟಿ) ಬೆಂಗಳೂರು ಮತ್ತು ಎಸ್ಎಂವಿಟಿ ಬೆಂಗಳೂರು-ಎರ್ನಾಕುಲಂ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ರೈಲು ಸಂಚಾರವನ್ನು ಆರಂಭಿಸಿದೆ. ರೈಲು ಸೇವೆಗಳ ವಿವರಗಳು ಈ ಕೆಳಗಿನಂತಿವೆ.

1. ಬೆಳಗಾವಿ-ಎಸ್ಎಂವಿಟಿ ಬೆಂಗಳೂರು ನಡುವೆ ಒಂದು ಟ್ರಿಪ್ ವಿಶೇಷ ರೈಲು (07373/07374) ಸಂಚಾರ: ರೈಲು ಸಂಖ್ಯೆ 07373 ಏಪ್ರಿಲ್ 12, 2025 ರಂದು ಬೆಳಗಾವಿಯಿಂದ ಬೆಳಿಗ್ಗೆ 4:00 ಗಂಟೆಗೆ ಹೊರಟು, ಮಧ್ಯಾಹ್ನ 3:30ಕ್ಕೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ. ಹಿಂತಿರುಗುವ ಮಾರ್ಗದಲ್ಲಿ, ರೈಲು ಸಂಖ್ಯೆ 07374 ಏಪ್ರಿಲ್ 15, 2025 ರಂದು ಎಸ್ಎಂವಿಟಿ ಬೆಂಗಳೂರಿನಿಂದ ಮಧ್ಯಾಹ್ನ 12:00 ಗಂಟೆಗೆ ಹೊರಟು ರಾತ್ರಿ 11:30ಕ್ಕೆ ಬೆಳಗಾವಿಯನ್ನು ತಲುಪಲಿದೆ.

ಈ ರೈಲು ಲೋಂಡಾ, ಅಳ್ನಾವರ, ಧಾರವಾಡ, ಎಸ್ಎಸ್ಎಸ್ ಹುಬ್ಬಳ್ಳಿ, ಎಸ್ಎಂಎಂ ಹಾವೇರಿ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು ಮತ್ತು ಚಿಕ್ಕಬಾಣಾವರ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

2. ಎಸ್ಎಂವಿಟಿ ಬೆಂಗಳೂರು - ಎರ್ನಾಕುಲಂ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ರೈಲು (06575/06576) ಸಂಚಾರ : ರೈಲು ಸಂಖ್ಯೆ 06575 ಏಪ್ರಿಲ್ 12, 2025 ರಂದು ಎಸ್ಎಂವಿಟಿ ಬೆಂಗಳೂರಿನಿಂದ ಸಂಜೆ 4:35ಕ್ಕೆ ಹೊರಟು, ಮರುದಿನ ಬೆಳಗಿನ ಜಾವ 3:00 ಗಂಟೆಗೆ ಎರ್ನಾಕುಲಂ ತಲುಪಲಿದೆ. ಮರು ಪ್ರಯಾಣದಲ್ಲಿ, ರೈಲು ಸಂಖ್ಯೆ 06576 ಏಪ್ರಿಲ್ 14, 2025 ರಂದು ಎರ್ನಾಕುಲಂನಿಂದ ರಾತ್ರಿ 10:00 ಗಂಟೆಗೆ ಹೊರಟು, ಮರುದಿನ ಬೆಳಿಗ್ಗೆ 10:55ಕ್ಕೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ.

ಈ ರೈಲು ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್, ತಿರುಪ್ಪೂರು, ಪೊದನೂರು, ಪಾಲಕ್ಕಾಡ್, ತ್ರಿಶೂರ್ ಮತ್ತು ಅಲುವಾ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿದೆ.

ಎರಡೂ ವಿಶೇಷ ರೈಲುಗಳು ತಲಾ 16 ಬೋಗಿಗಳನ್ನು ಒಳಗೊಂಡಿರುತ್ತವೆ. ಅವುಗಳಲ್ಲಿ 04 ಸಾಮಾನ್ಯ ಸೆಕೆಂಡ್ ಕ್ಲಾಸ್, 08 ಸ್ಲೀಪರ್ ಕ್ಲಾಸ್, 01 ಎಸಿ-2 ಟೈರ್, 01 ಎಸಿ-3 ಟೈರ್ ಮತ್ತು 02 ಎಸ್ಎಲ್ಆರ್​ಡಿ ಬೋಗಿಗಳು ಇರಲಿವೆ.

ಪ್ರಯಾಣಿಕರು ಈ ವಿಶೇಷ ರೈಲುಗಳ ಮುಂಗಡ ಬುಕ್ಕಿಂಗ್ ಮತ್ತು ನಿಲ್ದಾಣಗಳ ಆಗಮನ/ನಿರ್ಗಮನದ ನಿಖರ ಸಮಯದ ಮಾಹಿತಿಗಾಗಿ ಅಧಿಕೃತ ರೈಲ್ವೆ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಅಥವಾ ಹತ್ತಿರದ ರೈಲ್ವೆ ಬುಕ್ಕಿಂಗ್ ಕೌಂಟರ್​ಗಳನ್ನು ಸಂಪರ್ಕಿಸಬಹುದು ಎಂದು ನೈರುತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಹುಬ್ಬಳ್ಳಿ-ವಾಟ್ವಾ ನಡುವೆ ಬೇಸಿಗೆ ವಿಶೇಷ ರೈಲು ಸಂಚಾರ - SPECIAL TRAIN

ETV Bharat Logo

Copyright © 2025 Ushodaya Enterprises Pvt. Ltd., All Rights Reserved.