ETV Bharat / state

ರಾಜ್ಯದಲ್ಲಿ ಏನೇ ಆದರೂ ಆಡಳಿತ ಪಕ್ಷವೇ ಹೊಣೆ, ಈ ಬಗ್ಗೆ ಮೂರು ತನಿಖೆ ಬೇಡ: ಮಾಜಿ ಸಿಎಂ ವೀರಪ್ಪ ಮೊಯ್ಲಿ - VEERAPPA MOILY

ರಾಜ್ಯದಲ್ಲಿ ಏನೇ ಆದರೂ ಆಡಳಿತ ಪಕ್ಷವೇ ಹೊಣೆ. ಇನ್ನು ವಿಪಕ್ಷಗಳು ಇರೋದೇ ರಾಜಕಾರಣ ಮಾಡೋದಕ್ಕೆ. ವಿಪಕ್ಷಗಳು ರಚನಾತ್ಮಕ ಸಲಹೆ ನೀಡಬೇಕು ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.

ವೀರಪ್ಪ ಮೊಯ್ಲಿ
ವೀರಪ್ಪ ಮೊಯ್ಲಿ (ETV Bharat)
author img

By ETV Bharat Karnataka Team

Published : June 14, 2025 at 8:43 PM IST

2 Min Read

ಬೆಂಗಳೂರು: ಕರ್ನಾಟಕದಲ್ಲಿ ಏನೇ ನಡೆದರೂ ಆಡಳಿತದಲ್ಲಿರೋ ಪಕ್ಷವೇ ಹೊಣೆ. ಮೂರು ತನಿಖೆಗಳು ಬೇಡ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.

ಕಾಲ್ತುಳಿತ ಪ್ರಕರಣ ಸಂಬಂಧ ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, 11 ಜನ ಕಾಲ್ತುಳಿತ ಪ್ರಕರಣ ಸಂಬಂಧ ಸಿಎಂಗೆ ಪತ್ರ ಬರೆದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಡೆಯಬಾರದ ಘಟನೆ ನಡೆದಿದೆ. ಇದು ನಡೆಯದಂತೆ ಜಾಗೃತಿ ತೆಗೆದುಕೊಳ್ಳಬೇಕಿತ್ತು. ಸ್ಟೇಡಿಯಂ ಗೇಟ್ ಓಪನ್ ಮಾಡೋದು ತಡ ಮಾಡಿದ್ದಾರೆ. ಅದರಿಂದ ಅವಘಡ ಆಗಿದೆ. KSCA ಹಾಗೂ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಆಗಬೇಕು ಎಂದು ಆಗ್ರಹಿಸಿದ್ದಾರೆ.

ಮಾಜಿ ಸಿಎಂ ವೀರಪ್ಪ ಮೊಯ್ಲಿ (ETV Bharat)

ದುರ್ಘಟನೆ ಆದಾಗ ಗಾಬರಿ ಇಂದ ಆಡಳಿತ ವರ್ತನೆ ಮಾಡಬಾರದು. ಪ್ಯಾನಿಕ್ ರಿಯಾಕ್ಷನ್ ಆಗಬಾರದು. ಆಟಗಾರರನ್ನು ನೋಡಲು ಅಭಿಮಾನಿಗಳು ಬಂದಿದ್ದಾರೆ. ಆದರೆ ಇದರಿಂದ ಮುಂದೆ ಆ ಸ್ಟೇಡಿಯಂನಲ್ಲಿ ಯಾವುದೇ ಮ್ಯಾಚ್ ಆಗಬಾರದು, ಬೇರೆ ಕಡೆ ಆಡಬೇಕು ಅನ್ನೋ ನಿಲುವು ದೊಡ್ಡ ಆಘಾತಕಾರಿ ಬೆಳವಣಿಗೆ. ಇದರಿಂದ ಅಭಿಮಾನಿಗಳಿಗೆ ಬೇಸರ ಆಗಲಿದೆ. ಈ ಬಗ್ಗೆ ಸಿಎಂಗೆ ಪತ್ರ ಬರೆದು ಮನವಿ ಮಾಡಿದ್ದೇನೆ. ಅಂತಾರಾಷ್ಟ್ರೀಯ ಕ್ರಿಕೆಟ್ ಬೋರ್ಡ್ ಅವರ ಜೊತೆ ಮಾತುಕತೆ ಮಾಡಿಕೊಂಡು ಜಾಗೃತಿ ವಹಿಸಬೇಕು. ಕ್ರಿಕೆಟ್ ವರ್ಗಾಯಿಸಬೇಕು ಅನ್ನೋದು ಬಹಳ ದೊಡ್ಡ ಸಂಗತಿ. ಕ್ರಿಕೆಟ್ ಬೋರ್ಡ್, ಸರ್ಕಾರ ಎಕ್ಸಸ್ ರಿಯಾಕ್ಷನ್ ಮಾಡಬಾರದು ಎಂದರು.

ಎರಡು ಮೂರು ತನಿಖೆ ಬೇಡ: ಎರಡು ಮೂರು ತನಿಖೆ ಬೇಡ. ತಕ್ಷಣ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿ ಮಾಡಿ. ಅಮಾನತ್ತು ಮಾಡಿರೋರ ತಪ್ಪು ಇಲ್ಲದಿದ್ರೆ ಅವರ ಅಮಾನತ್ತು ವಾಪಸ್ ಪಡೆಯಬೇಕು. ಇದರಿಂದ ಆಡಳಿತದ ಅಧಿಕಾರಿಗಳಿಗೆ ಡಿಮಾರಲೈಸ್ ಆಗಲಿದೆ. ಕ್ರಿಕೆಟ್ ವರ್ಚಸ್ಸು ಹಾಳಾಗದಂತೆ ಕ್ರಮ ಆಗಬೇಕು. ತೀರಿಕೊಂಡವರ ಆಶಯ ಕೂಡ ಕ್ರಿಕೆಟ್​ಗಾಗಿಯೇ ಇತ್ತು. ಆದರೆ ಕ್ರಿಕೆಟ್ ಅನ್ನೇ ನಾಶ ಮಾಡುವ ಪರಿಸ್ಥಿತಿ ಬರಬಾರದು ಎಂದು ತಿಳಿಸಿದರು.

ಚೀಫ್ ಸೆಕ್ರೆಟರಿ ಅಥವಾ ಅಡಿಷನಲ್ ಚೀಫ್ ಸೆಕ್ರೆಟರಿ ನೇತೃತ್ವದ ಕಮಿಟಿ ಮಾಡಿ ಪರಿಶೀಲನೆ ನಡೆಸಬೇಕು. ಅಧಿಕಾರಿಗಳ ವಿಶ್ವಾಸಕ್ಕೆ ತೆಗೆದುಕೊಂಡಾಗ ಮಾತ್ರ ಅಧಿಕಾರಿಗಳು ನಮ್ಮ ಮೇಲೆ ವಿಶ್ವಾಸ ಇಟ್ಟು ಕೆಲಸ ಮಾಡ್ತಾರೆ. ಬಾಬ್ರಿ ಮಸೀದಿ ಹೊಡೆದ ಬಳಿಕ,‌ ಕರ್ನಾಟಕದಲ್ಲಿ ಕೂಡ ಪರಿಸ್ಥಿತಿ ನಿಯಂತ್ರಣ ಮಾಡಲು ಆಗಿರಲಿಲ್ಲ. ಹಾಗಾಗಿ ಡಿಜಿಪಿ ಅವರನ್ನು ವರ್ಗಾವಣೆ ಮಾಡಿದ್ದೆ‌. ಮತ್ತೆ ಅವರನ್ನು ಡಿಜಿಪಿಯಾಗಿ ವರ್ಗಾವಣೆ ಮಾಡೋದಾಗಿ ಹೇಳಿದ್ದೆ ಎಂದರು.

RCB ಕೂಡ ಮುಂದೆ ಸ್ಪೋರ್ಟಿವ್ ಆಗಿ ತೆಗೆದುಕೊಂಡು ಆಡಬೇಕು. ಸರ್ಕಾರದ ಜವಾಬ್ದಾರಿ ಪ್ರಶ್ನೆ ಅಲ್ಲ. ಕರ್ನಾಟಕದಲ್ಲಿ ಏನೇ ನಡೆದರೂ ಆಡಳಿತದಲ್ಲಿರೋ ಪಕ್ಷವೇ ಹೊಣೆ. ಅದರ ಬಗ್ಗೆ ಹೆಚ್ಚು ವ್ಯಾಖ್ಯಾನ ಮಾಡೋ ಬದಲು. ಹೆಚ್ಚುವರಿ ರಿಯಾಕ್ಷನ್ ಮಾಡಬಾರದು. ವಿಪಕ್ಷಗಳು ಇರೋದೇ ರಾಜಕಾರಣ ಮಾಡೋದಕ್ಕೆ. ವಿಪಕ್ಷಗಳು ರಚನಾತ್ಮಕ ಸಲಹೆ ನೀಡಬೇಕು ಹೊರತು, ಅವರೂ ಪ್ಯಾನಿಕ್ ಮಾಡಬಾರದು ಎಂದು ಸಲಹೆ ನೀಡಿದರು.

ಇದನ್ನೂ ಓದಿ: ತೆರವಾದ ಕೆಎಸ್​ಸಿಎ ಸ್ಥಾನಗಳಿಗೆ ಹಂಗಾಮಿ ನೇಮಕಾತಿ ಸಾಧ್ಯತೆ: ಯಾರಾಗಲಿದ್ದಾರೆ ಕಾರ್ಯದರ್ಶಿ, ಖಜಾಂಚಿ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.