ETV Bharat / state

ಬೀಜ ಬಿತ್ತನೆ ಮಾಡಿ 10 ದಿನ ಕಳೆದರೂ ಮೊಳಕೆಯೊಡೆಯದ ಸೋಯಾಬೀನ್: ಕೃಷಿ ಇಲಾಖೆ ವಿರುದ್ಧ ರೈತರ ಆಕ್ರೋಶ - UNGERMINATED SOYABEANS

ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಇಲಾಖೆ ರೈತರಿಗೆ ಸೋಯಾಬೀನ್ ಬೀಜವನ್ನು ಪೂರೈಸಿತ್ತು. ಇದನ್ನು ತಂದು ಹೊಲದಲ್ಲಿ ಬಿತ್ತಿದರೆ ಕಾಳು ಮೊಳಕೆಯೊಡೆದಿಲ್ಲ. ಇದು ರೈತರ ಆತಂಕಕ್ಕೆ ಕಾರಣವಾಗಿದೆ.

HAVERI  SOYBEAN SEEDS  ಸೋಯಾಬೀನ್ ಬಿತ್ತನೆ  AGRICULTURE
ಬೀಜ ಬಿತ್ತನೆ ಮಾಡಿ 10 ದಿನ ಕಳೆದರೂ ಮೊಳಕೆ ಬರದ ಸೋಯಾಬೀನ್ (ETV Bharat)
author img

By ETV Bharat Karnataka Team

Published : June 11, 2025 at 10:47 AM IST

2 Min Read

ಹಾವೇರಿ: ಜಿಲ್ಲೆಯಲ್ಲಿ ಸೋಯಾಬೀನ್​​​​ ಬಿತ್ತನೆ ಮಾಡಿರುವ ಬೆಳೆಗಾರರು ಬೀಜ ಮೊಳಕೆ ಬರದೆ ಕಂಗಾಲಾಗಿದ್ದಾರೆ. ಕರ್ಜಗಿ ಹೋಬಳಿ ಕೇಂದ್ರದಲ್ಲಿ ವಿತರಿಸಿದ ಬೀಜ ಬಿತ್ತನೆ ಮಾಡಿ 10 ದಿನ ಕಳೆದರೂ ಸೋಯಾಬೀನ್ ಬೀಜ ಜಮೀನಿನಲ್ಲಿ ಮೊಳಕೆ ಒಡೆದಿಲ್ಲ. ಸೋಯಾಬೀನ್ ಬೆಳೆಗಾರರು ಇದರಿಂದ ಹತಾಶೆರಾಗಿದ್ದಾರೆ. ಇದಕ್ಕೆ ಕಾರಣ ಕೃಷಿ ಇಲಾಖೆ ಪೂರೈಸಿದ ಬಿತ್ತನೆ ಬೀಜಗಳೇ ಎಂದು ರೈತರು ಆರೋಪಿಸಿದ್ದಾರೆ.

ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿ ವಿತರಣೆ ಮಾಡಿದ ಬೀಜವನ್ನೇ ರೈತರು ಬಿತ್ತನೆ ಮಾಡಿದ್ದರು. ಆದರೆ ಬಿತ್ತನೆ ಮಾಡಿ 10 ದಿನವಾದರೂ ಸೋಯಾಬೀನ್ ಮೊಳಕೆಯೊಡೆಯದಿರುವುದು ರೈತರಿಗೆ ಆಘಾತ ತಂದಿದೆ. ಕರ್ಜಗಿ, ಕೊಣನತಂಬಗಿ, ದೇವಗಿರಿ, ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರೈತರು ಬಿತ್ತಿದ ಬಹುತೇಕ ಸೋಯಾಬೀನ್​ ಮೊಳಕೆಯೊಡೆದಿಲ್ಲಾ. ಬಿತ್ತನೆ ಮಾಡಿದ 200ಕ್ಕೂ ಅಧಿಕ ರೈತರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿತ್ತನೆ ಮಾಡಿದ 7 ದಿನಕ್ಕೆ ಸೋಯಾಬೀನ್ ಬೀಜ ಮೊಳಕೆ ಒಡೆದು ಭೂಮಿಯಿಂದ ಮೇಲೆ ಕಾಣಿಸಬೇಕಿತ್ತು. ಆದ್ರೆ ನಂಬಿಕೆ ಹುಸಿಯಾಗಿದೆ.

ಬೀಜ ಬಿತ್ತನೆ ಮಾಡಿ 10 ದಿನ ಕಳೆದರೂ ಮೊಳಕೆಯೊಡೆಯದ ಸೋಯಾಬೀನ್ (ETV Bharat)

ಅಲ್ಲೊಂದು ಇಲ್ಲೊಂದು ಮಾತ್ರ ಮೊಳಕೆ ಒಡೆದಿವೆ. ಒಬ್ಬ ರೈತರ ಜಮೀನಿನಲ್ಲಿ ಸಹ ಸೋಯಾಬೀನ್ ಸರಿಯಾಗಿ ಮೊಳಕೆ ಒಡೆದಿಲ್ಲ. ಹೀಗಾಗಿ ಸಾವಿರಾರು ರುಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ್ದ ರೈತರೀಗ ಕಂಗಾಲಾಗಿದ್ದಾರೆ. ಸೂಕ್ತ ಪರಿಹಾರವನ್ನು ನೀಡುವಂತೆ ಆಗ್ರಹಿಸಿದ್ದಾರೆ. ಇತ್ತೀಚಿಗೆ ಉತ್ತಮವಾದ ಮಳೆ ಆಗಿದೆ ಎಂದು ಕೂಲಿಕಾರ್ಮಿಕರಿಂದ ಬಿತ್ತನೆ ಬೀಜ, ಗೊಬ್ಬರ ಹಾಕಿಸಿ ಬಿತ್ತನೆ ಮಾಡಲಾಗಿತ್ತು. ಆದರೆ ಈಗ ಮಳೆ ಕೈಕೊಟ್ಟಿದೆ, ಉತ್ತಮ ಹದ ಇಲ್ಲಾ. ಸರ್ಕಾರ ಕೇವಲ ಕಳಪೆ ಬೀಜಕ್ಕೆ ಬರೀ ಪರಿಹಾರ ನೀಡಿದರೆ ಸಾಲದು ಎಂದು ಈಟಿವಿ ಭಾರತ ಜೊತೆ ಮಾತನಾಡಿದ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದ್ದಾರೆ.

ಭೂಮಿಯನ್ನು ಉತ್ತಮ ಹದ ಮಾಡಲಂತು ಕೃಷಿ ಅಧಿಕಾರಿಗಳಿಗೆ ಸಾಧ್ಯವಿಲ್ಲಾ. ಕನಿಷ್ಠ ಬಿತ್ತನೆ ಬೀಜದ ದರ, ಕೂಲಿಕಾರ್ಮಿಕರಿಗೆ ಮಾಡಿದ ಖರ್ಚು ಮತ್ತು ಗೊಬ್ಬರದ ಖರ್ಚನ್ನು ಸರ್ಕಾರ ಭರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ರೈತರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಹಾವೇರಿ ಕೃಷಿ ಅಧಿಕಾರಿಗಳು ರೈತರ ಜಮೀನಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಯಾವ ಸಮಸ್ಯೆಗೆ ಬೀಜವು ಮೊಳಕೆ ಒಡೆದಿಲ್ಲ ಎಂದು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸೂಕ್ತ ಕಾರಣವನ್ನು ಪತ್ತೆ ಹಚ್ಚುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತಂತೆ ಮೇಲಾಧಿಕಾರಿಗಳಿಗೆ ಬೀಜ ಪೂರೈಸಿದ ಕೃಷಿ ವಿವಿಗೆ ಬಿತ್ತನೆ ಬೀಜದ ಸ್ಯಾಂಪಲ್​ ಕಳಿಸಿಕೊಡಲಾಗಿದೆ.

ಈ ಮುಂಗಾರು ಮಳೆ ಬಿತ್ತನೆಗೆ ಪರಿಹಾರ ನೀಡಲು ಸಾಧ್ಯವಾಗುವುದಿಲ್ಲಾ. ಕೃಷಿ ಇಲಾಖೆ ವಿತರಿಸಿದ ಹೈಬ್ರೀಡ್​ ಕಂಪನಿಯ ಕೆಡಿಎಸ್​ 726 ಲಾಟ್​​ ಬಿತ್ತನೆ ಬೀಜಗಳ ಸರಿಯಾಗಿ ಮೊಳಕೆಯೊಡೆಯದಿರುವುದು ತಾವು ಜಮೀನುಗಳಿಗೆ ತೆರಳಿದಾಗ ಕಂಡುಬಂದಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ರೈತರ ಬೇಡಿಕೆಯಂತೆ ಈ ಕೂಡಲೇ ಪರಿಹಾರ ನೀಡಲು ಸಾಧ್ಯವಿಲ್ಲಾ. ಈ ಬಗ್ಗೆ ಬೀಜ ಪೂರೈಸಿದ ಕಂಪನಿಗೆ ಸಹ ಪರಿಹಾರ ನೀಡಲು ಆಗ್ರಹಿಸಿದ್ದೇವೆ. ಈ ಮಧ್ಯೆ ರೈತರು ಮಾತ್ರ ನೀವು ಯಾವುದಾದರೂ ಪರೀಕ್ಷೆ ಮಾಡಿ ನಮಗೆ ಅಭ್ಯಂತರವಿಲ್ಲಾ. ಆದರೆ ಪ್ರಸ್ತುತ ಮುಂಗಾರು ಮಳೆಯಲ್ಲಿ ಬಿತ್ತನೆ ಮಾಡಲು ಪರಿಹಾರ ನೀಡಿ ಎನ್ನುತ್ತಿದ್ದಾರೆ.

ಇದನ್ನೂ ಓದಿ: ಮಹದಾಯಿ: ಜುಲೈ 21ರೊಳಗೆ ಬಗೆಹರಿಸದಿದ್ದರೆ ಸಚಿವ ಜೋಶಿ ಮನೆ ಎದುರು ಪ್ರತಿಭಟನೆಯ ಎಚ್ಚರಿಕೆ

ಇದನ್ನೂ ಓದಿ: ರಾಯಚೂರು: ಮುಂಗಾರು ಹಂಗಾಮಿಗೆ 5.54 ಲಕ್ಷ ಹೆಕ್ಟೇರ್ ಪ್ರದೇಶದ ಬಿತ್ತನೆ ಗುರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.