ETV Bharat / state

188 ಕೋಟಿ ರೂ.ಗಳ ಸ್ಕ್ರ್ಯಾಪ್ ಮಾರಾಟ ಮಾಡಿ ದಾಖಲೆಯ ಆದಾಯ ಗಳಿಸಿದ ನೈಋತ್ಯ ರೈಲ್ವೆ - SOUTH WESTERN RAILWAY ACHIEVEMENT

188.07 ಕೋಟಿ ರೂ.ಗಳ ಸ್ಕ್ರ್ಯಾಪ್ ಮಾರಾಟ ಮಾಡುವ ಮೂಲಕ ಭಾರತೀಯ ರೈಲ್ವೆಯಲ್ಲಿಯೇ ನೈಋತ್ಯ ರೈಲ್ವೆ ವಿಶೇಷ ಸಾಧನೆ ಮಾಡಿದೆ.

South Western Railway creates record by selling scrap worth Rs 188.07 crore
ನೈಋತ್ಯ ರೈಲ್ವೆ ಸಾಧನೆ (ETV Bharat)
author img

By ETV Bharat Karnataka Team

Published : April 18, 2025 at 3:39 PM IST

2 Min Read

ಹುಬ್ಬಳ್ಳಿ: ನೈಋತ್ಯ ರೈಲ್ವೆ 2024-25ರ ಆರ್ಥಿಕ ವರ್ಷದಲ್ಲಿ ಸ್ಕ್ರ್ಯಾಪ್ ವಿಲೇವಾರಿ ಮೂಲಕ 188.07 ಕೋಟಿ ರೂ ಆದಾಯ ಗಳಿಸಿ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಇದು ನೈಋತ್ಯ ರೈಲ್ವೆಯ ಇತಿಹಾಸದಲ್ಲೇ ಅತ್ಯಧಿಕ ಸ್ಕ್ರ್ಯಾಪ್ ಮಾರಾಟವಾಗಿದೆ.

2022-23ರ ಹಣಕಾಸು ವರ್ಷದ 180.52 ಕೋಟಿ ರೂ.ಗಳ ಹಿಂದಿನ ದಾಖಲೆಯನ್ನು ಮೀರಿಸಿದೆ. ಈ ವರ್ಷ, ಹಿಂದಿನ ದಾಖಲೆಗಿಂತ ಶೇ.4.2ರಷ್ಟನ್ನು ಹೆಚ್ಚಿಸಿದೆ. ಆಸ್ತಿ ನಿರ್ವಹಣೆ ಮತ್ತು ಆದಾಯ ವೃದ್ಧಿಯಲ್ಲಿಯೂ ಸಾಧನೆ ಮಾಡಿದೆ.

ಸ್ಕ್ರ್ಯಾಪ್ ಮಾರಾಟದ ಬಗ್ಗೆ ಮಾಹಿತಿ ನೀಡುತ್ತಿರುವ ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಮಂಜುನಾಥ ಕನಮಡಿ (ETV Bharat)

ಈ ಕುರಿತಂತೆ ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಮಂಜುನಾಥ ಕನಮಡಿ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, "ನಿರುಪಯುಕ್ತ ವಸ್ತುಗಳ ಹರಾಜು, ಸ್ಕ್ರ್ಯಾಪ್ ಹರಾಜು ಮಾಡಲು ನೈರುತ್ಯ ರೈಲ್ವೆಗೆ 160 ಕೋಟಿ ರೂ ಟಾರ್ಗೆಟ್ ನೀಡಲಾಗಿತ್ತು. ನೈರುತ್ಯ ರೈಲ್ವೆಯ ಮೂರು ವಿಭಾಗಗಳಿಂದ 188 ಕೋಟಿ ರೂ.ಗೆ ಮಾರಾಟ ಮಾಡಿದೆ. ಇದು ಟಾರ್ಗೆಟ್ ಮೀರಿದ ಸಾಧನೆ. ಕಳೆದ ವರ್ಷ 180 ಕೋಟಿ ರೂ ಮೌಲ್ಯದ ಸ್ಕ್ರ್ಯಾಪ್ ಮಾರಾಟ ಮಾಡಲಾಗಿತ್ತು. ಈ ವರ್ಷ ಹಿಂದಿನ ದಾಖಲೆಯನ್ನು ಮೀರಿಸಿದೆ".

"ಸ್ಕ್ರ್ಯಾಪ್ ಅಂದ್ರೆ ರೈಲಿನ ಬಿಡಿಭಾಗಳು, ಹಳಿಗಳು, ಹಳಿಗೆ ಜೋಡಿಸಿದ ನಟ್ ಮತ್ತು ಬೋಲ್ಟ್​ಗಳು, ಹಳೆಯದಾದ ವ್ಯಾಗನ್​ಗಳು, ಜಖಂಗೊಂಡಿರುವ ಬೋಗಿಗಳು, ಸೀಟುಗಳು, ಸೀಟ್ ಕವರ್​ಗಳೂ ಸೇರಿದಂತೆ ರೈಲ್ವೆ ‌ನಿಲ್ದಾಣ, ಕಚೇರಿಗಳಲ್ಲಿ ನಿರುಪಯುಕ್ತವಾಗಿ ಬಿದ್ದು ಹಾಗೂ ಜಂಗು ಹಿಡಿದ ವಸ್ತುಗಳನ್ನು ಹರಾಜು ಮೂಲಕ ಮಾರಾಟ ಮಾಡಲಾಗುತ್ತದೆ. ಸ್ಕ್ರ್ಯಾಪ್ ಮಾರಾಟವನ್ನು ಸಂಪೂರ್ಣ ಪಾರದರ್ಶಕವಾಗಿ ಮತ್ತು ನ್ಯಾಯಸಮ್ಮತವಾಗಿ ನಡೆಸುವ ಸಲುವಾಗಿ, ಭಾರತೀಯ ರೈಲ್ವೆಯ ಆನ್ಲೈನ್ ಇ-ಹರಾಜು ವೇದಿಕೆ www.ireps.gov.in ಮೂಲಕ ಸಾರ್ವಜನಿಕ ಹರಾಜುಗಳು ನಡೆಸುತ್ತದೆ. ಯಾರು ಬೇಕಾದರೂ ಬಿಡ್ಡಿಂಗ್​ನಲ್ಲಿ ಪಾಲ್ಗೊಳ್ಳಬಹುದು" ಎಂದರು.

South Western Railway creates record by selling scrap worth Rs 188.07 crore
ನೈಋತ್ಯ ರೈಲ್ವೆ ಇಲಾಖೆಯ ಸ್ಕ್ರ್ಯಾಪ್ (ETV Bharat)

"ಪ್ರಮುಖ ಮುಖ್ಯ ಸಾಮಗ್ರಿಗಳ ವ್ಯವಸ್ಥಾಪಕರಾದ ಮಾಮನ್ ಸಿಂಗ್ ಅವರ ನಿರಂತರ ಮಾರ್ಗದರ್ಶನದಡಿ, ನೈಋತ್ಯ ರೈಲ್ವೆ ತ್ರೈಮಾಸಿಕ ಆಧಾರದ ಮೇಲೆ ತೀವ್ರ ಸ್ಕ್ರ್ಯಾಪ್ ಮ್ಯಾಪಿಂಗ್ ಕಾರ್ಯಾಚರಣೆಯಲ್ಲಿ ಸುಮಾರು 19,745 ಮೆಟ್ರಿಕ್ ಟನ್ ಹಳಿಗಳು ಹಾಗೂ ಫಿಟ್ಟಿಂಗ್​ಗಳು, 4 ಸೇವೆ ಸಾಧ್ಯವಿರುವ ಲೋಕೋಮೋಟಿವ್‌ಗಳು, 38 ವ್ಯಾಗನ್‌ಗಳು, 56 ಜಖಂಗೊಂಡಿರುವ ಬೋಗಿಗಳು, 11,532 ಮೆಟ್ರಿಕ್ ಟನ್ ಕಬ್ಬಿಣ ಸ್ಕ್ರ್ಯಾಪ್ ಮತ್ತು 1,500 ಮೆಟ್ರಿಕ್ ಟನ್ ಕಬ್ಬಿಣೇತರ ಸ್ಕ್ರ್ಯಾಪ್ ಅನ್ನು ಗುರುತಿಸಿ ಮಾರಾಟ ಮಾಡಿದೆ".

"ಇದರಿಂದ ನೈಋತ್ಯ ರೈಲ್ವೆಗೆ ಭಾರೀ ಆದಾಯ ಲಭಿಸುವುದರ ಜೊತೆಗೆ, ನಿಲ್ದಾಣಗಳು, ಹಳಿಗಳು, ಡಿಪೋಗಳು ಮತ್ತು ಶೆಡ್‌ಗಳಲ್ಲಿರುವ ಅನವಶ್ಯಕ ಸ್ಕ್ರ್ಯಾಪ್‌ಗಳನ್ನು ತೆರವುಗೊಳಿಸಿ ಸೌಂದರ್ಯವನ್ನು ಹೆಚ್ಚಿಸುವ ಮತ್ತು ಪರಿಸರಸ್ನೇಹಿ ಪರಿಸರವನ್ನು ಒದಗಿಸುವುದರಲ್ಲಿಯೂ ಸಹ ಸಹಾಯವಾಗಿದೆ. ಇದು ನಿರಂತರ ಪ್ರಕ್ರಿಯೆಯಾಗಿದ್ದು, ಪ್ರಸಕ್ತ ವರ್ಷ ನೈರುತ್ಯ ರೈಲ್ವೆ ಭಾರತೀಯ ರೈಲ್ವೆಯಲ್ಲಿ ಅತೀ ಹೆಚ್ಚು ಸ್ಕ್ರ್ಯಾಪ್ ಮಾರಾಟದಿಂದ ಹೆಚ್ಚು ಆದಾಯ ಗಳಿಸಿದ ವಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ" ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಮಾರಾಟ ತೆರಿಗೆಯಿಂದ ರಾಜ್ಯ ಸರ್ಕಾರ ಸಂಗ್ರಹಿಸುತ್ತಿರುವ ಆದಾಯ ಎಷ್ಟು? - REVENUE FROM PETROL AND DIESEL

ETV Bharat Logo

Copyright © 2025 Ushodaya Enterprises Pvt. Ltd., All Rights Reserved.