ಹುಬ್ಬಳ್ಳಿ: ಯುವಕನೋರ್ವನಿಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಆರೋಪಿಗಳನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹು-ಧಾ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಹೇಳಿದರು.
ನಗರದಲ್ಲಿಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಇಬ್ರಾಹಿಂ ಎಂಬಾತನಿಗೆ ತಮ್ಮ ಗುಂಪಿಗೆ ಸೇರಿಕೊಳ್ಳಲು ಹೇಳಿದ್ದು, ಅದನ್ನು ನಿರಾಕರಿಸಿದ ಕಾರಣಕ್ಕಾಗಿ ಏ. 9ರಂದು ರಂದು ರಾತ್ರಿ 9:30 ಗಂಟೆಗೆ ಹುಬ್ಬಳ್ಳಿಯ ಬಾಕಳೆಗಲ್ಲಿ ಹತ್ತಿರ ಆರೋಪಿಗಳು ಚಾಕುವಿನಿಂದ ಚುಚ್ಚಿ ಕೊಲೆ ಮಾಡಲು ಯತ್ನಿಸಿದ್ದರು ಎಂದಿದ್ದಾರೆ.
ಈ ಕುರಿತು ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಬಂಧಿತರು ಸೆಟ್ಲಮೆಂಟ್ ನಿವಾಸಿ ಪ್ರಜ್ವಲ್ ನಿಟ್ಟೂರು, ಮಂಟೂರು ರೋಡ್ ನಿವಾಸಿ ಮೊಹಮ್ಮದ್ ಹಫೀಜ್ ಶೇಖ್, ಅಕೀಬ್ ಬಳ್ಳಾರಿ, ದತ್ತಾತ್ರೇಯ ಮತ್ತಿಕಟ್ಟಿ, ಬಾಲರಾಜ್ ಬಳ್ಳಾರಿ, ಚರಣ್ ಪ್ರಸಾದ್ ಎಂಬುವರನ್ನು ಬಂಧಿಸಿದ್ದೇವೆ. ಆರೋಪಿಗಳು ಕೃತಕ್ಕೆ ಬಳಸಿದ್ದ ಒಂದು ಸ್ಕೂಟಿ, ಒಂದು ಚಾಕು, ಒಂದು ಮೊಬೈಲ್ ಫೋನ್ ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಬೆಂಗಳೂರು: ಮದ್ಯಪಾನಕ್ಕೆ ಹಣ ಕೊಡಲಿಲ್ಲವೆಂದು ಮಹಿಳೆಗೆ ಚಾಕು ಇರಿದ ವ್ಯಕ್ತಿ - A STRANGER STABBED A WOMAN