ಬೆಂಗಳೂರು: ಇತ್ತೀಚೆಗಷ್ಟೇ ತಮಿಳುನಾಡು ಮೂಲದ ಗಾಯಕಿ ಶಿವಶ್ರೀ ಜೊತೆಗೆ ವಿವಾಹ ಬಂಧನಕ್ಕೆ ಒಳಗಾಗಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.
ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ನವದಂಪತಿಗಳು ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ನಾನು ಮತ್ತು ಶಿವಶ್ರೀ ಪ್ರಧಾನಿ ನರೇಂದ್ರ ಮೋದಿ ಅವರ ಆಶೀರ್ವಾದ ಪಡೆದುಕೊಂಡೆವು. ಅವರು ಎಂದಿನಂತೆ ಪ್ರೀತಿಯಿಂದ ನಮ್ಮನ್ನು ಹರಿಸಿ, ಆಶೀರ್ವಾದಿಸಿದರು. ಇದೇ ವೇಳೆ ನಮ್ಮ ಮದುವೆ ಫೋಟೋಗಳನ್ನು ವೀಕ್ಷಿಸಿದ್ದಾಗಿ ಹೇಳಿದಾಗ ಅಚ್ಚರಿಯೂ ಆಯಿತು ಎಂದರು.
ಮಧ್ವಾಚಾರ್ಯರ ಮೂಲ ಗ್ರಂಥದ ಹಸ್ತಪ್ರತಿ ಉಡುಗೊರೆ: ಪ್ರಧಾನಿ ಭೇಟಿ ಸಮಯದಲ್ಲಿ ನಾವು ಅವರಿಗೆ ಶ್ರೀ ಮಧ್ವಾಚಾರ್ಯರು ರಚಿಸಿದ 750 ವರ್ಷಗಳಷ್ಟು ಹಳೆಯದಾದ ಮೂಲ ಗ್ರಂಥದ ಹಸ್ತಪ್ರತಿಯನ್ನು ಉಡುಗೊರೆಯಾಗಿ ನೀಡಿದ್ದೇವೆ. ಶತಮಾನಗಳ ಈ ಹಸ್ತಪ್ರತಿಯನ್ನು ಅತ್ಯಾಧುನಿಕ ವೇಫರ್ಫೀಚ್ ತಂತ್ರಜ್ಞಾನ ಬಳಕೆ ಮಾಡಿ ಸಂರಕ್ಷಿಸಲಾಗಿದೆ. ವೇಫರ್ಫೀಚ್ ಪೇಟೆಂಟ್ ಪಡೆದ ಅರೆವಾಹಕ ಉತ್ಪಾದನಾ ಆಧಾರಿತ ತಂತ್ರಜ್ಞಾನವಾಗಿದ್ದು, ಅಲ್ಲಿ ಸಿಲಿಕಾನ್ ವೇಫರ್‌ಗಳನ್ನು ಬಳಸಲಾಗುತ್ತದೆ. ಸಿಲಿಕಾನ್‌ನಲ್ಲಿ ಚಿನ್ನ ಅಥವಾ ಅಲ್ಯೂಮಿನಿಯಂ ಲೋಹದ ಶೇಖರಣೆಯನ್ನು ಬಳಸಿಕೊಂಡು ಬರವಣಿಗೆ ಮಾಡಲಾಗುತ್ತದೆ. ಈ ವೇಫರ್‌ಗಳು ಅಗ್ನಿ ನಿರೋಧಕ ಮತ್ತು ಜಲನಿರೋಧಕವಾಗಿದ್ದು ಸಾವಿರ ವರ್ಷಗಳವರೆಗೆ ಸಂರಕ್ಷಣೆ ಮಾಡುತ್ತದೆ. ಚಂದ್ರನ ಮೇಲೆ ಮನುಷ್ಯನು ಮೊದಲ ಬಾರಿ ಇಳಿದ ಸಂದರ್ಭದಲ್ಲಿ ಕೂಡ ಟೈಮ್ ಕ್ಯಾಪ್ಸುಲ್ ಅನ್ನು ಬಿಡಲು ಈ ತಂತ್ರಜ್ಞಾನವನ್ನು ನಾಸಾ ಬಳಸಿಕೊಂಡಿತ್ತು.
ಹಸ್ತಪ್ರತಿ ಸಂರಕ್ಷಣೆಯ ಪ್ರಕ್ರಿಯೆ ಕೇಳಿ ಮಾಹಿತಿ ಪಡೆದರು: ಈ ಪ್ರಾಚೀನ ಹಸ್ತಪ್ರತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉಡುಗೊರೆಯಾಗಿ ನೀಡಲಾಗಿದೆ. ಇದನ್ನು ಆಧುನಿಕ ಮಾದರಿಯ ಪ್ರಾಚೀನ ಹಸ್ತ ಪ್ರತಿ ಸಂರಕ್ಷಿಸುವ ನನ್ನ ಕ್ಷೇತ್ರದಲ್ಲಿರುವ ಪ್ರಕಾಶನ ಎನ್ಜಿಎಂ ಮೂಲಕ ಪ್ರಧಾನಿ ಸಂರಕ್ಷಿಸಲಿದ್ದಾರೆ. ಈ ವೇಳೆ ಪ್ರಧಾನಿ ಈ ಪ್ರಾಚೀನ ಹಸ್ತಪ್ರತಿ ಸಂರಕ್ಷಣೆಯ ಪ್ರಕ್ರಿಯೆ ಕೇಳಿದ್ದು, ಸಂಪ್ರದಾಯಿಕ ಜ್ಞಾನವನ್ನು ಸಂರಕ್ಷಿಸುವ ಅಗತ್ಯದ ಕುರಿತು ವಿವರಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶವೂ ನಮ್ಮ ನಾಗರಿಕತೆಯ ಜ್ಞಾನದ ನಿಧಿಯಾಗಿರುವ ನಮ್ಮ ಪ್ರಾಚೀನ ಹಸ್ತಪ್ರತಿಗಳನ್ನು ಸಂರಕ್ಷಿಸುವ ಧ್ಯೇಯವನ್ನು ಹೊಂದಿದೆ. ಇದಕ್ಕಾಗಿ ಪ್ರಧಾನಮಂತ್ರಿ ಅವರು ಜ್ಞಾನ ಭಾರತ ಮಿಷನ್ ಅನ್ನು ಪ್ರಾರಂಭಿಸಿದ್ದು, ಇದನ್ನು ಬೆಂಬಲಿಸಲು ಬಜೆಟ್ ಹಂಚಿಕೆಗಳನ್ನು ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿರುವುದಕ್ಕೆ ನಾವು ಅದೃಷ್ಟಶಾಲಿಗಳಾಗಿದ್ದೇವೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.
ಪ್ರಾಚೀನ ಹಸ್ತಪ್ರತಿಗೆ ಆಧುನಿಕ ರೂಪ ನೀಡಿ ಸಂರಕ್ಷಿಸುತ್ತಿರುವ ತಾರಾ ಪ್ರಕಾಶನ ಕುರಿತ ಚಿಕ್ಕದಾದ ಮಾಹಿತಿ: 2006ರಲ್ಲಿ ಆರಂಭವಾದ ಈ ತಾರಾ ಪ್ರಕಾಶನದ ಏಕೈಕ ಉದ್ದೇಶ ವೇದ ಜ್ಞಾನವನ್ನು ಸಂರಕ್ಷಿಸುವುದಾಗಿದೆ. 18 ವರ್ಷದಿಂದ ಇದು ಶತಮಾನಗಳ ಪ್ರಾಚೀನಾ ಹಸ್ತಪ್ರತಿಗಳನ್ನು ತಂತ್ರಜ್ಞಾನದ ಮೂಲಕ ದೀರ್ಘಕಾಲದವರೆಗೆ ಕಾಪಾಡುವ ಕಾರ್ಯ ಮಾಡುತ್ತಿದೆ. ಈ ತಂತ್ರಜ್ಞಾನವೂ ಓದಲಾಗದ ತಾಳೆಗರಿ ಹಸ್ತಪ್ರತಿಗಳನ್ನು ಮಲ್ಟಿ ಸ್ಪೆಕ್ಟ್ರಲ್ ಇಮೇಜಿಂಗ್ ಮೂಲಕ ಅರ್ಥೈಸಿಕೊಳ್ಳುತ್ತದೆ. ಹಾಗೇ ಪ್ರಾಚೀನ ಹಸ್ತಪ್ರತಿಗಳನ್ನು ಹೊಸ ರೂಪದಲ್ಲಿ ಮರುಸೃಷ್ಟಿಸಲು ವಿಶೇಷ ಪಾಲಿಮರ್‌ಗಳನ್ನು ತಲಾಧಾರಗಳಾಗಿ ಬಳಸಲು 3-ಡಿ ಮುದ್ರಣ ಮತ್ತು ಸಾವಿರ ವರ್ಷಗಳು ಅಥವಾ ಅದಕ್ಕಿಂತ ಹೆಚ್ಚಿನ ಕಾಲ ಪ್ರಮುಖ ಹಸ್ತಪ್ರತಿಗಳನ್ನು ಉಳಿಸಲು ವೇಫರ್ಫೀಚ್ ತಂತ್ರಜ್ಞಾನ ಹೊಂದಿದೆ.
ಅಮೆರಿಕದ ರೊಚೆಸ್ಟರ್ ಟೆಕ್ನಾಲಾಜಿ ಸಂಸ್ಥೆಯಲ್ಲಿ ಪ್ರೊ ಆಗಿದ್ದ ಪಿಆರ್ ಮುಕುಂದ್ ಸ್ಥಾಪಿಸಿದ್ದಾರೆ. ಐದು ದಶಕಗಳ ತಮ್ಮ ಇಂಜಿನಿಯರಿಂಗ್ ವೃತ್ತಿ ಹೊರತಾಗಿ ಇವರು, ವೇದಿಕ್ ವಿಜ್ಞಾನದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿ ಮತ್ತು ಶಿಕ್ಷಕರಾಗಿದ್ದಾರೆ. ವಿಜ್ಞಾನ ಮತ್ತು ಆಧ್ಯಾತ್ಮವನ್ನು ವೇದಗಳ ಆಲೋಚನೆ ಮತ್ತು ಸಂಸ್ಕೃತಿ ಬೆಸೆಯುವಂತೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ ಎಂದು ಸಂಸದರು ತಿಳಿಸಿದ್ದಾರೆ.
ಇದನ್ನೂ ಓದಿ: ನಿವೃತ್ತ ಡಿಜಿಪಿ ನಿಧನ: ಬೆಂಗಳೂರು ನಗರದ ಮೊದಲ ಟ್ರಾಫಿಕ್ ಸಿಗ್ನಲ್ ಆಗಿದ್ದು ಇವರ ಕಾಲದಲ್ಲಿಯೇ
ಇದನ್ನೂ ಓದಿ: ರಂಜಾನ್ ಹಬ್ಬಕ್ಕೆ ಅತ್ತರ್ ಪರಿಮಳ: ಮುಸ್ಲಿಮರು ಈದ್ಗೆ ಹಚ್ಚುವ ಸುವಾಸಿತ ದ್ರವ್ಯಕ್ಕೆ ಹೆಚ್ಚಿದ ಬೇಡಿಕೆ